ಐಎಸ್‌ಎಲ್: ಮುಂಬೈ ಸಿಟಿ vs ಚೆನ್ನೈಯಿನ್ ಹಣಾಹಣಿ, Live ಸ್ಕೋರ್

ಜಿಎಂಸಿ ಕ್ರೀಡಾಂಗಣದಲ್ಲಿ ಇಂದು ಚೆನ್ನೈಯಿನ್ ಎಫ್‌ಸಿ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಮುಂಬೈ ವಿರುದ್ಧ ಯಾವ ರೀತಿಯಲ್ಲಿ ಜಯ ಗಳಿಸುವುದು ಎಂಬ ಚಿಂತೆ ಚೆನ್ನೈಯಿನ್ ತಂಡದ ಕೋಚ್ ಸಾಬಾ ಲಾಜ್ಲೊ ಅವರನ್ನು ಕಾಡಿದೆ. 13 ಪಂದ್ಯಗಳ ನಂತರವೂ ಚೆನ್ನೈಯಿನ್ ತಂಡ ಗೋಲು ಗಳಿಸಲು ಒದ್ದಾಟ ನಡೆಸುತ್ತಿದೆ.
ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ತಂಡ ಇದುವರೆಗೂ ಗಳಿಸಿದ್ದು ಕೇವಲ 10 ಗೋಲುಗಳು. ಇದು ಎಲ್ಲಾ ಋತುಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ಎಂದರೆ ತಪ್ಪಾಗಲಾರದು. ಈ ಹಿಂದಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ವಿರುದ್ಧ 0-1 ಗೋಲುಗಳ ಅಂತರದಲ್ಲಿ ಸೋಲುವ ಮೂಲಕ ಆಡಿದ 13 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೋಲು ಗಳಿಸಲು ವಿಫಲವಾದಂತಾಗಿದೆ. ಇತರ ಯಾವುದೇ ತಂಡ ಈ ರೀತಿಯ ಕಳಪೆ ಪ್ರದರ್ಶನ ತೋರಿಲ್ಲ.
Live ಸ್ಕೋರ್ ಪಟ್ಟಿ ಹೀಗಿದೆ:
ಚೆನ್ನೈಯಿನ್ ಎಫ್‌ಸಿ ಆಡುವ ಬಳಗ: ವಿಶಾಲ್ ಕೈತ್ (ಗೋಲ್‌ಕೀಪರ್), ರೇಗನ್ ಸಿಂಗ್, ಎನೆಸ್ ಸಿಪೋವಿಕ್, ಎಲಿ ಸಬಿಯಾ (ನಾಯಕ), ಜೆರ್ರಿ ಲಾಲ್ರಿನ್ಜುವಾಲಾ, ಮೆಮೋ ಮೌರಾ, ಜರ್ಮನ್‌ಪ್ರೀತ್ ಸಿಂಗ್, ಲಲಿಯನ್‌ಜುಲಾ ಚಾಂಗ್ಟೆ, ಥೋಯ್ ಸಿಂಗ್, ಜಕುಬ್ ಸಿಲ್ವೆಸ್ಟರ್, ಎಸ್ಮೇಲ್ ಗೊನ್ಕಾಲ್ವ್ಸ್.
ಮುಂಬೈ ಎಫ್‌ಸಿ ಆಡುವ ಬಳಗ: ಅಮೃಂದರ್ ಸಿಂಗ್ (ನಾಯಕ ಮತ್ತು ಗೋಲ್‌ಕೀಪರ್), ಅಮೆ ರಣವಾಡೆ, ಮೌರ್ಟಾಡಾ ಪತನ, ವಿಘ್ನೇಶ್ ದಕ್ಷಿಣಮೂರ್ತಿ, ರೌಲಿನ್ ಬೊರ್ಗೆಸ್, ರೇನಿಯರ್ ಫರ್ನಾಂಡಿಸ್, ಅಹ್ಮದ್ ಜಹೌ, ಹೆರ್ನಾನ್ ಸಂತಾನ, ಹ್ಯೂಗೋ ಬೌಮಸ್, ಬಿಪಿನ್ ಸಿಂಗ್, ಬಾರ್ತಲೋಮೆವ್ ಒಗ್ಬೆಚೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications