ಐಎಸ್‌ಎಲ್: ಮುಂಬೈ, ಗೋವಾ ಪಂದ್ಯ 3-3 ರೋಚಕ ಡ್ರಾ

ಗೋವಾ, ಫೆಬ್ರವರಿ 8: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ನಡೆದ ಅತ್ಯಂತ ರೋಚಕ ಪಂದ್ಯದಲ್ಲಿ ಎಫ್ ಸಿ ಗೋವಾ ಮತ್ತು ಮುಂಬೈ ಸಿಟಿ ತಂಡಗಳು 3-3 ಗೋಲುಗಳಿಂದ ಡ್ರಾ ಸಾಧಿಸಿವೆ. ಮುಂಬೈ ಸಿಟಿ ಎಫ್ ಸಿ ಪರ ಹ್ಯುಗೋ ಬೌಮಾಸ್ (20ನೇ ನಿಮಿಷ), ಲೆ ಫಾಂಡ್ರೆ (26ನೇ ನಿಮಿಷ) ಹಾಗೂ ರೌಲಿನ್ ಬೋರ್ಗಸ್ (90ನೇ ನಿಮಿಷ) ಗೋಲು ಗಳಿಸಿದರೆ, ಗೋವಾ ಪರ ಗ್ಲಾನ್ ಮಾರ್ಟಿನ್ಸ್ (45ನೇ ನಿಮಿಷ), ಐಗೊರ್ ಆಂಗುಲೋ (51ನೇ ನಿಮಿಷ) ಮತ್ತು ಅಂತಿಮ ಕ್ಷಣದಲ್ಲಿ ಇಶಾನ್ ಪಂಡಿತ್ (90ನೇ ನಿಮಿಷ) ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಈ ಫಲಿತಾಂಶದೊಂದಿಗೆ ಗೋವಾ ಮೂರನೇ ಸ್ಥಾನಕ್ಕೆ ಜಿಗಿಯಿತು. ಮುಂಬೈ ಸಿಟಿ ಎಫ್ ಸಿ ಅಗ್ರ ಸ್ಥಾನ ಕಾಯ್ದುಕೊಂಡಿತು. ನಾಳೆ ಎಟಿಕೆ ಮೋಹನ್ ಬಾಗನ್ ಗೆದ್ದರೂ ಎರಡನೇ ಸ್ಥಾನದಲ್ಲೇ ಉಳಿಯಲಿದೆ.
ಮುಂಬೈಗೆ 2-1 ಮುನ್ನಡೆ: ಹ್ಯುಗೋ ಬೌಮಾಸ್ (20ನೇ ನಿಮಿಷ) ಹಾಗೂ ಲೆ ಫಾಂಡ್ರೆ (26ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಪ್ರಥಮಾರ್ಧದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ 2-1 ಗೋಲುಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಮುಂಬೈ ಎರಡು ಗೋಲುಗಳನ್ನು ಗಳಿಸಿರಬಹದು, ಆದರೆ ಗ್ಲಾನ್ ಮಾರ್ಟಿನ್ ಗಳಿಸಿದ ಗೋಲು ಇಂಡಿಯನ್ ಸೂಪರ್ ಲೀಗ್ ನಲ್ಲೇ ನೆನಪಿಟ್ಟುಕೊಳ್ಳುವಂಥದ್ದು. 45ನೇ ನಿಮಿಷದಲ್ಲಿ ಜಾರ್ಜ್ ಆರ್ಟಿಜ್ ನೀಡಿದ ಪಾಸ್ ಗೆ ಬಹಳ ದೂರದಿಂದ ಗುರಿಯಿಟ್ಟು ತುಳಿದ ಮಾರ್ಟಿನ್ ತಂಡಕ್ಕೆ ಆತ್ಮವಿಶ್ವಾಸ ಮರಳಿ ಬರುವಂತೆ ಮಾಡಿದರು. ಫ್ರಾಂಡೆ 9ನೇ ಗೋಲು ಗಳಿಸಿ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ತಾವಿರುವುದಾಗಿ ಮತ್ತೊಮ್ಮೆ ಸಾಬೀತುಪಡಿಸಿದರು. ಮುಂಬೈ ತಣಡ ಮೂರು ಬಾರಿ ಗೋಲು ಗಳಿಸುವ ಉತ್ತಮ ಅವಕಾಶವನ್ನು ಕೈಚೆಲ್ಲಿತ್ತು.ಅಮರಿಂದರ್ ಸಿಂಗ್ ಹೆಡರ್ ಮೂಲಕ ದಾಖಲಾಗುತ್ತಿದ್ದ ಗೋಲೊಂದನ್ನು ತೆಡದು ಗೋವಾದ ಸಮಬಲಕ್ಕೆ ಅಡ್ಡಿಮಾಡಿದರು.
ಬಲಿಷ್ಠರ ಹೋರಾಟ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬಲಿಷ್ಠರೆನಿಸಕೊಂಡಿರುವ ಎಫ್ ಸಿ ಗೋವಾ ಹಾಗೂ ಮುಂಬಯ ಸಿಟಿ ಎಫ್ ಸಿ ತಂಡಗಳು 87ನೇ ಪಂದ್ಯದಲ್ಲಿ ಮುಖಾಮುಖಿಯಾದವು. ಮುಂಬೈ ಸಿಟಿ ತಂಡದ ಕೋಚ್ ಸರ್ಗಿಯೋ ಲೊಬೆರಾ ಎರಡನೇ ಬಾರಿಗೆ ತನ್ನ ಮಾಜಿ ಕ್ಲಬ್ ವಿರುದ್ಧ ಸೆಣಸಲಿದ್ದಾರೆ. ಹಿಂದಿನ ಪಂದ್ಯದಲ್ಲಿ ಮುಂಬೈ ತಂಡ 1-0 ಗೋಲಿನಿಂದ ಜಯ ಗಳಿಸಿತ್ತು. ಇತ್ತಂಡಗಳ ನಡುವೆ ಆರು ಅಂಕಗಳ ಅಂತರವಿದೆ. 15 ಪಂದ್ಯಗಳನ್ನು ಆಡಿರುವ ಮುಂಬೈ ತಂಡ 22 ಗೋಲುಗಳನ್ನು ಗಳಿಸಿ ಲೀಗ್ ನಲ್ಲೇ ಅತಿಹೆಚ್ಚು ಗೋಲು ಗಳಿಸಿದ ತಂಡವೆನಿಸಿದೆ. ಸೆಟ್ ಪೀಸ್ ನಲ್ಲೂ ಅತಿ ಹೆಚ್ಚು (13) ಗೋಲುಗಳನ್ನು ಗಳಿಸಿದ ತಂಡವೆಂಬ ಖ್ಯಾತಿಗೆ ಮುಂಬೈ ಭಾಜನವಾಗಿದೆ.
ಗೋವಾ ತಂಡ 16 ಗೋಲುಗಳನ್ನು ನೀಡಿದ್ದು ಅದರಲ್ಲಿ 12 ಗೋಲುಗಳನ್ನು ಸೆಟ್ ಪೀಸ್ ಮೂಲಕವೇ ನೀಡಿದೆ. ಇದರಿಂದಾಗಿ ಮುಂಬೈ ತಂಡದ ಆತ್ಮವಿಶ್ವಾಸ ಹೆಚ್ಚಿಸಲು ಇದು ಕಾರಣವಾಗಿದೆ. ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿ ಗೋವಾ ಈ ಪಂದ್ಯಕ್ಕೆ ಆಗಮಿಸಿದೆ. ಗೋವಾ ಎಂಟು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ, ಆದರೆ ಗೆದ್ದಿರುವುದು ಮೂರು ಪಂದ್ಯಗಳಲ್ಲಿ ಮಾತ್ರ. ಐದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. 22 ಅಂಕಗಳನ್ನು ಗಳಿಸಿರುವ ಗೋವಾ 5ನೇ ಸ್ಥಾನದಲ್ಲಿದ್ದು, ಇಲ್ಲಿ ಡ್ರಾ ಗಳಿಸಿದರೂ ಮೂರನೇ ಸ್ಥಾನಕ್ಕೆ ಜಿಗಿಯಲಿದೆ. ನಾಯಕ ಎಡು ಬೇಡಿಯಾ ಅಮಾನತಿನ ಅವಧಿ ಮುಗಿಸಿ ತಂಡವನ್ನು ಸೇರಿಕೊಂಡಿದ್ದು, ಇದಿರಂದಾಗಿ ಐಗೊರ್ ಆಂಗುಲೊ ಅವರಿಗೆ ಗೋಲು ಗಳಿಸಲು ಸಹಾಯವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications