Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ನಾರ್ಥ್‌ಈಸ್ಟ್ ಯುನೈಟೆಡ್‌ಗೆ ಸೋಲುಣಿಸಿದ ಕೇರಳ ಬ್ಲಾಸ್ಟರ್ಸ್

ISL 2021-22: match 81 NEUFC vs KBFC, Kerala blasters match won By 2-1 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 81ನೇ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ನಾರ್ಥ್ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಕೇರಳ ಬ್ಲಾಸ್ಟರ್ಸ್ ತಂಡ ಸುಲಭ ಗೆಲುವು ಸಾಧಿಸಿದೆ. ಅಂತಿಮ ಕ್ಷಣದಲ್ಲಿ ನಾರ್ರ್ರ್ಥೀಸ್ಟ್ ಯುನೈಟೆಡ್ ಗೋಲು ಗಳಿಸಲು ಸಫಲವಾಯಿತಾದರೂ ಕೇರಳ ಬ್ಲಾಸ್ಟರ್ಸ್ ತಂಡ 2 ಗೋಲುಗಳಿಂದ ಮುನ್ನಡೆ ಸಾಧಿಸಿಕರುವ ಕಾರಣ ಭರ್ಜರಿ ಗೆಲುವು ಸಾಧಿಸಿದೆ.

ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯನ್ನು ನಡೆಸಿದ್ದವು. ಇದರ ಪರಿಣಾಮವಾಗಿ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿದೆ. ಆದರೆ ದ್ವಿತಿಯಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ತನ್ನ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು. ಪಂದ್ಯದ 62ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ಪರವಾಗಿ ಮೊದಲ ಗೋಲು ದಾಖಲಾಯಿತು.

ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯನ್ನು ನಡೆಸಿದ್ದವು. ಇದರ ಪರಿಣಾಮವಾಗಿ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿದೆ. ಆದರೆ ದ್ವಿತಿಯಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ತನ್ನ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು. ಪಂದ್ಯದ 62ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ಪರವಾಗಿ ಮೊದಲ ಗೋಲು ದಾಖಲಾಯಿತು.

ಜಾರ್ಜ್ ಡಯಾಜ್ ಕೇರಳ ಪರವಾಗಿ 62ನೇ ನಿಮೊಇಷದಲ್ಲಿ ಮೊದಲ ಗೋಲು ದಾಖಲಿಸಿದರು. ಅದಾದ ಬಳಿಕ 82ನೆ ನಿಮಿಷದಲ್ಲಿ ಅಲ್ವಾರೊ ವಾಜ್ಕ್ವೆಜ್ ತಂಡದ ಪರವಾಗಿ ಮತ್ತೊಂದು ಗೋಲು ಸಿಡಿಸಿದರು. ಅಲ್ಲಿಗೆ ಕೇರಳ ಬ್ಲಾಸ್ಟರ್ಸ 2-0 ಅಂತರದ ಮುನ್ನಡೆ ಸಾಧಿಸಿತ್ತು. ನಂತರ ಪಂದ್ಯದ ಅಂತಿಮ ನಿಮಿಷದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಕೂಡ ಒಂದು ಗೋಲು ಸಿಡಿಸಿತು. ಆದರೆ ಇದರಿಂದಾಗಿ ಕೆಬಿಎಫ್‌ಸಿಗೆ ಯಾವುದೇ ಹಿನ್ನಡೆಯಾಗಲಿಲ್ಲ. ಭರ್ಜರಿ 2-1 ಅಂತರದಿಂದ ಗೆಲುವು ಸಾಧಿಸಿದೆ.

ಈ ಗೆಲುವಿನಿಂದೊಗೆ ಕೇರಳ ಬ್ಲಾಸ್ಟರ್ಸ್ ಅಂಕಪಟ್ಟಿಯ್ಲಲಿ ಒಂದು ಸ್ಥಾನಗಳ ಏರಿಕೆ ಕಂಡಿದೆ. 2ನೇ ಸ್ಥಾನದಲ್ಲಿದ್ದ ಜೆಮ್ಶೆಡ್ಪುರ ಎಫ್‌ಸಿ ತಂಡವನ್ನು ಹಿಂದಿಕ್ಕಿರುವ ಕೇರಳ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ಆರಂಭಿಕ XI: ಸುಭಾಸಿಶ್ ರಾಯ್ (ನಾಯಕ/ ಗೋಲ್‌ ಕೀಪರ್), ಮಶೂರ್ ಶೆರೀಫ್, ಝಕಾರಿಯಾ ಡಿಯಲ್ಲೊ, ಗುರ್ಜಿಂದರ್ ಕುಮಾರ್, ಮೊಹಮ್ಮದ್ ಇರ್ಷಾದ್, ಜೋ ಜೊಹೆರ್ಲಿಯಾನಾ, ಪ್ರಗ್ಯಾನ್ ಗೊಗೊಯ್, ಹೆರ್ನಾನ್ ಸಂತಾನಾ, ಮಾರ್ಕೊ ಸಹನೆಕ್, ಸುಹೇರ್ ವಡಕ್ಕೆಪೀಡಿಕಾ, ಮಾರ್ಸೆಲೊ ಪೆರೇರಾ.

ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಆರಂಭಿಕ XI: ಪ್ರಭುಸುಖಾನ್ ಗಿಲ್ (ಗೋಲ್‌ ಕೀಪರ್), ರುಯಿವಾ ಹಾರ್ಮಿಪಾಮ್, ಮಾರ್ಕೊ ಲೆಸ್ಕೋವಿಕ್, ನಿಶು ಕುಮಾರ್, ಹರ್ಮನ್ಜೋತ್ ಖಬ್ರಾ, ಜೀಕ್ಸನ್ ಸಿಂಗ್, ಆಯುಷ್ ಅಧಿಕಾರಿ, ಆಡ್ರಿಯನ್ ಲೂನಾ (ನಾಯಕ), ಸಹಲ್ ಸಮದ್, ಅಲ್ವಾರೊ ವಾಜ್ಕ್ವೆಜ್, ಜಾರ್ಜ್ ಡಯಾಜ್.

Story first published: Friday, February 4, 2022, 22:12 [IST]
Other articles published on Feb 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+