ಐಎಸ್‌ಎಲ್: ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿ

ಗೋವಾ, ಡಿಸೆಂಬರ್,6 : ಬಾರ್ಥಲೋಮ್ಯೋ ಒಗ್ಬಚೆ (30ನೇ ನಿಮಿಷ) ಪೆನಾಲ್ಟಿ ಮೂಲಕ ಹಾಗೂ ರೌವ್ಲಿನ್ ಬೋರ್ಗಸ್ (45ನೇ ನಿಮಿಷ) ಗಳಿಸಿದ ಗೋಲಿನಿಂದ ಒಡಿಶಾ ಎಫ್ ಸಿ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಪ್ರಭುತ್ವವನ್ನು ಮುಂದುವರಿಸಿದೆ.
ಮುಂಬೈ 2-0 ಮೇಲುಗೈ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಉತ್ತಮ ಪೈಪೂಟಿ ನೀಡುತ್ತಿರುವ ಒಡಿಶಾ ಎಫ್ ಸಿ ತಂಡ ಮುಂಬೈ ಸಿಟಿಎಫ್ ಸಿ ವಿರುದ್ಧ ಪ್ರಥಮಾರ್ಧದಲ್ಲಿ ಮತ್ತೆ ನಿರಾಶದಾಯಕ ಪ್ರದರ್ಶನ ತೋರಿದೆ. ಬಾರ್ಥಲೋಮ್ಯೋ ಒಗ್ಬಚೆ (30ನೇ ನಿಮಿಷ) ಪೆನಾಲ್ಟಿ ಮೂಲಕ ಹಾಗೂ ರೌವ್ಲಿನ್ ಬೋರ್ಗಸ್ (45ನೇ ನಿಮಿಷ) ಗಳಿಸಿದ ಗೋಲಿನಿಂದ ಪ್ರಥಮಾರ್ಧದಲ್ಲಿ 2-0 ಅಂತರದಲ್ಲಿ ಮೇಲುಗೈ ಸಾಧಿಸಿದೆ. ಪೆನಾಲ್ಟಿ ವಲಯದಲ್ಲಿ ಶುಭಂ ಅವರ ಕೈಗೆ ಚೆಂಡು ತಗಲಿದ ಕಾರಣ ರೆಫರಿ ನೇರವಾಗಿ ಪೆನಾಲ್ಟಿ ಶೂಟ್ ಗೆ ಅವಕಾಶ ಕಲ್ಪಿಸಿದರು. 34ನೇ ನಿಮಿಷದಲ್ಲಿ ಫಾಲ್ ಗೋಲು ಗಳಿಸಿದರೂ ರೆಫರಿ ಅದನ್ನು ಅಕ್ರಮ ಗೋಲೆಂದು ಘೋಷಿಸಿದರು .
ಒಡಿಶಾ ಗೋಲ್ ಕೀಪರ್ ಕಮಲ್ಜಿತ್ ಸಿಂಗ್ ಅವರನ್ನು ತಳ್ಳಿದ ಕಾರಣ ಫಾಲ್ ಅವರು ಗಳಿಸಿದ ಗೋಲು ಅಸಿಂಧುವಾಯಿತು.ಇದು ಗೋಲ್ ಕೀಪರ್ ಅವರ ಎಸಗಿದ ಪ್ರಮಾದವಾಗಿದ್ದರೂ ಜೆಫರಿ ಒತ್ತಡಕ್ಕೆ ಮಣಿಯಬೇಕಾಯಿತು. ಕಮಲ್ಜಿತ್ ಸಿಂಗ್ ಅವರ ಸ್ಥಾನದಲ್ಲಿ ರವಿಕುಮಾರ್ ಅಂಗಣಕ್ಕಿಳಿದರು. 45ನೇ ನಿಮಿಷದಲ್ಲಿ ರೌಲಿನ್ ಗಳಿಸಿದ ಗೋಲಿನಿಂದ ಮುಂಬೈ ಸಿಟಿ ಎಫ್ ಸಿ 2-0 ಗೋಲಿನಿಂದ ಪ್ರಥಮಾರ್ಧದಲ್ಲಿ ಪ್ರಭುತ್ವ ಸಾಧಿಸಿತು.
ಹ್ಯಾಟ್ರಿಕ್ ಜಯದ ನಿರೀಕ್ಷೆ: ಹೀರೋ ಇಂಡಿಯನ್ ಸೂಪರ್ ಲೀಗ್ ನ ಏಳನೇ ಆವೃತ್ತಿಯ ಆರಂಭದಲ್ಲಿ ನಿರಾಶದಾಯಕ ಪ್ರದರ್ಶನ ತೋರಿದ್ದ ಮುಂಬೈ ಸಿಟಿ ಎಫ್ ಸಿ ತಂಡ ನಂತರದ ಪಂದ್ಯಗಳಲ್ಲಿ ಚೇತರಿಸಿಕೊಂಡು ಸತತ ಜಯದ ಹಾದಿ ಹಿಡಿದಿದೆ. ಈಸ್ಟ್ ಬೆಂಗಾಲ್ ವಿರುದ್ಧ ಜಯ ಗಳಿಸಿದ ಮುಂಬೈ ಅತ್ಯಂತ ಆತ್ಮವಿಶ್ವಾಸದೊಂದಿಗೆ ಮುನ್ನಡೆದಿದೆ. ಮಿಡ್ ಫೀಲ್ಡ್ ನಲ್ಲಿ ಹ್ಯುಗೊ ಬೌಮಾಸ್ ಹಾಗೂ ರೌಲಿನ್ ಬೊರ್ಗಸ್ ತಾವು ಬಲಿಷ್ಠರು ಎಂಬುದನ್ನು ಸಾಬೀತುಪಡಿದ್ದಾರೆ. ಆಡಂ ಲೆ ಫಾಂಡ್ರೆ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದು ಹಿಂದಿನ ಪಂದ್ಯದಲ್ಲಿ ಗೋಲು ಗಳಿಸಿ ಯಶಸ್ಸು ಕಂಡಿದ್ದಾರೆ.
ಬ್ಯಾಕ್ ಲೈನ್ ನಲ್ಲಿ ಮಂದಾರ್ ಮತ್ತು ರಾಕಿಪ್ ಆಧಾರವಾಗಿದ್ದರೆ, ಡಿಫೆನ್ಸ್ ನಲ್ಲಿ ಫಲ್ಲಾ ಮತ್ತು ಸ್ಯಾಂಟನಾ ತಂಡದ ಬೆನ್ನೆಲುಬು. ಒಡಿಶಾ ತಂಡ ಋತುವಿನಲ್ಲಿ ಇದುವರೆಗೂ ಜಯ ಕಂಡಿರಲಿಲ್ಲ, ಹಿಂದಿನ ಪಂದ್ಯದಲ್ಲಿ ಪಂದ್ಯ ಮುಗಿಯಲು ಕೆಲವು ಕ್ಷಣಗಳು ಬಾಕಿ ಇರುವಾಗ ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟು ದೊಡ್ಡ ಆಘಾತ ಅನುಭವಿಸಿತು.ಎಟಿಕೆ ಮೋಹನ್ ಬಾಗನ್ ವಿರುದ್ಧ ಒಡಿಶಾ ತಂಡ ಸೋಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸ್ಟೀವನ್ ಟೇಲರ್ ಮತ್ತು ಜಾಕೋಬ್ ಟ್ರಾಟ್ ತಂಡಕ್ಕೆ ಉತ್ತಮ ರೀತಿಯಲ್ಲಿ ನೆರವಾಗುತ್ತಿದ್ದು, ಡಿಫೆನ್ಸ್ ವಿಭಾದಲ್ಲಿ ಕೋಲ್ ಅಲೆಕ್ಸಾಂಡರ್ ಆಧಾರವೆನಿಸಿದ್ದಾರೆ. ಭುವನೇಶ್ವರ ಮೂಲದ ತಂಡ ಮುಂಬೈ ವಿರುದ್ಧ ತನ್ನ ಹೋರಾಟದ ಆಟವನ್ನು ಮುಂದುವರಿಸಲು ಸಜ್ಜಾಯಿತು. ಮುಂಬೈ ವಿರುದ್ಧ ಒಡಿಶಾ ತಂಡ ಯಶಸ್ಸು ಕಾಣಬೇಕಾದರೆ ಸಾಕಷ್ಟು ಸುಧಾರಣೆಯ ಅಗತ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications