Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಗೌರವಕ್ಕಾಗಿ ಆಡುವ ಒಡಿಶಾಕ್ಕೆ ಕೇರಳ ವಿರುದ್ಧ ಗೆಲ್ಲುವ ಹಂಬಲ

ISL 2020 21: odisha fc vs kerala blasters fc, match 90, preview

ಗೋವಾ, ಫೆಬ್ರವರಿ 10: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ಹಂತವನ್ನು ತಲಪುವ ಆಸೆ ಬಹತೇಕ ಕಮರಿರುವ ಸಂದರ್ಭದಲ್ಲಿ ಒಡಿಶಾ ತಂಡ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಿ ಗೌರವ ಕಾಯ್ದುಕೊಳ್ಳುವ ಹಂಬಲದಲ್ಲಿದೆ. ಸತತ ಆರು ಪಂದ್ಯಗಳಲ್ಲಿ ಜಯ ಕಾಣದೆ ಕಂಗಾಲಾಗಿರುವ ಒಡಿಶಾ ಇಡೀ ಋತುವಿನಲ್ಲಿ ಇದುವರೆಗೂ ಗೆದ್ದಿರುವುದು ಕೇವಲ ಒಂದು ಪಂದ್ಯದಲ್ಲಿ ಮಾತ್ರ. ಇದರಿಂದಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಗೆದ್ದಿರುವ ಒಂದು ಪಂದ್ಯ ಕೂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ. ಈ ಗುರುವಾರದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧವೇ ಜಯ ಗಳಿಸಿ ಜಯದ ಸಂಖ್ಯೆಯನ್ನು ಎರಡಕ್ಕೆ ಕೊಂಡೊಯ್ಯುವ ಗುರಿ ಹೊಂದಿದೆ.

ಒಡಿಶಾ ಕೊನೆಯ ಸ್ಥಾನದಲ್ಲಿದ್ದರೆ, 10ನೇ ಸ್ಥಾನದಲ್ಲಿರುವ ಕೇರಳ ಉಳಿದುರುವ ಪಂದ್ಯಗಳಲ್ಲಿ ಜಯ ಗಳಿಸಿ ಅಂತಿಮ ನಾಲ್ಕರ ಸಮೀಪಿಸುವ ಗುರಿಹೊಂದಿದೆ. ಕೇರಳ ತಂಡ ನಾಳೆಯ ಪಂದ್ಯದಲ್ಲಿ ಗೌರವ ಕಾಯ್ದುಕೊಳ್ಳಲು ಎಲ್ಲಾ ರೀತಿಯ ಬಲ ಪ್ರಯೋಗ ಮಾಡಲಿದೆ ಎಂಬುದು ಒಡಿಶಾದ ಕೋಚ್ ಗೆರಾಲ್ಡ್ ಪೇಟನ್ ಆವರಿಗೆ ಚೆನ್ನಾಗಿ ಗೊತ್ತಿದೆ, ಆದರೆ ಹಿಂದಿನ ದಾಖಲೆಗಳನ್ನು ಗಮನಿಸಿದಾಗ ತಮ್ಮ ತಂಡ ಜಯ ಗಳಿಸುತ್ತದೆ ಎಂಬ ಆತ್ಮವಿಶ್ವಾಸ ಅವರಿಗಿದೆ. ಕೇರಳ ತಂಡ ಇದುವರೆಗೂ ಒಡಿಶಾ ತಂಡವನ್ನು ಸೋಲಿಸಿಲ್ಲ.

"ನನ್ನ ಪ್ರಕಾರ ಅವರಲ್ಲಿ ಉತ್ತಮ ಆಟಗಾರಿದ್ದಾರೆ, ಅವರು ಯಾವ ರೀತಿಯಲ್ಲಿ ಆಡಡುತ್ತಾರೆಂಬ ರಣತಂತ್ರ ನಮಗೆ ಗೊತ್ತಿದೆ. ಮತ್ತು ಅವರಿಗೆ ಎಲ್ಲ ವಿಭಾಗಗಳಲ್ಲೂ ನಾವು ಸರಿಹೊಂದಲಿದ್ದೇವೆ. ಅವರು 4-4-2 ಮಾದರಿಯಲ್ಲಿ ಆಡುತ್ತಾರೆ. ನಾವು ಕೂಡಾ ಅದೇ ಮಾದರಿಯಲ್ಲಿ ಆಡಲಿದ್ದೇವೆ. ಅವರ ಜಯದ ಹಾದಿಯನ್ನು ನಾವು ಕಠಿಣಗೊಳಿಸಲಿದ್ದೇವೆ, ಮತ್ತು ನಮ್ಮ ಜಯವನ್ನು ದ್ವಿಗುಣಗೊಳಿಸಲಿದ್ದೇವೆ," ಎಂದರು.

ಕೇರಳ ತಂಡವೂ ಸಂಕಷ್ಟದಲ್ಲಿ

ಕೇರಳ ತಂಡವೂ ಸಂಕಷ್ಟದಲ್ಲಿ

ತಮ್ಮ ಎದುರಾಳಿ ತಂಡ ಯಾವ ರೀತಿಯ ಸಂಕಷ್ಟದಲ್ಲಿದೆಯೋ ಅದೇ ರೀತಿಯಲ್ಲಿ ಕೇರಳ ಕೂಡ ಸಂಕಷ್ಟದಲ್ಲಿದೆ. ಕಲೆದ ನಾಲ್ಕು ಪಂದ್ಯಗಳಲ್ಲಿ ತಂಡ ಜಯ ಕಂಡಿಲ್ಲ. ಅಲ್ಲದೆ ಈ ಋತುವಿನಲ್ಲಿ ಅತಿ ಹೆಚ್ಚು (27) ಗೋಲುಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ಒಡಿಶಾ ಎರಡನೇ ಸ್ಥಾನದಲ್ಲಿದ್ದು, 25 ಗೋಲುಗಳನ್ನು ನೀಡಿದೆ. ಎರಡೂ ತಂಡಗಳೂ ಡಿಫೆನ್ಸ್ ವಿಭಾಗದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಎಲ್ಲರಿಗೂ ತಿಳಿದ ವಿಷಯ. ಈ ಎರಡೂ ತಂಡಗಳ ಹೆಚ್ಚು ಟಾರ್ಗೆಟ್ ಗಳನ್ನು ಎದುರಿಸಿವೆ.

ಇತ್ತೀಚಿನ ಪಂದ್ಯಗಳಲ್ಲಿ ಸ್ಪೂರ್ತಿಯುತ ಪ್ರದರ್ಶನ

ಇತ್ತೀಚಿನ ಪಂದ್ಯಗಳಲ್ಲಿ ಸ್ಪೂರ್ತಿಯುತ ಪ್ರದರ್ಶನ

ಕೇರಳ ತಂಡ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಸ್ಫೂರ್ತಿದಾಯಕ ಪ್ರದರ್ಶನ ತೋರಿತ್ತು, ಆದರೆ ಅದರಿಂದ ಯಾವುದೇ ಪ್ರಯೋಜನ ಪಡೆಯುವಲ್ಲಿ ತಂಡ ಸಫಲವಾಗಲಿಲ್ಲ. ಮುಬೈ ಸಿಟಿಎಫ್ ಸಿ ಹಾಗೂ ಎಟಿಕೆ ಮೋಹನ್ ಬಾಗನ್ ವಿರುದ್ಧದ ಪಂದ್ಯದಲ್ಲಿ ಕೇರಳ ಆರಂಭದಲ್ಲಿ ಗೋಲು ಗಳಿಸಿದರು ಅದರಿಂದ ಪ್ರಯೊಜನ ಪಡೆಯುವಲ್ಲಿ ವಿಫಲವಾಗಿತ್ತು.ಜಯದ ಹಂತದಿಂದ ತಂಡ ಇದುವರೆಗೂ 16 ಅಂಕಗಳನ್ನು ಕಳೆದುಕೊಂಡಿದೆ.

ಪ್ಲೇ ಆಫ್ ಹಾದಿ ಕಠಿಣ

ಪ್ಲೇ ಆಫ್ ಹಾದಿ ಕಠಿಣ

ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯುವುದು ಕಠಿಣ ಸವಾಲು. ಆದರೆ ಕೋಚ್ ಕಿಬು ವಿಕುನಾ ಅವರು ಭರವಸೆಯನ್ನು ಕಳೆದುಕೊಂಡಿಲ್ಲ. "ನಮ್ಮ ಗುರಿ 12 ಅಂಕಗಳನ್ನು ಗಳಿಸುವುದು. ನಾವು ಅದನ್ನು ಹಂತಹಂತವಾಗಿ ಪಡಯಲಿದ್ದೇವೆ. ನಾಳೆ ಅಂಕ ಗಳಿಸಲು ನಮಗೆ ಒಂದು ಉತ್ತಮ ಅವಕಾಶ, ಇದು ನಮಗೆ ಪ್ಲೇ ಆಫ್ ತಲುಪಲು ಉತ್ತಮ ಅವಕಾಶ," ಎಂದು ವಿಕುನಾ ಹೇಳಿದ್ದಾರೆ.

Story first published: Thursday, February 11, 2021, 23:06 [IST]
Other articles published on Feb 11, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+