For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಅಮೋಘ ಗೆಲುವು ಸಾಧಿಸಿದ ಹೈದರಾಬಾದ್ ಎಫ್‌ಸಿ

ISL 2021-22: match 70 SCEB vs HFC, Hyderabad FC match won by 4-0 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 70ನೇ ಮುಖಾಮುಖಿ ನಡೆದಿದೆ. ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಹಾಗೂ ಎಸ್‌ಸಿ ಈಸ್ಟ್ ಬೆಂಗಾಲ್ ತಂಡಗಳು ಮುಖಾಮುಖಿಯಾಗಿದ್ದು ಹೈದರಾಬಾದ್ ಎಫ್‌ಸಿ ಗೋಲಿನ ಸುರಿಮಳೆಗೈದು ಭಾರೀ ಗೆಲುವು ಸಾಧಿಸಿದೆ. ದುರ್ಬಲ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಸವಾರಿ ಮಾಡಿದ ಹೈದರಾಬಾದ್ ಎಫ್‌ಸಿ ಭರ್ಜರಿ 4-0 ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಆರಂಭದಿಂದಲೇ ಸಂಪೂರ್ಣ ಮೇಲುಗೈ ಸಾಧಿಸುತ್ತಾ ಸಾಗಿತ್ತು. 21ನೇ ನಿಮಿಷದಲ್ಇ ಮೊದಲ ಗೋಲು ಗಳಿಸಿದ ಹೈದರಾಬಾದ್ ಎಫ್‌ಸಿ ತಂಡ ಗೋಲಿನ ಖಾತೆ ತೆರೆಯಿತು. ಬಾರ್ತಲೋಮಿವ್ ಓಗ್ಬೆಚೆ ಈ ಗೋಲು ಸಿಡಿಸಿದ್ದರು. ಅದಾದ ಬಳಿಕ ಮೊದಲಾರ್ಧದ ಅಂತ್ಯವಾಗಲು ಇನ್ನೇನು ಕೆಲವೇ ನಿಮಿಷಗಳಿರುವಾಗ ಹೈದರಾಬಾದ್ ಎಫ್‌ಸಿ ತಂಡ ಮತ್ತೆ ಎರಡು ಗೋಲು ಗಳಿಸಿತ್ತು. 44ನೇ ನಿಮಿಷದಲ್ಲಿ ಬಾರ್ತಲೋಮಿವ್ ಓಗ್ಬೆಚೆ ಮತ್ತೊಂದು ಗೋಲು ಸಿಡಿಸುವ ಮೂಲಕ ಮುನ್ನಡೆಯನ್ನು ಹೆಚ್ಚಿಸಿದರು. ಅದಾದ ಒಂದೇ ನಿಮಿಷದಲ್ಲಿ ಅನಿಕೇತ್ ಅನಿಲ್ ಜಾಧವ್ ಮತ್ತೊಂದು ಗೋಲು ಸಿಡಿಸಿದ್ದರು. ಈ ಮೂಲಕ ಮೊದಲಾರ್ಧದ ಅಂತ್ಯವಾಗುವ ವೇಳೆಗೆ ಹೈದರಾಬಾದ್ ಎಫ್‌‌ಸಿ 3-0 ಅಂತರದ ಮುನ್ನಡೆ ಸಾಧಿಸಿತ್ತು.

ನಂತರ ಇದೇ ಪ್ರದರ್ಶನವನ್ನು ದ್ವಿತಿಯಾರ್ಧದಲ್ಲಿಯೂ ಹೈದರಾಬಾದ್ ಎಫ್‌ಸಿ ಮುಂದುವರಿಸಿತು. ಯಾವ ಹಂತದಲ್ಲಿಯೂ ಈಸ್ಟ್ ಬೆಂಗಾಲ್‌ಗೆ ಗೋಲು ಗಳಿಸುವ ಅವಕಾಶ ನೀಡದ ಹೈದರಾಬಾದ್ 74ನೇ ನಿಮಿಷದಲ್ಲಿ ತಂಡದ ನಾಲ್ಕನೇ ಗೋಲು ಗಳಿಸಿತು. ಈ ಗೋಲನ್ನು ಕೂಡ ಬಾರ್ತಲೋಮಿವ್ ಓಗ್ಬೆಚೆ ಗಳಿಸಿದ್ದರು. ಈ ಪಂದ್ಯದಲ್ಲಿ ಓಗ್ಬಚೆ ಗಳಿಸಿದ ಮೂರನೇ ಗೋಲು ಇದಾಗಿದೆ. ಈ ಮೂಲಕ ಓಗ್ಬಚೆ ಹೈದರಾಬಾದ್ ಗೆಲುವಿನಲ್ಲಿ ಮತ್ತೊಮ್ಮೆ ಮಹತ್ತರ ಪಾತ್ರವಹಿಸಿದರು. ಅಂತಿಮವಾಗಿ ಹೈದರಾಬಾದ್ ಎಫ್‌ಸಿ ತಂಡ 4-0 ಅಂತರದ ಗೆಲುವು ಸಾಧಿಸಿದೆ.

ಈ ಗೆಲುವಿನಿಂದಾಗಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಹೈದರಾಬಾದ್ ಎಫ್‌ಸಿ ಮೊದಲ ಸ್ಥಾನಕ್ಕೇರಿದೆ. ಕೇರಳ ಬ್ಲಾಸ್ಟರ್ಸ್, ಜೆಮ್ಶೆಡ್ಪುರ ಎಫ್‌ಸಿ ಹಾಗೂ ಚೆನ್ನೈಯಿನ್ ಎಫ್‌ಸಿ ಅಗ್ರ ನಾಲ್ಕರಲ್ಲಿರುವ ಉಳಿದ ಮೂರು ತಂಡಗಳಾಗಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ಮತ್ತೊಮ್ಮೆ ಕೊನೇ ಸ್ಥಾನವನ್ನು ಪಡೆದುಕೊಂಡಿದೆ.

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ಕೀಪರ್), ಚಿಂಗ್ಲೆನ್ಸನಾ ಸಿಂಗ್, ಆಕಾಶ್ ಮಿಶ್ರಾ, ಆಶಿಶ್ ರೈ, ಜೋವೊ ವಿಕ್ಟರ್ (ನಾಯಕ), ಅನಿಕೇತ್ ಜಾಧವ್, ಹಿತೇಶ್ ಶರ್ಮಾ, ಸೌವಿಕ್ ಚಕ್ರಬರ್ತಿ, ನಿಖಿಲ್ ಪೂಜಾರಿ, ಬಾರ್ತಲೋಮಿವ್ ಓಗ್ಬೆಚೆ, ಜೇವಿಯರ್ ಸಿವೆರಿಯೊ.

ಎಸ್‌ಸಿ ಈಸ್ಟ್ ಬೆಂಗಾಲ್: ಅರಿಂದಮ್ ಭಟ್ಟಾಚಾರ್ಜ (ಗೋಲ್‌ ಕೀಪರ್), ಆದಿಲ್ ಖಾನ್, ಅಂಕಿತ್ ಮುಖರ್ಜಿ, ಫ್ರಾಂಜೊ ಪ್ರೈಸ್, ಡ್ಯಾರೆನ್ ಸಿಡೋಯೆಲ್, ಮೊಹಮ್ಮದ್ ರಫೀಕ್ (ನಾಯಕ), ಸೌರವ್ ದಾಸ್, ಅಮರ್‌ಜಿತ್ ಕಿಯಾಮ್, ಆಂಟೋನಿಯೊ ಪೆರೋಸೆವಿಕ್, ನೌರೆಮ್ ಸಿಂಗ್, ಥೋಂಗ್‌ಕೋಸಿಮ್ ಹಾಕಿಪ್

Story first published: Monday, January 24, 2022, 23:09 [IST]
Other articles published on Jan 24, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+