For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಲೀಗ್ ವಿನ್ನರ್ಸ್ ಶೀಲ್ಡ್ ಗಾಗಿ ಮುಂಬೈ ಮತ್ತು ಮೋಹನ್ ಬಾಗನ್ ಸೆಣಸು

By Isl Media
isl 2020 21, mumbai city fc vs atk mohun bagan, match 110 preview

ಗೋವಾ, ಫೆಬ್ರವರಿ 27: ಇದಕ್ಕಿಂತ ಉತ್ತಮವಾದ ಮುಖಾಮುಖಿಯೊಂದನ್ನು ನಿರೀಕ್ಷಿಸಲು ಸಾಧ್ಯವೇ? ಇತ್ತಂಡಗಳ ಪ್ಲೇ ಆಫ್ ಸ್ಥಾನ ಖಚಿತವಾಗಿದೆ. ಅಂಕಪಟ್ಟಿಯಲ್ಲೂ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಭಾವುವಾರನ ನಡೆಯಲಿರುವ ಲೀಗ್ ನ ಕೊನೆಯ ಪಂದ್ಯಲ್ಲಿ ಮುಂಬೈ ಅಇಟಿ ಎಫ್ ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಲೀಗ್ ವಿನ್ನರ್ಸ್ ಶೀಲ್ಡ್ ಗಾಗಿ ಮುಖಾಮುಖಿಯಾಗಲಿವೆ. ಲೀಗ್ ನಲ್ಲಿ ಇದುವರೆಗೂ ಸ್ಥಿರ ಪ್ರದರ್ಶನ ತೋರಿದ ಎರಡು ಪಂದ್ಯಗಳ ನಡುವಿನ ಹೋರಾಟವಾಗಿದೆ. ಋತುವಿನುದ್ದಕ್ಕೂ ಅಗ್ರ ಎರಡು ಸ್ಥಾನಗಳನ್ನು ಈ ಎರಡು ತಂಡಗಳೇ ಹಂಚಿಕೊಂಡಿವೆ ಋತುವಿನ ಪ್ರಥಮಾರ್ಧದಲ್ಲಿ ಮುಂಬೈ ಸಿಟಿ ತಂಡ ಅಗ್ರ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಆದರೆ ಅನಿರೀಕ್ಷಿತ ಕುಸಿತದಿಂದಾಗಿ ತಂಡದ ಪ್ರಥಮ ಸ್ಥಾನ ಎಟಿಕೆ ಮೋಹನ್ ಬಾಗನ್ ಪಾಲಾಯಿತು.

ಈಗ ಕೊನೆಯ ಒಂದು ಪಂದ್ಯ ಬಾಕಿ ಉಳಿಸಿದ್ದು, ಮುಂಬೈ ತಂಡಕ್ಕೆ ತನ್ನ ಅಗ್ರ ಸ್ಥಾವನ್ನು ಮರಳಿ ಗಳಿಸಲು ಕೊನೆಯ ಅವಕಾಶ. ಒಂದು ಜಯ ತಂಡವನ್ನು ಅಗ್ರ ಸ್ಥಾನಕ್ಕೆ ಕೊಡೊಯ್ಯುವುದು ಮಾತ್ರವಲ್ಲ, ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ಸ್ಪರ್ಧಿಸಲು ತಂಡಕ್ಕೆ ಅವಕಾಶ ಕಲ್ಪಿಸಲಿದೆ. ಮೂರು ಅಂಕಗಳಿಗಿಂತ ಕಡಿಮೆಯಾದ ಯಾವುದೇ ಫಲಿತಾಂಶವು ಬಾಗನ್ ತಂಡಕ್ಕೆ ಆ ಎಲ್ಲ ಅವಕಾಶವನ್ನು ನೀಡಲಿದೆ.

ಹಿಂದಿನ ಮುಖಾಮುಖಿಯಲ್ಲಿ ಬಾರ್ಥಲೋಮ್ಯೊ ಒಗ್ಬಚೆ ಅವರ ಗೋಲು ಮುಂಬೈಗೆ ಜಯ ತಂದುಕೊಟ್ಟಿತ್ತು. ಆದರೆ ಸರ್ಗಿಯೊ ಲೊಬೆರಾ ಭಾನುವಾರದ ಪಂದ್ಯ ಹಿಂದಿನ ಪಂದ್ಯಕ್ಕಿಂತ ಭಿನ್ನವಾದುದು ಎಂದಿದ್ದಾರೆ."ಮೊದಲ ಪಂದ್ಯದಲ್ಲಿ ನಾವು ಮೂರು ಅಂಕ ಗಳಿಸಿದ್ದೆವು, ಆದರೆ ನಾಳೆ ನಡೆಯುವುದು ಫೈನಲ್ ಪಂದ್ಯ," ಎಂದರು.

"ನಾವು ಗೆಲ್ಲಲೇಬೇಕಾಗಿದೆ, ಮತ್ತು ನಾವು ಈ ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬೇಕಾಗಿದೆ. ನಾವು ಮೊದಲು ಗೆದ್ದು ಮೂರು ಅಂಕ ಗಳಿಸಿದ ಪಂದ್ಯ ನಾಳೆಯದ್ದಲ್ಲ, ಇದು ಫೈನಲ್ ಪಂದ್ಯ," ಎಂದರು. ಈ ಪಂದ್ಯವು ಎಟ್ಯಾಕ್ ಮತ್ತು ಡಿಫೆನ್ಸ್ ಗಳ ನಡುವಿನ ಹೋರಾಟವಾಗಿದೆ. ಮುಂಬೈ 33 ಗೋಲುಗಳನ್ನುಗಳಿಸಿದ್ದು ಉತ್ತಮ ಪರಿವರ್ತನಾ ಸರಾಸಿರಯನ್ನು ಹೊಂದಿದೆ. ಎಟಿಕೆಎಂಬಿ ಉತ್ತಮ ಡಿಫೆನಸ್ಸ್ ಸರಾಸರಿಯನ್ನು ಹೊಂದಿದ್ದು, ಕೇವಲ 13 ಗೋಲುಗಳನ್ನು ನೀಡಿದೆ. ಮತ್ತು 10 ಕ್ಲೀನ್ ಶೀಟ್ ಯಶಸ್ಸು ಕಂಡಿದೆ. ಕೋಚ್ ಲೊಬೆರೊ ಫಲಿತಾಂಶಕ್ಕಿಂತ ಆಟದ ಶೈಲಿಯ ಕಡೆಗೆ ಗಮನ ಹರಿಸಬೇಕು ಎಂದಿದ್ದಾರೆ.

"ಅವರದ್ದು ಉತ್ತಮ ಡಿಫೆನ್ಸ್ ವಿಭಾಗ ಹೊಂದಿದೆ, ಜತೆಯಲ್ಲಿ ಡಿಫೆನ್ಸ್ ಮತ್ತು ಅಟ್ಯಾಕ್ ನಡುವೆ ಹೊಂದಾಣಿಕೆ ಇದೆ,' ನಾವು ನಮ್ಮ ಆಟದ ಶೈಲಿಗೆ ಬದ್ಧರಾಗಿರುವುದು ಪ್ರಮುಖವಾಗಿದೆ. ಏಕೆಂದರೆ ಅವರ ವಿರುದ್ಧ ಗೋಲು ಗಳಿಸುವ ಅವಕಾಶಗಳನ್ನು ನಿರ್ಮಿಸುವುದು ಅಷ್ಟು ಸುಲಭವಲ್ಲ," ಎಂದರು. ಎಟಿಕೆಎಂಬಿ ತಂಡಕ್ಕೆ ಒಂದು ಅಂಕ ಗಳಿಸಿದರೆ ಸಾಕು ಅವರು ಅಗ್ರ ಸ್ಥಾನದಲ್ಲೇ ಉಳಿದುಕೊಳ್ಳುತ್ತಾರೆ. ಆಂಟೋನಿಯೊ ಹಬ್ಬಾಸ್ ಪಡೆ ಜಯದ ಹೊರತು ಬೇರೆ ಯಾವುದರ ಬಗ್ಗೆಯೂ ತೃಪ್ತಿ ಇಲ್ಲ ಎಂದಿದೆ. " ನಾವು ಜಯಕ್ಕಾಗಿ ಸಿದ್ಧತೆ ನಡೆಸಿದ್ದೇವೆ, ಡ್ರಾಕ್ಕಾಗಿ ಅಲ್ಲ. ನಾವು ಅರ್ಹತೆ ಪಡೆದರೆ ಇದೊಂದು ಐತಿಹಾಸಿಕ ಕ್ಷಣ, ಆದರೆ ನಾವು ಪಂದ್ಯವನ್ನು ಇನ್ನೊಂದು ಪಂದ್ಯದಂತೆ ಆಡಬೇಕು. ನಾವು ಮೂರು ಅಂಕಕ್ಕಾಗಿ ಆಡಬೇಕು. ನಾವು ಬಹಳ ಎಚ್ಚರಿಕೆಯಿಂದ ಆಡಬೇಕು," ಎಂದರು.

Story first published: Sunday, February 28, 2021, 9:10 [IST]
Other articles published on Feb 28, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+