ಐಎಸ್‌ಎಲ್ 2020: ಮುಂಬೈ ಸಿಟಿ vs ಚೆನ್ನೈಯಿನ್, Live ಸ್ಕೋರ್

ಐಎಸ್‌ಎಲ್‌ನಲ್ಲಿ ಇಂದು ಮುಂಬೈ ಸಿಟಿ ಹಾಗೂ ಚೆನ್ನೈಯಿನ್ ತಂಡಗಳು ಮುಖಾಮುಖಿಯಾಗಿದೆ. ಈ ಬಾರಿಯ ಟೂರ್ನಿಯ 22ನೇ ಪಂದ್ಯ ಇದಾಗಿದ್ದು ಗೋವಾದ ಜಿಎಂಜಿ ಸ್ಟೇಡಿಯಮ್ ಬಮೂಲಿಮ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಎರಡು ತಂಡಗಳು ಕೂಡ ಏಳನೇ ಐಎಸ್‌ಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ.
ಪಂದ್ಯಗಳ ಗೆಲುವಿನ ಆಧಾರದಲ್ಲಿ ಗಮನಿಸುವುದಾದರೆ ಚೆನ್ನೈಯಿನ್ ತಂಡ ಈ ಲೀಗ್‌ನ ಎರಡನೇ ಅತ್ಯಂತ ಹೆಚ್ಚು ಯಶಸ್ವಿ ತಂಡ ಎನಿಸಿಕೊಂಡಿದೆ. 110 ಪಂದ್ಯಗಳನ್ನು ಆಡಿರುವ ಚೆನ್ನೈಯಿನ್ ತಂಡ 42 ಗೆಲುವು ಸಾಧಿಸಿದೆ. 104 ಪಂದ್ಯಗಳನ್ನು ಆಡಿರುವ ಮುಂಬೈ ಸಿಟಿ ತಂಡ 41 ಗೆಲುವುಗಳೊಂದಿಗೆ 3ನೇ ಸ್ಥಾನದಲ್ಲಿದೆ.
ಮುಂಬೈ ಹಾಗೂ ಚೆನ್ನೈಯಿನ್ ತಂಡಗಳ ಈವರೆಗೆ 12 ಬಾರಿ ಮುಖಾಮುಖಿಯಾಗಿದ್ದು ಚೆನ್ನೈಯಿನ್ ತಂಡ ಮೇಲುಗೈ ಸಾಧಿಸಿದೆ. ಚೆನ್ನೈಯಿನ್ ತಂಡ 6 ಗೆಲುವು ಕಂಡಿದ್ದರೆ ಮುಂಬೈ 4ರಲ್ಲಿ ಗೆದ್ದಿದೆ. ಎರಡು ಪಂದ್ಯಗಳು ಡ್ರಾ ಫಲಿತಾಂಶ ಪಡೆದುಕೊಂಡಿದೆ.
ಚೆನ್ನೈಯಿನ್ ತಂಡದ ಆಡುವ ಬಳಗ
ವಿಶಾಲ್ ಕೈತ್ (ಗೋಲ್‌ಕೀಪರ್), ರೇಗನ್ ಸಿಂಗ್, ಎನೆಸ್ ಸಿಪೋವಿಕ್, ಎಲಿ ಸಬಿಯಾ, ಜೆರ್ರಿ ಲಾಲ್ರಿನ್ಜುವಾಲಾ, ದೀಪಕ್ ಟ್ಯಾಂಗ್ರಿ, ಲಲಿಯನ್ಜುವಾಲಾ ಚಾಂಗ್ಟೆ, ರಾಫೆಲ್ ಕ್ರಿವೆಲ್ಲಾರೊ (ನಾಯಕ), ಫತ್ಖುಲ್ಲೊ ಫತ್ಖುಲೋವ್, ಜರ್ಮನ್‌ಪ್ರೀತ್ ಸಿಂಗ್, ಜಕುಬ್ ಸಿಲ್ವೆಸ್ಟರ್.
ಮುಂಬೈ ಸಿಟಿ ಆಡುವ ಬಳಗ
ಅಮರಿಂದರ್ ಸಿಂಗ್ (ಗೋಲ್‌ಕೀಪರ್ / ನಾಯಕ), ಅಮೆ ರಾನವಾಡೆ, ಮೌರ್ಟಾಡಾ ಫಾಲ್, ಅಹ್ಮದ್ ಜಹೌ, ಹೆರ್ನಾನ್ ಸಂತಾನ, ಹ್ಯೂಗೋ ಬೌಮಸ್, ರೇನಿಯರ್ ಫರ್ನಾಂಡಿಸ್, ರೌಲಿನ್ ಬೊರ್ಗೆಸ್, ವಿಘ್ನೇಶ್ ದಕ್ಷಿಣಮೂರ್ತಿ, ಬಿಪಿನ್ ಸಿಂಗ್, ಆಡಮ್ ಲೆ ಫೊಂಡ್ರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications