ಐಎಸ್‌ಎಲ್: ಡೆಲ್ಲಿ ಡೈನಮೋಸ್ ವಿರುದ್ಧ ನಾರ್ತ್ ಈಸ್ಟ್ ಯುನೈಟೆಡ್‌ಗೆ ಜಯ

ನವದೆಹಲಿ, ಅಕ್ಟೋಬರ್ 30: ದೆಹಲಿಯ ಜವಾಹರ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಮಂಗಳವಾರ (ಅಕ್ಟೋಬರ್ 30) ನಡೆದ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಡೆಲ್ಲಿ ಡೈನಮೋಸ್ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ಎಫ್ಸಿ ತಂಡಗಳ ಮುಖಾಮುಖಿಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್ 2-0ಯ ಗೆಲುವು ದಾಖಲಿಸಿದೆ.
ನಾರ್ತ್ ಈಸ್ಟ್ ಯುನೈಟೆಡ್ ಎರಡೂ ಗೋಲ್ ಗಳನ್ನು ಪಂದ್ಯದ ದ್ವಿತೀಯಾರ್ಧದಲ್ಲೇ ಬಾರಿಸಿ ಗೆಲುವನ್ನಾಚರಿಸಿತು. ಫೆಡೆರಿಕೊ ಗ್ಯಾಲ್ಗೊ 81ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ ಮತ್ತೊಬ್ಬ ಆಟಗಾರ ಬಾರ್ಥೊಲೊಮೆವ್ ಓಗ್ಬೆಚೆ 92ನೇ ನಿಮಿಷದಲ್ಲಿ ಇನ್ನೊಂದು ಗೋಲ್ ಸಿಡಿಸಿ ಮುನ್ನಡೆ ಹೆಚ್ಚಿಸಿದರು.
ಆತಿಥೇಯ ದೆಹಲಿ ಗೋಲ್ ಗೆ ಪ್ರಯತ್ನಿಸಿತಾದರೂ ಎದುರಾಳಿ ತಂಡ ಡೆಲ್ಲಿಗೆ ಅವಕಾಶ ಮಾಡಿಕೊಡಲಿಲ್ಲ. ಬುಧವಾರ (ಅಕ್ಟೋಬರ್ 31) ಸುನಿಲ್ ಛೆಟ್ರಿ ಮುಂಚೂಣಿಯ ಬೆಂಗಳೂರು ಎಫ್ಸಿ ಮತ್ತು ಎಟಿಕೆ ತಂಡಗಳು ಮೈದಾನಕ್ಕಿಳಿಯಲಿವೆ.
Story first published: Tuesday, October 30, 2018, 23:33 [IST]
Other articles published on Oct 30, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications