Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ISL : ಗುರುಪ್ರೀತ್ ಸಿಂಗ್ ಮೋಡಿ: ರೋಚಕ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್‌ಸಿ

ISL : Bengaluru FC Enters The ISL Final After Defeating Mumbai City FC In A Penalty Shootout

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ರೋಚಕವಾಗಿ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಫೈನಲ್ ತಲುಪಿದೆ.

ಮುಂಬೈನಲ್ಲಿ ನಡೆದಿದ್ದ ಸೆಮಿಫೈನಲ್‌ನ ಮೊದಲ ಲೆಗ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಮುಂಬೈ ಸಿಟಿ ಎಫ್‌ಸಿ ವಿರುದ್ಧ 1-0 ಗೋಲುಗಳ ಜಯ ಸಾಧಿಸಿತ್ತು. ಭಾನುವಾರ ಬೆಂಗಳೂರಿನಲ್ಲಿ ನಡೆದ ಎರಡನೇ ಲೆಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 2-1 ಗೋಲುಗಳ ಜಯ ಸಾಧಿಸಿತು. ಆದರೆ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 1-0 ಅಂತರದಲ್ಲಿ ಗೆದ್ದಿದ್ದ ಕಾರಣ, ಅಗ್ರಿಗೇಟ್‌ ಪ್ರಕಾರ ಸ್ಕೋರ್ ಸಮಬಲವಾಗಿತ್ತು.

ಹೆಚ್ಚುವರಿ ಸಮಯ ನೀಡಿದರೂ ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದ ಕಾರಣ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಣಯಿಸಲು ತೀರ್ಮಾನಿಸಲಾಯಿತು. ಮೊದಲ 5 ಸೆಟ್‌ಗಳಲ್ಲಿ ಎರಡೂ ತಂಡಗಳು 5 ಪೆನಾಲ್ಟಿ ಶೂಟೌಟ್ ಗಳಿಸಿದ ಕಾರಣ ಎರಡನೇ ಸೆಟ್‌ ಶೂಟೌಟ್‌ಗೆ ಪಂದ್ಯ ಮುನ್ನಡೆಯಿತು.

ಮುಂಬೈ ಸಿಟಿ ಎಫ್‌ಸಿ 8 ಮತ್ತು ಬೆಂಗಳೂರು ಎಫ್‌ಸಿ 8 ಪೆನಾಲ್ಟಿ ಶೂಟೌಟ್ ಗಳಿಸಿ ಸರಿ ಸಮನಾಗಿತ್ತು. ನಂತರ ಬೆಂಗಳೂರು ಎಫ್‌ಸಿ ಯಶಸ್ವಿಯಾಗಿ 9ನೇ ಶೂಟೌಟ್ ದಾಖಲಿಸಿತು. ಬೆಂಗಳೂರು ಎಫ್‌ಸಿ ತಂಡದ ಕೋಲ್ ಕೀಪರ್ ಗುರುಪ್ರೀತ್ ಸಿಂಗ್ ಮುಂಬೈ ಎಫ್‌ಸಿಯ 9ನೇ ಶೂಟೌಟ್ ತಡೆಯುವಲ್ಲಿ ಯಶಸ್ವಿಯಾದರು. ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಒಮ್ಮೆಲೆ ಜೋರಾಗಿ ಕೂಗುವ ಮೂಲಕ ತಂಡದ ಜಯವನ್ನು ಸಂಭ್ರಮಿಸಿದರು.

ISL : Bengaluru FC Enters The ISL Final After Defeating Mumbai City FC In A Penalty Shootout

ಫೈನಲ್‌ಗೆ ಪ್ರವೇಶಿಸಿದ ಬೆಂಗಳೂರು ಎಫ್‌ಸಿ

ಈ ರೋಚಕ ಜಯದ ಮೂಲಕ ಬೆಂಗಳೂರು ಎಫ್‌ಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಶನಿವಾರ ಮಾರ್ಚ್ 18ರಂದು ನಡೆಯಲಿರುವ ಫೈನಲ್‌ನಲ್ಲಿ ಅವರು ಹೈದರಾಬಾದ್ ಎಫ್‌ಸಿ ಅಥವಾ ಎಟಿಕೆ ಮೋಹನ್ ಬಗನ್ ವಿರುದ್ಧ ಸೆಣೆಸಲಿದ್ದಾರೆ.

ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಒಂದು ಹಂತದಲ್ಲಿ ಕ್ವಾಲಿಫೈಯರ್ ಹಂತಕ್ಕೆ ತಲುಪಲು ಕಷ್ಟಪಡಿತ್ತಿದ್ದ ಬೆಂಗಳೂರು ಎಫ್‌ಸಿ ನಂತರ ಸತತವಾಗಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಮುಂಬೈ ಎಫ್‌ಸಿ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ.

ಕಂಠೀರವ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯ ಆರಂಭವಾದ 22ನೇ ನಿಮಿಷದಲ್ಲೇ ಬೆಂಗಳೂರು ಎಫ್‌ಸಿ ಗೋಲು ಗಳಿಸಿತು. ಜಾವಿ ಹೆರ್ನಾಂಡ್ರೆಜ್ ಮೊದಲ ಗೋಲು ಗಳಿಸಿ ಮಿಂಚಿದರು. ಮುಂಬೈ ಸಿಟಿ ಎಫ್‌ಸಿ 30ನೇ ನಿಮಿಷದಲ್ಲೇ ಗೋಲು ಗಳಿಸುವ ಮೂಲಕ ತಿರುಗೇಟು ನೀಡಿತು. ನಂತರ ಪಂದ್ಯದ 66ನೇ ನಿಮಿಷದಲ್ಲಿ ಎರಡನೇ ಗೋಲು ದಾಖಲಿಸಿ ಮುನ್ನಡೆ ಪಡೆದುಕೊಂಡಿತು.

ಆದರೂ ಮುಂಬೈ ಎಫ್‌ಸಿ ಫೈನಲ್‌ಗೆ ಪ್ರವೇಶಿಸಬೇಕಾದರೆ ಇನ್ನೊಂದು ಗೋಲು ದಾಖಲಿಸಬೇಕಾದ ಕಾರಣ ಹೆಚ್ಚುವರಿ 30 ನಿಮಿಷ ನೀಡಲಾಯಿತು. ಆಗ ಯಾವುದೇ ಗೋಲು ದಾಖಲಾಗದ ಕಾರಣ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಂಗಳೂರು ಎಫ್‌ಸಿ ಜಯ ಸಾಧಿಸಿತು.

ISL : Bengaluru FC Enters The ISL Final After Defeating Mumbai City FC In A Penalty Shootout

ಉಭಯ ತಂಡಗಳ ಇಲೆವೆನ್

ಬೆಂಗಳೂರು ಎಫ್‌ಸಿ ಇಲೆವೆನ್: ಗುರ್‌ಪ್ರೀತ್ ಸಂಧು (ಗೋಲ್ ಕೀಪರ್/ನಾಯಕ), ಅಲೆಕ್ಸಾಂಡರ್ ಜೊವಾನೊವಿಕ್, ಸಂದೇಶ್ ಜಿಂಗನ್, ಪ್ರಬೀರ್ ದಾಸ್, ರೋಷನ್ ನೊರೆಮ್, ಬ್ರೂನೋ ಸಿಲ್ವಾ, ರೋಹಿತ್ ಕುಮಾರ್, ಜೇವಿಯರ್ ಹೆರ್ನಾಂಡೆಜ್, ಸುರೇಶ್ ವಾಂಗ್‌ಜಮ್, ರಾಯ್ ಕೃಷ್ಣ ಮತ್ತು ಶಿವ ನಾರಾಯಣನ್.

ಮುಂಬೈ ಸಿಟಿ ಎಫ್‌ಸಿ ಇಲೆವೆನ್: ಫುರ್ಬಾ ಲಚೆನ್ಪಾ (ಗೋಲ್‌ ಕೀಪರ್), ರಾಹುಲ್ ಭೆಕೆ, ಮೌರ್ತಡಾ ಫಾಲ್ (ನಾಯಕ), ಮೆಹ್ತಾಬ್ ಸಿಂಗ್, ವಿಘ್ನೇಶ್ ದಕ್ಷಿಣಮೂರ್ತಿ, ರೌಲಿನ್ ಬೋರ್ಗೆಸ್, ಅಹ್ಮದ್ ಜಹೌ, ಗ್ರೆಗ್ ಸ್ಟೀವರ್ಟ್, ಲಾಲಿಯನ್ಜುವಾಲಾ ಚಾಂಗ್ಟೆ, ಜಾರ್ಜ್ ಡಯಾಜ್ ಮತ್ತು ಬಿಪಿನ್ ಸಿಂಗ್.

Story first published: Sunday, March 12, 2023, 23:12 [IST]
Other articles published on Mar 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+