Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಚೆನ್ನೈಯಿನ್ ಎಫ್‌ಸಿ ವಿರುದ್ಧ ಮೋಹನ್ ಬಾಗನ್‌ಗೆ 1-0 ಅಂತರದ ಗೆಲುವು

ISL 2021-22: match 105 CFC vs ATKMB, ATK Mohun Bagan match won by 1-0 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 105ನೇ ಮುಖಾಮುಖಿ ನಡೆದಿದ್ದು ಈ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಚೆನ್ನೈಯಿನ್ ಎಫ್‌ಸಿ ತಂಡದ ವಿರುದ್ಧ 1-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಎಟಿಕೆ ಮೋಹನ್ ಬಾಗನ್ ತಂಡ ಅಗ್ರ ಎರಡನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಲ್ಲದೆ ಮುಂದಿನ ಹಂತಕ್ಕೆ ಅರ್ಹತೆಯನ್ನೂ ಗಿಟ್ಟಿಸಿಕೊಂಡಿದೆ. ಈ ಮೂಲಕ ಜೆಮ್ಶೆಡ್ಪುರ ಎಫ್‌ಸಿ, ಎಟಿಕೆ ಮೋಹನ್ ಬಾಗನ್ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಎರಡೂ ತಮಡಗಳು ಕೂಡ ಗೆಲ್ಲಲು ಸರ್ವ ಪ್ರಯತ್ನ ನಡೆಸಿತ್ತು. ಆದರೆ ಮೊದಲಾರ್ಧದ ಅಂತ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ ಎಟಿಕೆ ಮೋಹನ್ ಬಾಗನ್ ಗೋಲು ಗಳಿಸುವ ಮೂಲಕ ಮೇಲುಗೈ ಸಾಧಿಸಿತು. ಅದಾದ ಬಳಿಕ ಎರಡೂ ತಂಡಗಳು ಕೂಡ ಗೋಲು ಗಳಿಸಲು ವಿಫಲವಾದವು. ಹೀಗಾಗಿ ಈ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡ 1-0 ಅಂತರದ ಗೆಲುವು ದಾಖಲಿಸಿದೆ. ಎಟಿಕೆ ಮೋಹನ್ ಬಾಗನ್ ತಂಡದ ರಾಯ್ ಕೃಷ್ಣ ಈ ಪಂದ್ಯದ ಏಕೈಕ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.

ಎಟಿಕೆ ಮೋಹನ್ ಬಾಗನ್ ಆರಂಭಿಕ ಪ್ಲೇಯಿಂಗ್ XI: ಅಮರಿಂದರ್ ಸಿಂಗ್ (ಗೋಲ್ ಕೀಪರ್), ಸುಭಾಸಿಶ್ ಬೋಸ್, ಸಂದೇಶ್ ಜಿಂಗನ್, ತಿರಿ, ಪ್ರೀತಮ್ ಕೋಟಾಲ್ (ನಾಯಕ), ದೀಪಕ್ ತಂಗ್ರಿ, ಕಾರ್ಲ್ ಮೆಕ್‌ಹಗ್, ಜೋನಿ ಕೌಕೊ, ಮನ್ವಿರ್ ಸಿಂಗ್, ರಾಯ್ ಕೃಷ್ಣ, ಲಿಸ್ಟನ್ ಕೊಲಾಕೊ.

ಚೆನ್ನೈಯಿನ್ ಎಫ್‌ಸಿ ಆರಂಭಿಕ XI: ಸಮಿಕ್ ಮಿತ್ರಾ (ಗೋಲ್‌ ಕೀಪರ್), ಜೆರ್ರಿ ಲಾಲ್ರಿನ್ಜುವಾಲಾ, ಸ್ಲಾವ್ಕೊ ದಮ್ಜಾನೋವಿಕ್, ಸಲಾಮ್ ಸಿಂಗ್, ರೇಗನ್ ಸಿಂಗ್, ಜರ್ಮನ್ಪ್ರೀತ್ ಸಿಂಗ್, ಎಡ್ವಿನ್ ವಾನ್ಸ್ಪಾಲ್, ವ್ಲಾಡಿಮಿರ್ ಕೋಮನ್ (ನಾಯಕ), ರಹೀಮ್ ಅಲಿ, ನೆರಿಜಸ್ ವಾಲ್ಸ್ಕಿಸ್, ಜಾಬಿ ಜಸ್ಟಿನ್.

Story first published: Friday, October 7, 2022, 15:34 [IST]
Other articles published on Oct 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+