ಐಎಸ್‌ಎಲ್: ಈಸ್ಟ್ ಬೆಂಗಾಲ್ ವಿರುದ್ಧ ಗೆದ್ದು ಬೀಗಿದ ಒಡಿಶಾ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸೋಮವಾರ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಒಡಿಶಾ ಎಫ್‌ಸಿ ತಂಡ 2-1 ಅಂತರದಿಂದ ರೋಚಕ ರೀತಿಯಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಒಡಿಶಾ ಎಫ್‌ಸಿ ಅಂಕಪಟ್ಟಿಯಲ್ಲಿ ಎರಡು ಸ್ಥಾನಗಳ ಏರಿಕೆ ಕಂಡಿದ್ದು 6ನೇ ಸ್ಥಾನವನ್ನು ತಲುಪಿದೆ.
ಪಂದ್ಯದ ಆರಂಭದಿಂದ ಎರಡು ತಮಡಗಳು ಕೂಡ ಸಾಕಷ್ಟು ಪೈಪೋಟಿಯನ್ನು ನಡೆಸುತ್ತಲೇ ಬಂದಿತ್ತು. ಆದರೆ ಮೊದಲಾರ್ಧದಲ್ಲಿ ಒಡಿಶಾ ಎಫ್‌ಸಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. 23ನೇ ನಿಮಿಷದಲ್ಲಿ ಜೊನಾಥಸ್ ಕ್ರಿಸ್ಟಿಯನ್ ಒಡಿಶಾ ಎಫ್‌ಸಿ ಪರ ಗೋಲು ದಾಖಲಿಸಿ ಆರಂಭಿಕ ಮೇಲುಗೈ ಒದಗಿಸಿದರು. ಆದರೆ ಮೊದಲಾರ್ಧದಲ್ಲಿ ಈಸ್ಟ್ ಬೆಂಗಾಲ್ ಗೋಲು ಗಳಿಸಲು ವಿಫಲವಾಗಿತ್ತು. ಹೀಗಾಗಿ ಮೊದಲಾರ್ಧದದ ಅಂತ್ಯಕ್ಕಾಗುವ ವೇಳೆಗೆ 1-0 ಅಂತರದಿಂದ ಒಡಿಶಾ ಮೇಲುಗೈ ಸಾಧಿಸಿತ್ತು.
ಆದರೆ ದ್ವಿತಿಯಾರ್ಧದಲ್ಲಿ ಈಸ್ಟ್ ಬೆಂಗಾಲ್ ಕೂಡ ತನ್ನ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಆಂಟೋನಿಯೊ ಪೆರೊಸೆವಿಕ್ 64ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ಪರ ಗೋಲು ದಾಖಲಿಸುವ ಮೂಲಕ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ ಅದಾದ 11ನೇ ನಿಮಿಷದಲ್ಲಿ ಎದುರಾಳಿ ಒಡಿಶಾ ಎಫ್‌ಸಿ ಮತ್ತೊಮ್ಮೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಜೇವಿಯರ್ ಹೆರ್ನಾಂಡೆಜ್ 75ನೇ ನಿಮಿಷದಲ್ಲಿ ಅದ್ಭುತ ಗೋಲು ದಾಖಲಿಸುವ ಮೂಲಕ ತಂಡ ಮತ್ತೊಮ್ಮೆ ಮೇಲುಗೈ ಸಾಧಿಸುವಂತಾಯಿತು. ಭರ್ಜರಿ ಗೆಲುವಿಗೆ ಕಾರಣವಾದರು.
ಇನ್ನು ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಒಡಿಶಾ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಎರಡು ಸ್ಥಾನಗಳ ಏರಿಕೆ ಕಂಡಿದ್ದು 6ನೇ ಸ್ತಾನವನ್ನು ತಲುಪಿದೆ. ಎಟಿಕೆ ಮೋಹನ್ ಬಾಗನ್ ಹಾಘೂ ಚೆನ್ನೈಯಿನ್ ಎಫ್‌ಸಿ ತಂಡಗಳು ಒಂದೊಂದು ಸ್ಥಾನ ಕುಸಿದಿದೆ. ಇನ್ನು ಈ ಪಂದ್ಯದಲ್ಲಿ ಸೋಲು ಅನುಭವಿಸಿರುವ ಎಸ್‌ಸಿ ಈಸ್ಟ್ ಬೆಂಗಾಲ್ ಸೋಲಿನ ನಂತರವೂ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಈಸ್ಟ್ ಬೆಂಗಾಲ್ ಈ ಬಾರಿಯ ಟೂರ್ನಿಯಲ್ಲಿ ಕೇವಲ ಒಂದು ಗೆಲುವನ್ನು ಮಾತ್ರವೇ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಒಡಿಶಾ ಎಫ್‌ಸಿ: ಅರ್ಷದೀಪ್ ಸಿಂಗ್ (ಗೋಲ್ ಕೀಪರ್), ಲಾಲ್ರುಅತ್ತರಾ, ಗೌರವ್ ಬೋರಾ, ವಿಕ್ಟರ್ ಮೊಂಗಿಲ್ (ನಾಯಕ), ಸಾಹಿಲ್ ಪನ್ವಾರ್, ಪಾಲ್ ರಾಮ್‌ಫಾಂಗ್‌ಜೌವಾ, ಐಸಾಕ್ ಚಕ್ಚುವಾಕ್, ಜೇವಿಯರ್ ಹೆರ್ನಾಂಡೆಜ್, ಜೆರ್ರಿ ಮಾವಿಹ್ಮಿಂಗ್‌ತಂಗ, ಅರಿದೈ ಸೌರೆಜ್ ಮತ್ತು ಜೊನಾಥಸ್ ಕ್ರಿಸ್ಟಿಯನ್.
ಎಸ್‌ಸಿ ಈಸ್ಟ್ ಬೆಂಗಾಲ್: ಶಂಕರ್ ರಾಯ್ (ಗೋಲ್ ಕೀಪರ್), ಹೀರಾ ಮೊಂಡಲ್, ಆದಿಲ್ ಖಾನ್ (ನಾಯಕ), ಫ್ರಾಂಜೊ ಪ್ರೈಸ್, ಹುಯಿಡ್ರೊಮ್ ಸಿಂಗ್, ವಹೆಂಗ್‌ಬಾಮ್ ಲುವಾಂಗ್, ಸೌರವ್ ದಾಸ್, ಡ್ಯಾರೆನ್ ಸಿಡೊಯೆಲ್, ನವೊರೆಮ್ ಸಿಂಗ್, ಮಾರ್ಸೆಲೊ ರಿಬೈರೊ ಮತ್ತು ಆಂಟೋನಿಯೊ ಪೆರೊಸೆವಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications