ಐಸಿಎಲ್ ಪುಟ್ಬಾಲ್: ಸಚಿನ್ ತಂಡಕ್ಕೆ 'ದಾದಾ' ಗಿರಿ
ಕೋಲ್ಕತ್ತಾ, ಡಿ. 21: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಪಾಲುದಾರಿಕೆಯ 'ಅಲ್ಟಿಟಿಕೋ ಡಿ ಕೋಲ್ಕತ್ತಾ ತಂಡ' ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪಾಲುದಾರಿಕೆಯ ಕೇರಳ ಬ್ಲಾಸ್ಟರ್ಸ್ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಸೋಲಿಸಿ ಇಂಡಿಯನ್ ಸೂಪರ್ ಲೀಗ್ (ಐಸಿಎಲ್) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ಮಹಮದ್ ರಫಿಕ್ ಗಳಿಸಿದ ಗೋಲು ತಂಡಕ್ಕೆ ಜಯ ತಂದುಕೊಟ್ಟಿತು. ಎರಡು ತಂಡಗಳು ಸಮಬಲದ ಹೋರಾಟ ನಡೆಸಿದವು. ಕೆಲವು ಅವಕಾಶಗಳನ್ನು ಕೈ ಚೆಲ್ಲಿದವು. ಅಂತಿಮವಾಗಿ ಕೋಲ್ಕತ್ತಾ ಗೆಲುವಿನ ನಗೆ ಬೀರಿತು.[ವಿಶ್ವಕಪ್ ಗೆದ್ದವರಿಗೆ ತಲಾ 10 ಲಕ್ಷ ರೂ. ಬಹುಮಾನ]

ನಂತರ ಮಾತನಾಡಿದ ಸೌರವ್ ಗಂಗೂಲಿ, ಪುಟ್ಬಾಲ್ ಲೀಗ್ ಜನರಲ್ಲಿ ಹೊಸ ಕ್ರೇಜ್ ಹುಟ್ಟಿಸಿದೆ. ಇದು ದೇಶದ ಪುಟ್ಬಾಲ್ ಬೆಳವಣಿಗೆ ಉತ್ತಮ ಅಂಶವಾಗಿದ್ದು ನನ್ನ ನಗರದಲ್ಲಿ ಮತ್ತಷ್ಟು ಪ್ರೋತ್ಸಾಹ ದೊರೆಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ದೇಶದಲ್ಲಿ ಕ್ರಿಕೆಟ್ ಜತೆಗೆ ಪುಟ್ಬಾಲ್ ಗೂ ಒಂದು ವೇದಿಕೆ ಸಿದ್ಧವಾದಂತಾಗಿದೆ. ದಾದಾ(ಸೌರವ್ ಗಂಗೂಲಿ) ಜತೆ ಮತ್ತೆ ಒಡನಾಡುವ ಅವಕಾಶ ಇಲ್ಲಿ ಒದಗಿ ಬಂದಂತಾಯಿತು ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದರು. ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್, ಬಾಲಿವುಡ್ ನಟರಾದ ಅಮೀರ್ ಖಾನ್, ಜಾನ್ ಅಬ್ರಾಂ, ಅಭಿಷೇಕ್ ಬಚ್ಚನ್ ಅಂತಿಮ ಪಂದ್ಯ ವೀಕ್ಷಿಸಿದರು.[ಬಂಗಾಳ ಮಣಿಸಿ ಹೊಸ ಇತಿಹಾಸ ಸೃಷ್ಟಿಸಿದ ಕರ್ನಾಟಕ]

ಇಂಡಿಯನ್ ಸುಪರ್ ಲೀಗ್ (ಐಸಿಎಲ್) ವಿವಿಧ ಪ್ರಶಸ್ತಿ ವಿಜೇತರ ಪಟ್ಟಿ
ಚಾಂಪಿಯನ್: ಅಲ್ಟಿಟಿಕೋ ಡಿ ಕೋಲ್ಕತ್ತಾ ತಂಡ (8 ಕೋಟಿ)
ರನ್ನರ್ಸ್ ಅಪ್: ಕೇರಳ ಬ್ಲಾಸ್ಟರ್ಸ್(4 ಕೋಟಿ)
ಹಿರೋ ಆಫ್ ದಿ ಫೈನಲ್: ಮಹಮದ್ ರಫಿಕ್ (ಅಲ್ಟಿಟಿಕೋ ಡಿ ಕೋಲ್ಕತ್ತಾ )
ಹ್ಯಾಪಿ ಫ್ಯಾನ್ಸ್: ಕೇರಳ ಬ್ಲಾಸ್ಟರ್ಸ್
ಪೈರ್ ಪ್ಲೇ: ದೆಹಲಿ ಡೈನೋಮ್ಸ್
ಉದಯೋನ್ಮುಖ ಆಟಗಾರ: ಲೂಯಿಸ್ (ಅಲ್ಟಿಟಿಕೋ ಡಿ ಕೋಲ್ಕತ್ತಾ )
ಹಿರೋ ಆಫ್ ದಿ ಲೀಗ್: ಇಯಾನ್ ಹ್ಯೂಮ್( ಕೇರಳ ಬ್ಲಾಸ್ಟರ್ಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications