For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಪ್ಲೇ ಆಫ್ ಗುರಿಹೊತ್ತ ನಾರ್ಥ್ ಈಸ್ಟ್‌ಗೆ ಚೆನ್ನೈಯಿನ್ ಎದುರಾಳಿ

By Isl Media
isl 2020 21, northeast united vs chennaiyin fc match 98, preview

ಗೋವಾ, ಫೆಬ್ರವರಿ 18: ಎಫ್‌ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ಡ್ರಾಗೆ ತೃಪ್ತಿ ಪಡುವ ಮೂಲಕ ಚೆನ್ನೈಯಿನ್ ಎಫ್ ಸಿ ತಂಡದ ಪ್ಲೇ ಆಫ್ ಕನಸು ನುಚ್ಚುನೂರಾಯಿತು, ಈಗ ಏನಿದ್ದರೂ ಗೌರವಕ್ಕಾಗಿ ಪಂದ್ಯ ಆಡಲಿದೆ. ಆದರೆ ಕೋಚ್ ಸಾಬಾ ಲಾಸ್ಜ್ಲೋ ಉಳಿದಿರುವ ಪಂದ್ಯದಲ್ಲಿ ಜಯ ಗಳಿಸಿ ಋತುವನ್ನು ಗೌರವದೊಂದಿಗೆ ಮುಗಿಸುವ ಗುರಿಹೊಂದಿದ್ದಾರೆ. ಗುರುವಾರ ನಾರ್ಥ್ ಈಸ್ಟ್ ವಿರುದ್ಧದ ಪಂದ್ಯದಲ್ಲಿ ಚೆನ್ನೈಯಿನ್ ಸೆಣಸಲಿದೆ.

"ಈಗ ಎರಡು ಪಂದ್ಯ ಉಳಿದಿದೆ, ಇದು ಪ್ಲೇ ಆಫ್ ಗಾಗಿ ಅಲ್ಲ, ಬದಲಾಗಿ ಉತ್ತಮ ಫಲಿತಾಂಶಕ್ಕಾಗಿ ಆಡಲಿದ್ದೇವೆ. ಜಯಕ್ಕಾಗಿ ನಾವು ಈ ಎರಡು ಪಂದ್ಯದಲ್ಲಿ ನಮ್ಮಿಂದಾದ ಪ್ರಯತ್ನ ಮಾಡಲಿದ್ದೇವೆ,' ಎಂದು ಲಾಲ್ಜ್ಲೋ ಹೇಳಿದ್ದಾರೆ. ಗೋಲುಗಳನ್ನು ಗಳಿಸದಿರುವುದು ಕಳೆದ ಬಾರಿ ಸೆಫೈನಲ್ ತಲುಪಿದ ತಂಡದ ದೊಡ್ಡ ಸಮಸ್ಯೆಯಾಗಿತ್ತು. 234 ಶಾಟ್ ಗಳಲ್ಲಿ 183 ಅವಕಾಶಗಳನ್ನು ತಂಡ ನಿರ್ಮಿಸಿದೆ. ಇದು ಐಎಸ್ಎಲ್ 7ರಲ್ಲಿ ಎರಡನೇ ಸ್ಥಾನವಾಗಿದೆ. ಆದರೆ ಗಳಿಸಿದ್ದು ಮಾತ್ರ 13 ಗೋಲುಗಳು.

5.55 ಗೋಲು ಪರಿವರ್ತನೆಯ ಸರಾಸರಿಯನ್ನು ಹೊಂದಿರುವ ತಂಡ ಯಾವ ರೀತಿಯಲ್ಲಿ ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಕೋಚ್ ಹೇಳಿದ್ದಾರೆ. ಅವರು ತಮ್ಮ ತಂಡದ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಿದೆ ಎಂಬುದರ ಬಗ್ಗೆ ಪ್ರಮಾಣಿಕ ಮಾಹಿತಿ ನೀಡಿದ್ದಾರೆ, "ಪ್ರತಿಯೊಂದು ತಂಡದಲ್ಲೂ ಏರಿಳಿತ ಇದ್ದೇ ಇದೆ. ಪ್ರತಿಯೊಂದು ಋತುವೂ ಸಮಾನವಾಗಿರುವುದಿಲ್ಲ, ನನ್ನ ಪ್ರಕಾರ ಈ ಋತುವಿನಲ್ಲಿ ನಾವು ಉತ್ತಮ ಅಂಶಗಳನ್ನು ಕಲಿತಿದ್ದೇವೆ. ಆದರೆ ಅಫೆನ್ಸ್ ವಿಭಾಗದಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿಲ್ಲ," ಎಂದರು.

"ನಾರ್ಥ್ ಈಸ್ಟ್ ವಿರುದ್ಧದ ಪಂದ್ಯ ಕಠಿಣವೆನಿಸಲಿದೆ. ಆ ತಂಡದಲ್ಲಿ ಉತ್ತಮ ವಿದೇಶಿ ಆಟಗಾರಿದ್ದಾರೆ. ಈ ಪಂದ್ಯದಲ್ಲಿ ನಾವು ಯಾವುದೇ ಅವಕಾಶವನ್ನು ಕೈಚೆಲ್ಲದೆ ಜಯದ ಕಡೆಗೆ ಗುರಿ ಇಟ್ಟಿದ್ದೇವೆ. ನಮ್ಮ ಗುರಿ ಯಶಸ್ವಿ ಫುಟ್ಬಾಲ್ ಆಡುವುದು. ಗೋವಾದ ವಿರುದ್ಧ ಆಡಿದ ರೀತಿಯಲ್ಲೇ ಆಡಬೇಕಾಗಿದೆ." ಎಂದರು.

ಕಳೆದ ಆರು ಪಂದ್ಯಗಳಲ್ಲಿ ಸೋಲು ಕಂಡಿರದ ಖಾಲೀದ್ ಜಮೀಲ್ ಅವರ ತಂಡ ಜಯ ಗಳಿಸಿ ಪ್ಲೇ ಆಫ್ ತಲಪುವ ಗುರಿಹೊಂದಿದೆ. ಖಾಲೀದ್ ಕೋಚ್ ಆಗಿ ಅಂಗಣಕ್ಕಿಳಿದಾಗಿನಿಂದ ತಂಡ ಧನಾತ್ಮಕ ಆಂಶದೊಂದಿಗೆ ಆಡುತ್ತಿದೆ. ಎರಡು ಪಂದ್ಯಗಳಲ್ಲಿ ಡ್ರಾ ಕಂಡು ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದೆ. ಆದರೆ ಈಗ ನಾಲ್ಕು ತಂಡಗಳೂ ಪ್ಲೇ ಆಫ್ ಗೆ ಗುರಿ ಹೊಂದಿರುವುದರಿಂದ ದಾರಿ ಅಷ್ಟು ಸುಗಮವಾಗಿಲ್ಲ. ತಮ್ಮ ಎದುರಾಳಿಯನ್ನು ಹಗುರವಾಗಿ ಕಾಣಬಾರದು ಎಂದು ತಂಡದ ಸಹಾಯಕ ಕೋಚ್ ಆಲಿಸನ್ ಕಾರ್ಸಿಂಟಿನ್ ಎಚ್ಚರಿಸಿದ್ದಾರೆ. "ನಾವು ಅತ್ಯಂತ ತಾಳ್ಮೆಯಿಂದ ಇರಬೇಕು. ನಮ್ಮ ಆಟದ ಕಡೆಗೆ ಗಮನಹರಿಸಬೇಕು. ನಾವು ಪಂದ್ಯದಲ್ಲಿ ಆಕ್ರಮಣಕಾರಿ ಗುಣವನ್ನು ಪ್ರದರ್ಶಿಸಿ ನೂರು ಪ್ರತಿಶತ ಪ್ರಯತ್ನ ನೀಡಬೇಕು," ಎಂದು ಅವರು ಹೇಳಿದ್ದಾರೆ.

Story first published: Thursday, February 18, 2021, 8:56 [IST]
Other articles published on Feb 18, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+