ಐಎಸ್‌ಎಲ್ Live Score: ಗಾಯಾಳು ಸಿಂಹ ಡೆಲ್ಲಿ ಎದುರು ಜೆಮ್ಷೆಡ್ಪುರ ಕಾದಾಟ

ಜೆಮ್ಷೆಡ್ಪುರ, ಡಿಸೆಂಬರ್ 11: ಏಳು ಡ್ರಾ ಹಾಗೂ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಜೆಮ್ಷೆಡ್ಪುರ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಪಂದ್ಯವೆಂಬ ಹಣೆಪಟ್ಟಿ ಧರಿಸಿದೆ. ಈ ಬಾರಿ ಗಾಯಗೊಂಡಿರುಲವ ಸಿಂಹದಂತಿರುವ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಚಾಪ್ ನಾಲ್ಕರ ಹಂತ ತಲುಪುವ ಗುರಿ ಹೊಂದಿದೆ.
ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಆದರೆ ಜೆಮ್ಷೆಡ್ಪುರ ಡೆಲ್ಲಿ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಅತ್ಯಂತ ಎಚ್ಚರಿಕೆಯಿಂದ ಆಡಬೇಕಾಗಿದೆ. ನವೆಂಬರ್ ತಿಂಗಳಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯ 2-2ರಲ್ಲಿ ಡ್ರಾಗೊಂಡಿತ್ತು. ಋತುವಿನಲ್ಲಿ ಮೊದಲ ಜಯದ ಗುರಿಯಲ್ಲಿರುವ ಗಾಯಗೊಂಡ ಸಿಂಹ ಡೆಲ್ಲಿ ಡೈನಮೋಸ್ ವಿರುದ್ಧ ಸೆಸರ್ ಫೆರಾಂಡೊ ಪಡೆ ಎಚ್ಚರಿಕೆಯಿಂದಿರಬೇಕು. ಟಾಪ್ ನಾಲ್ಕರ ಹಂತ ತಲಪುವುದು ಡೆಲ್ಲಿಗೆ ಕಷ್ಟವಾಗಬಹುದು, ಆದರೆ ಜಯವೊಂದರ ಗುರಿಯಲ್ಲಿದೆ ಎಂಬುದು ಸ್ಪಷ್ಟ. ತನ್ನ ಘನತೆಯನ್ನು ಕಾಯ್ದುಕೊಳ್ಳಲು ತಂಡ ಜಯದ ಹುಡುಕಾಟದಲ್ಲಿದೆ.
ಕಳೆದ ಐದು ಪಂದ್ಯಗಳಲ್ಲಿ ಆತಿಥೇಯ ತಂಡ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಇದು ತಂಡಕ್ಕೆ ಸದ್ಯದ ದೊಡ್ಡ ತಲೆನೋವಾಗಿದೆ. ಕೇರಳ ವಿರುದ್ಧದ ಪಂದ್ಯದಲ್ಲಿ ಮಾತ್ರ ತಂಡ ಗೋಲು ಗಳಿಸುವಲ್ಲಿ ಯಶಸ್ವಿಯಾಗಿದೆ. ಅದು ಕೂಡ ಪೆನಾಲ್ಟಿ ಮೂಲಕ. ಈ ರೀತಿ ಸೋಲು ಮತ್ತು ಡ್ರಾ ತಂಡದ ಮುನ್ನಡೆಗೆ ಅಡ್ಡಿಯಾಗಬಹುದು. ಆದ್ದರಿಂದ ಉಳಿದಿರುವ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಜೆಮ್ಷೆಡ್ಪುರ ಎರಡನೇ ಸ್ಥಾನ
ಗೋವಾ ತಂಡವನ್ನು ಹೊರತುಪಡಿಸಿದರೆ ಲೀಗ್‌ನಲ್ಲಿ ಅತಿ ಹೆಚ್ಚು ಗೋಲುಗಳಿಸಿದ ತಂಡಗಳ ಪಟ್ಟಿಯಲ್ಲಿ ಜೆಮ್ಷೆಡ್ಪುರ ಎರಡನೇ ಸ್ಥಾನದಲ್ಲಿದೆ. ಆದರೆ ಅಂತಿಮ ಹಂತದಲ್ಲಿ ಗೋಲು ಗಳಿಸಲ ಅಥವಾ ಎದುರಾಳಿಯ ಗೋಲನ್ನು ತಡೆಯಲು ಟಾಟಾ ಪಡೆ ವಿಫಲವಾಗಿದೆ.

ಆಕ್ರಮಣಕಾರಿ ಆಟ
‘ಡೆಲ್ಲಿ ತಂಡ ಇದುವರೆಗೂ ಉತ್ತಮವಾಗಿಯೇ ಆಡಿದೆ. ಅವರಲ್ಲಿ ಆಕ್ರಮಣಕಾರಿ ಆಟವಿದೆ. ಅಲ್ಲದೆ ಗೆಲ್ಲುವ ಛಲ ಇದೆ. ಕ್ಲೀನ್ ಶೀಟ್ ಸಾಧನೆ ಪ್ರಮುಖವಾದುದು. ಇದನ್ನು ಗಮನದಲ್ಲಿರಿಸಿಕೊಂಡು ನಾವು ಆಡಬೇಕಾಗಿದೆ. ‘ ಎಂದು ಜೆಮ್ಷೆಡ್ಪುರ ತಂಡದ ಸಹಾಯಕ ಕೋಚ್ ಗುಲೆರ್ಮೋ ಫೆರ್ನಾಂಡೀಸ್ ಗೊನ್ಸಾಲೀಸ್ ಹೇಳಿದ್ದಾರೆ.

ಮೈಕಲ್ ಸೂಸೈರಾಜ್
ಗಾಯಗೊಂಡಿರುವ ವಿಂಗರ್ ಆಟಗಾರ ಮೈಕಲ್ ಸೂಸೈರಾಜ್ ಪಂದ್ಯದಿಂದ ವಂಚಿತರಾಗಲಿದ್ದಾರೆ. ಸರ್ಗಿಯೋ ಸಿಡೊಂಚಾ ಕೂಡ ಪಂದ್ಯಕ್ಕೆ ಗೈರಾಗಲಿದ್ದಾರೆ. ‘ನಮ್ಮ ತಂಡದಲ್ಲಿ ಕೆಲವು ಆಟಗಾರರು ಗಾಯದಿಂದ ಬಳಲುತ್ತಿದ್ದಾರೆ. ಸರ್ಗಿಯೋ ಅವರ ಗೈರು ತಂಡಕ್ಕೆ ತುಂಬಲಾರದ ನಷ್ಟ. ಇನ್ನು ಯಾವುದೇ ತಪ್ಪುಗಳಿಗೆ ಕ್ಷಮೆ ಇರುವುದಿಲ್ಲ,. ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ನಾವು ಕಠಿಣ ಶ್ರಮ ಪಡುತ್ತಿದ್ದೇವೆ, ಅಂಕಪಟ್ಟಿಯಲ್ಲಿ ಟಾಪ್ ನಾಲ್ಕರಲ್ಲಿ ಕಾಣಿಸಿಕೊಳ್ಳುವುದು ನಮ್ಮ ಗುರಿ,‘ ಎಂದರು.

ಬೆಂಬಲ ಅಗತ್ಯವಿದೆ
ಸ್ಟಾರ್ ಫಾರ್ವರ್ಡ್ ಆಟಗಾರ ಟಿಮ್ ಕಹೀಲ್ ಅವರ ಮೇಲೆ ಗೋಲು ಗಳಿಸುವ ಜವಾಬ್ದಾರಿ ಇದೆ. ಕಾರ್ಲೋಸ್ ಕಾಲ್ವೋ ಹಾಗೂ ಪಾಬ್ಲೋ ಮೊರ್ಗಾಡೊ ಅವರ ಬೆಂಬಲ ಅಗತ್ಯವಿದೆ. ಈ ಆಟಗಾರರ ಮೇಲೆ ಡೆಲ್ಲಿ ಒಂದು ದೃಷ್ಟಿ ಇಟ್ಟಿರಬೇಕು. ಈಗಾಗಲೇ ಎರಡು ಗೋಲು ಗಳಿಸಿರುವ ಸುಮೀತ್ ಪಾಸ್ಸಿ ನಾಳೆ ಅಂಗಣಕ್ಕಿಳಿಯುವ ಸಾಧ್ಯತೆ ಇದೆ. ಡೆಲ್ಲಿ ತಂಡ ಉತ್ತಮವಾಗಿ ಆಡುತ್ತಿದ್ದರೂ ಗೋಲು ಗಳಿಸುವಲ್ಲಿ ವಿಫಲವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications