ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿ vs ಮೋಹನ್ ಬಾಗನ್ ಪಂದ್ಯ ಡ್ರಾದಲ್ಲಿ ಅಂತ್ಯ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 80ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಹಾಗೂ ಮೋಹನ್ ಬಾಗನ್ ತಂಡಗಳು ಮುಖಾಮುಖಿಯಾಗಿದೆ. ಈ ಜಿದ್ದಾಜಿದ್ದಿನ ಪಂದ್ಯದಲ್ಲಿ ಎರಡು ತಮಡಗಳು ಕೂಡ ತೀವ್ರ ಪೈಪೋಟಿ ನಡೆಸಿದ್ದು ಎರಡು ತಂಡಗಳು ಕೂಡ 1-1 ಗೋಲು ದಾಖಲಿಸಿದೆ. ಹೀಗಾಗಿ ಪಂದ್ಯ ಡ್ರಾ ಫಲಿತಾಂಶವನ್ನು ಕಂಡಿದೆ.
ಈ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಗೆಲ್ಲುವ ಅದ್ಭುತ ಅವಕಾಶವಿತ್ತು. ಆದರೆ ತಾನೇ ಮಾಡಿದ ತಪ್ಪಿನಿಂದಾಗಿ ಎಟಿಕೆ ಮೋಹನ್ ಬಾಗನ್ ಡ್ರಾಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದ ಎಟಿಕೆ ಮೋಹನ್ ಬಾಗನ್ ತಂಡ 9ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿತ್ತು. ಡೇವಿಡ್ ವಿಲಿಯಮ್ಸ್ ಈ ಗೋಲು ದಾಖಲಿಸಿದರು. ಈ ಮೂಲಕ ಉತ್ತಮ ಆರಂಭವನ್ನು ಪಡೆಯಿತು. ಆದರೆ 24ನೇ ನಿಮಿಷದಲ್ಲಿ ಪ್ರೀತಮ್ ಕೋಟಲ್ ಓನ್ ಗೋಲು ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಗೋಲನ್ನು ಉಡುಗೊರೆಯಾಗಿ ನೀಡಿದರು. ಹೀಗಾಗಿ ಎರಡು ತಂಡಗಳು ಕೂಡ ತಲಾ ಒಂದು ಗೋಲು ದಾಖಲಿಸಿದವು.
ಇನ್ನು ದ್ವಿತಿಯಾರ್ಧದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯನ್ನು ನಡೆಸಿದವು. ಆದರೆ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ. ಹೆಚ್ಚವರಿ ಅವಧಿಯಲ್ಲಿಯೂ ಗೋಲು ದಾಖಲಾಗದಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಇನ್ನು ಈ ಡ್ರಾ ಫಲಿತಾಂಶದಿಂದಾಗಿ ಮಹತ್ವದ ಬದಲಾವನೆ ಅಂಕಪಟ್ಟಿಯಲ್ಲಿ ಆಗಿಲ್ಲ. ಮುಂಬೈ ಸಿಟಿ ಎಫ್‌ಸಿ ತಂಡ ಒಂದು ಸ್ಥಾನಗಳ ಏರಿಕೆ ಕಂಡಿದ್ದು 6ನೇ ಸ್ಥಾನವನ್ನು ತಲುಪಿದೆ. ಚೆನ್ನೈಯಿನ್ ಎಫ್‌ಸಿ ತಮಡಕುಸಿತ ಕಂಡಿದ್ದು 7ನೇ ಸ್ಥಾನದಲ್ಲಿದೆ. ಎಟಿಕೆ ಮೋಹನ್ ಬಾಗನ್ 5ನೇ ಸ್ಥಾನದಲ್ಲಿಯೇ ಮುಂದಿವರಿದಿದೆ. ಇನ್ನು ಅಗ್ರ ನಾಲ್ಕರ ಪಟ್ಟಿಯಲ್ಲಿ ಹೈದರಾಬಾದ್ ಎಫ್‌ಸಿ ಮೊದಲ ಸ್ಥಾನದಲ್ಲಿದ್ದರೆ ಜೆಮ್ಶೆಡ್ಪುರ ಎಫ್‌ಸಿ ಎರಡನೇ ಸ್ಥಾನದಲ್ಲಿದೆ. ಕೇರಳ ಬ್ಲಾಸ್ಟರ್ಸ್ 3 ಹಾಗೂ ಬೆಂಗಳೂರು ಎಫ್‌ಸಿ ನಾಲ್ಕನೇ ಸ್ಥಾನದಲ್ಲಿದೆ.
ಎಟಿಕೆ ಮೋಹನ್ ಬಾಗನ್: ಅಮರಿಂದರ್ ಸಿಂಗ್ (ಗೋಲ್ ಕೀಪರ್), ಅಶುತೋಷ್ ಮೆಹ್ತಾ, ಪ್ರೀತಮ್ ಕೋಟಾಲ್ (ನಾಯಕ), ತಿರಿ, ಸುಭಾಸಿಶ್ ಬೋಸ್, ಕಾರ್ಲ್ ಮೆಕ್‌ಹಗ್, ದೀಪಕ್ ತಂಗ್ರಿ, ಮನ್ವಿರ್ ಸಿಂಗ್, ಹ್ಯೂಗೋ ಬೌಮಸ್, ಲಿಸ್ಟನ್ ಕೊಲಾಕೊ, ಡೇವಿಡ್ ವಿಲಿಯಮ್ಸ್
ಮುಂಬೈ ಸಿಟಿ ಎಫ್‌ಸಿ: ಮೊಹಮದ್ ನವಾಜ್ (ಗೋಲ್ ಕೀಪರ್), ಮೆಹ್ತಾಬ್ ಸಿಂಗ್, ಮೌರ್ತಡಾ ಫಾಲ್ (ನಾಯಕ), ರಾಹುಲ್ ಭೇಕೆ, ಮಂದರ್ ದೇಸಾಯಿ, ಲಾಲೆಂಗ್ಮಾವಿಯಾ, ಅಹ್ಮದ್ ಜಹೌಹ್, ಕ್ಯಾಸಿಯೊ ಗೇಬ್ರಿಯಲ್, ವಿಕ್ರಮ್ ಸಿಂಗ್, ಬಿಪಿನ್ ಸಿಂಗ್, ಡಿಯಾಗೋ ಮಾರಿಸಿಯೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications