ಐಎಸ್‌ಎಲ್: ಮಿಂಚಲು ಸಜ್ಜಾದ ಬೆಂಗಳೂರಿಗೆ ಒಡಿಶಾ ಎದುರಾಳಿ

ಗೋವಾ, ಜನವರಿ 24: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಬೆಂಗಳೂರು ಎಫ್ ಸಿ ನಿಜವಾಗಿಯೂ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಕಳೆದ ಆರರು ಪಂದ್ಯಗಳಲ್ಲಿ ಜಯ ಕಾಣದ ತಂಡ ಐದರಲ್ಲಿ ಸೋಲು ಕಂಡಿದೆ. ಕೋಚ್ ಕಾರ್ಲ್ಸ್ ಕ್ಬಾಡ್ರಾಟ್ ಅವರ ನಂತರ ಆಗಮಿಸಿದ ಮಧ್ಯಂತರ ಕೋಚ್ ನೌಶಾದ್ ಮೂಸಾ ಅವರಿಗೆ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಾಗಲಿಲ್ಲ. ಈ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಒಡಿಶಾ ವಿರರುದ್ಧ ಜಯ ಗಳಿಸಲು ತಂಡಕ್ಕೆ ಉತ್ತಮ ಅವಕಾಶ.
"ಜಯವೊಂದು ನಮಗೆ ಮೂರು ಅಂಕಗಳನ್ನು ನೀಡಲಿದೆ, ಜತೆಯಲ್ಲಿ ಅಂಕಪಟ್ಟಿಯಲ್ಲಿ ಚೇತರಿಕೆ ಸಿಗಲಿದೆ. ಕೇವಲ ಒಂದು ಪಂದ್ಯದಲ್ಲಿ ಗೆದ್ದರೆ ಸಾಕು, ಅ ಬಳಿಕ ಎಲ್ಲವೂ ಬದಲಾಗುತ್ತೆ," ಎಂದು ಮೂಸಾ ಹೇಳಿದ್ದಾರೆ. ಬೆಂಗಳೂರು ಈಗ ಏಳನೇ ಸ್ಥಾನದಲ್ಲಿದ್ದು, ಈಗಲೂ ನಾಕೌಟ್ ತಲಪುವ ಅವಕಾಶವನ್ನು ಹೊಂದಿದೆ. "ಖಂಡಿತವಾಗಿಯೂ, ಅಂಕಪಟ್ಟಿಯಲ್ಲಿ ನಾವಿರುವ ಸ್ಥಾನ ನಮಗೆ ತಕ್ಕುದಾದುದಲ್ಲ, ಅವರಿಗೆ ಈಗ ಪ್ರತಿಯೊಂದು ಪಂದ್ಯದ ಪ್ರಾಮುಖ್ಯತೆ ಗೊತ್ತಿದೆ. ನಾವು ಧನಾತ್ಮಕವಾಗಿದ್ದೇವೆ. ಅಗ್ರ ಸ್ಥಾನದಲ್ಲಿರುವ ಎರಡು ತಂಡಗಳ ಹೊರತಾಗಿ ಎಲ್ಲರೂ ಹತ್ತಿರವಾಗಿದ್ದಾರೆ. ನಮ್ಮ ಹೋರಾಟ ನಿರಂತರವಾಗಿರಬೇಕು," ಎಂದು ಮೂಸಾ ಹೇಳಿದರು.

ಕೇರಳ ವಿರುದ್ಧ ಅಂತಿಮ ಕ್ಷಣ ಸೋಲು
ಕೇರಳ ವಿರುದ್ಧ ಬೆಂಗಳೂರು ತಂಡ ಉತ್ತಮವಾಗಿ ಆಡಿತ್ತು, ಆದರೆ ಅಂತಿಮ ಕ್ಷಣದಲ್ಲಿ ಗೋಲು ದಾಖಲಿಸಿದ ಕೇರಳ ಜಯ ಕಸಿದುಕೊಂಡಿತು. " ನೀವು ಒಡಿಶಾ ತಂಡದಲ್ಲಿ ಕೇಳಿದರೆ ಬಿಎಫ್ ಸಿ ಉತ್ತಮ ಫಾರ್ಮ್ ನಲ್ಲಿ ಇಲ್ಲವೆಂದೇ ಹೇಳುತ್ತಾರೆ. ನಾವು ಕೇರಳದ ವಿರುದ್ಧ ತೋರಿದ ಪ್ರದರ್ಶನವನ್ನೇ ತೋರಿದರೆ ಒಡಿಶಾ ವಿರುದ್ಧ ಗೆಲ್ಲಬಹುದು. ನಾವು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದರೆ ಪಂದ್ಯ ಗೆಲ್ಲುವುದು ಸುಲಭ," ಎಂದರು.

ಒಡಿಶಾ ಗೆದ್ದಿರುವುದು ಒಂದೇ ಪಂದ್ಯ
ಇದುವರೆಗೂ ಒಡಿಶಾ ಗೆದ್ದಿರುವುದು ಕೇವಲ ಒಂದು ಪಂದ್ಯ. ಕೋಚ್ ಸ್ಟುವರ್ಟ್ ಬಾಕ್ಸ್ಟರ್ ನಾಳೆ ಎರಡನೇ ಜಯ ಗಳಿಸುವ ಗುರಿ ಹೊಂದಿದ್ದಾರೆ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ನಮ್ಮ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಬೇಕಿದೆ ಎಂದಿದ್ದಾರೆ.

ಉತ್ತಮ ಆಟವಾಡಿದರೆ ಪ್ಲೇಆಫ್‌ಗೆ ಹತ್ತಿರ
"ನಾವು ಎಟಿಕೆಎಂಬಿ ಯಂತಹ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದೇವೆ, ಯಾವುದೇ ತಂಡ ವಿರುದ್ಧ ಗೆಲ್ಲುತ್ತೇವೆಂಬ ಆತ್ಮವಿಶ್ವಾಸವಿದೆ, ಆದರೆ ಬೆಂಗಳೂರು ವಿರುದ್ಧವಲ್ಲ. ನಾವು ಅವಕಾಶಗಳನ್ನು ಸದುಪಯೋಗಪಡಿಸಕೊಲ್ಳಬೇಕು. ನಮ್ಮದೇ ಆದ ಆಟವಾಡಬೇಕು. ನಾವು ಆ ಗುಣಮಟ್ಟದ ಆಟವಾಡಿದರೆ ಎಲ್ಲರೊಂದಿಗೆ ಪ್ಲೇ ಆಫ್ ಗೆ ಹತ್ತಿರವಾಗಲಿದ್ದೇವೆ," ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications