Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಗೋವಾ ಎಫ್‌ಸಿ ವಿರುದ್ಧ ಪಾರಮ್ಯ ಮೆರೆದ ಜೆಮ್ಷೆಡ್ಪುರ ಎಫ್‌ಸಿ

ISL: Jamshedpur give Goa a taste of their own medicine

ಜೆಮ್ಷೆಡ್ಪುರ್, ನವೆಂಬರ್ 1: ಜೆಮ್ಷೆಡ್ಪುರ್ ನ ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ (ನವೆಂಬರ್ 1) ನಡೆದ ಗೋವಾ ಎಫ್ಸಿ ಮತ್ತು ಆತಿಥೇಯ ಜೆಮ್ಷೆಡ್ಪುರ್ ಎಫ್ಸಿ ತಂಡಗಳ ಮುಖಾಮುಖಿಯಲ್ಲಿ ಜೆಮ್ಷೆಡ್ಪುರ್ 4-1 ಅಂತರದ ಗೆಲುವನ್ನಾಚರಿಸಿತು. (ಚಿತ್ರ ಕೃಪೆ ಐಎಸ್‌ಎಲ್‌ ಮೀಡಿಯಾ)

ಪಂದ್ಯದ ಸ್ಕೋರ್ ಕಾರ್ಡ್

ಪಂದ್ಯ ಆರಂಭಗೊಂಡ 16ನೇ ನಿಮಿಷದಲ್ಲಿ ಜೆಮ್ಷೆಡ್ಪುರ್ ಎಫ್ಸಿಯ ಮೈಕೆಲ್ ಸೂಸೈರಾಜ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ ಎದುರಾಳಿ ಗೋವಾ ಪರವಾಗಿ ಮೌರ್ಟಾಡಾ ಫಾಲ್ 32ನೇ ನಿಮಿಷದಲ್ಲಿ ಗೋಲ್ ಬಾರಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿಕೊಂಡರು.

ಆದರೆ ದ್ವಿತೀಯಾರ್ಧದಲ್ಲಿ ಜೆಮ್ಷೆಡ್ಪುರ್ ಮತ್ತೂ ದಾಳಿಯಾತ್ಮಕ ಆಟ ಆಡಿ ಮೂರು ಗೋಲ್ ಗಳನ್ನು ಖಾತೆಗೆ ಸೇರಿಸಿಕೊಂಡಿತು. 49ನೇ ನಿಮಿಷದಲ್ಲಿ ಜೆಮ್ಷೆಡ್ಪುರ್ ನ ಸೂಸೈರಾಜ್ ಮತ್ತೊಂದು ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಮತ್ತೆ 76ನೇ ನಿಮಿಷದಲ್ಲಿ ಮೆಮೊ, 77ನೇ ನಿಮಿಷದಲ್ಲಿ ಸುಮಿತ್ ಪಾಸಿ ಗೋಲ್ ಬಾರಿಸಿ ತಂಡದ ಗೆಲುವನ್ನು ಸಾರಿದರು.

Story first published: Thursday, November 1, 2018, 23:19 [IST]
Other articles published on Nov 1, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+