ಐಎಸ್‌ಎಲ್: ಭರ್ಜರಿ ಗೆಲುವು ಸಾಧಿಸಿ ಮುಂಬೈ ಸಿಟಿ ತಂಡಕ್ಕೆ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 62ನೇ ಪಂದ್ಯ ನಡೆಯಿಯಿತು. ಕೊರೊನಾವೈರಸ್‌ನ ಕಾರಣದಿಂದಾಗಿ ಮುಂದೂಡಿಕೆಯಾಗಿದ್ದ ಈ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಹಣಾಹಣಿ ನಡೆಸಿದೆ. ಈ ಸೆಣೆಸಾಟದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ 3-1 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ರೋಚಕ ತಿರುವು ನೀಡಿದ್ದು ಅಗ್ರ ನಾಲ್ಕಕ್ಕೇರುವಲ್ಲಿ ಕೇರಳ ಬ್ಲಾಸ್ಟರ್ಸ್ ಯಶಸ್ವಿಯಾಗಿದೆ.
ಎರಡೂ ತಂಡಗಳಿಗೂ ಮುಂದಿನ ಹಂತಕ್ಕೇರಲು ಅತ್ಯಂತ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡ ಆರಂಭದಿಂದಲೇ ಮೇಲುಗೈ ಸಾಧಿಸಲು ಆರಂಭಿಸಿತ್ತು. ಪಂದ್ಯದ 19ನೇ ನಿಮಿಷದಲ್ಲಿ ಕೆಬಿಎಫ್‌ಸಿ ತಮಡದ ಪರವಾಗಿ ಮೊದಲ ಗೋಲು ದಾಖಲಾಗಿತ್ತು. ಸಹಲ್ ಅಬ್ದುಲ್ ಸಮದ್ ಮೊದಲ ಹಗೋಲು ಗಳಿಸುವ ಮೂಲಕ ತಂಡಕ್ಕೆ ಆರಂಭಿಕ ಮೇಲುಗೈ ಒದಗಿಸಿದ್ದರು. ಅದಾದ ಬಳಿಕ ಮೊದಲಾರ್ಧದ ಮುಕ್ತಾಯದ ಸಂದರ್ಭದಲ್ಲಿ ಕೆಬಿಎಫ್‌ಸಿ ತಮಡಕ್ಕೆ ಎರಡನೇ ಗೋಲು ದಾಖಲಾಯಿತು. ಈ ಮೂಲಕ ಮೊದಲಾರ್ಧದ ಅಂತ್ಯದಲ್ಲಿ ಕೆಬಿಎಫ್‌ಸಿ 2-0 ಅಂತರದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ನಂತರ ಕೇರಳ ಬ್ಲಾಸ್ಟರ್ಸ್ ತಂಡದ ಪರವಾಗಿ 60ನೇ ನಿಮಿಷದಲ್ಲಿ ಮೂರನೇ ಗೋಲು ದಾಖಲಾಯಿತು. ಈ ಮೂಲಕ ಪಂದ್ಯದಲ್ಲಿ 3-0 ಅಂತರದ ಮುನ್ನಡೆಯನ್ನು ಪಡೆಯುವಲ್ಲಿ ತಂಡ ಯಶಸ್ವಿಯಾಯಿತು. ಅದಾದ ಬಳಿಕ ಪಂದ್ಯದ 71ನೇ ನಿಮಿಷದಲ್ಲಿ ಮುಂಬೈ ಸಿಟಿ ಎಫ್‌ಸಿ ತಮಡದ ಪರವಾಗಿ ಕೂಡ ಒಂದು ಗೋಕು ದಾಖಲಾಯಿತು. ಈ ಮೂಲಕ ಗೋಲಿನ ಅಂತರವ ಕಡಿಮೆಯಾಯಿತು. ಆದರೆ ಅಂತಿಮವಾಗಿ ಕೇರಳ ಬ್ಲಾಸ್ಟರ್ಸ್ ತಂಡ ಭರ್ಜರಿ ಜಯ ದಾಖಲಿಸಿದೆ.
ಮುಂಬೈ ಸಿಟಿ ಎಫ್‌ಸಿ: ಮೊಹಮದ್ ನವಾಜ್ (ಗೋಲ್ ಕೀಪರ್), ಮೆಹ್ತಾಬ್ ಸಿಂಗ್, ರಾಹುಲ್ ಭೇಕೆ, ಮೌರ್ತಡಾ ಫಾಲ್ (ನಾಯಕ), ಮಂದರ್ ದೇಸಾಯಿ, ಬ್ರಾಡೆನ್ ಇನ್ಮನ್, ಕ್ಯಾಸಿಯೊ ಗೇಬ್ರಿಯಲ್, ಬಿಪಿನ್ ಸಿಂಗ್, ಲಾಲಿಯನ್ಜುವಾಲಾ ಚಾಂಗ್ಟೆ, ಲಾಲೆಂಗ್ಮಾವಿಯಾ, ಇಗೊರ್ ಅಂಗುಲೊ.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಪ್ರಭುಸುಖಾನ್ ಗಿಲ್ (ಗೋಲ್ ಕೀಪರ್), ರುವಾಹ್ ಹಾರ್ಮಿಪಾಮ್, ಸಂದೀಪ್ ಸಿಂಗ್, ಸಂಜೀವ್ ಸ್ಟಾಲಿನ್, ಮಾರ್ಕೊ ಲೆಸ್ಕೊವಿಕ್, ಲಾಲ್ತತಂಗ ಖೌಲ್ಹ್ರಿಂಗ್, ಆಯುಷ್ ಅಧಿಕಾರಿ, ಸಹಲ್ ಸಮದ್, ಆಡ್ರಿಯನ್ ಲೂನಾ (ನಾಯಕ), ಜಾರ್ಜ್ ಡಯಾಜ್, ಅಲ್ವಾರೊ ವಾಜ್ಕ್ವೆಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications