ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದ ಜೆಮ್ಶೆಡ್ಪುರ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇವತ್ತು 87ನೇ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. 3-0 ಅಂತರದಿಂದ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಕೇರಳ ಬ್ಲಾಸ್ಟರ್ಸ್ ಸದ್ಯ ಅಗ್ರ ನಾಲ್ಕರಿಂದ ಹೊರಬಿದ್ದಿದ್ದು ಜೆಮ್ಶೆಡ್‌ಪುರ ಎಫ್‌ಸಿ ಐದನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಪಂದ್ಯದ ಮೊದಲಾರ್ಧದ ಬಹುತೇಕ ಅವಧಿ ಗೋಲು ರಹಿತವಾಗಿಯೇ ಕಳೆದಿತ್ತು. ಆದರೆ ಮೊದಲಾರ್ಧದ ಅಂತಿಮ ಹಂತದಲ್ಲಿ ಜೆಮ್ಶೆಡ್ಪುರ ಎಫ್‌ಸಿ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಪೆನಾಲ್ಟಿ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಜೆಮ್ಶೆಡ್ಪುರ ಎಫ್‌ಸಿ ಮೊದಲ ಗೋಲು ಗಳಿಸಿತ್ತು.
ಅದಾದ ಬಳಿಕ ಮತ್ತೊಂದು ಪೆನಾಲ್ಟಿ ಅವಕಾಶ ಪಡೆದುಕೊಂಡ ಜೆಮ್ಶೆಡ್ಪುರ ಎಫ್‌ಸಿ ಎರಡನೇ ಗೋಲು ಗಳಿಸಲು ಯಶಸ್ವಿಯಾಗಿತ್ತು. ಈ ಎರಡು ಗೋಲುಗಳನ್ನು ಕೂಡ ಗ್ರೇಗ್ ಸ್ಟೆವರ್ಟ್ ಸಿಡಿಸಿದ್ದರು. ಅದಾದ ಬಳಿಕ ಐದೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಫ್‌ಸಿ ಮೂರನೇ ಗೋಲು ಸಿಡಿಸುವಲ್ಲಿ ಯಶಸ್ವಿಯಾಯಿತು. ಡೇನಿಯಲ್ ಚುಕ್ವು ಈ ಗೋಲು ಸಿಡಿಸಿದ್ದರು. ಈ ಮೂಲಕ ಜೆಮ್ಶೆಡ್ಪುರ ಎಫ್‌ಸಿ ಪಂದ್ಯದಲ್ಲಿ 3-0 ಅಂತರದಿಂದ ಗೆಲುವು ಸಾಧಿಸಿದೆ.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಪ್ರಭುಸುಖಾನ್ ಗಿಲ್ (ಗೋಲ್‌ಕೀಪರ್), ದೇನೆಚಂದ್ರಮ್ ಮೈಟೆಯಿ, ಮಾರ್ಕೊ ಲೆಸ್ಕೊವಿಕ್, ಎನೆಸ್ ಸಿಪೊವಿಕ್, ಹರ್ಮನ್ಜೋತ್ ಖಬ್ರಾ, ಲಾಲ್ತತಂಗ ಖೌಲ್ಹ್ರಿಂಗ್, ಸಹಲ್ ಸಮದ್, ಜೀಕ್ಸನ್ ಸಿಂಗ್, ವಿನ್ಸಿ ಬ್ಯಾರೆಟ್ಟೊ, ಆಡ್ರಿಯನ್ ಲೂನಾ (ನಾಯಕ) ಮತ್ತು ಅಲ್ವಾರೊ ವಜ್ಕ್ವೆಜ್.
ಜೆಮ್ಶೆಡ್ಪುರ ಎಫ್‌ಸಿ: ಟಿಪಿ ರೆಹನೇಶ್ (ಗೋಲ್ ಕೀಪರ್), ರಿಕಿ ಲಲ್ಲಾವ್ಮಾ, ಪೀಟರ್ ಹಾರ್ಟ್ಲಿ (ನಾಯಕ), ಎಲಿ ಸಬಿಯಾ, ಲಾಲ್ಡಿನ್ಲಿಯಾನಾ ರೆಂತ್ಲೀ, ಜಿತೇಂದ್ರ ಸಿಂಗ್, ರಿತ್ವಿಕ್ ದಾಸ್, ಬೋರಿಸ್ ಸಿಂಗ್, ಪ್ರೊನೇ ಹಾಲ್ಡರ್, ಗ್ರೆಗ್ ಸ್ಟೀವರ್ಟ್ ಮತ್ತು ಡೇನಿಯಲ್ ಚುಕ್ವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications