Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್ಎಲ್: ಎನ್ಇಯುಎಫ್‌ಸಿ vs ಎಫ್‌ಸಿ ಗೋವಾ ಪಂದ್ಯ ಸಮಬಲ

ISL, NorthEast United vs FC Goa: Match Live Score

ಗುವಾಹಟಿ, ಅಕ್ಟೋಬರ್ 1: ಇಂಡಿಯನ್ ಸೂಪರ್ ಲೀಗ್ 5ನೇ ಆವೃತ್ತಿಯ ಮೂರನೇ ಪಂದ್ಯವಾಗಿ ನಾರ್ತ್ ಈಸ್ಟ್ ಯುನೈಟೆಡ್ ಮತ್ತು ಗೋವಾ ಎಫ್‌ಸಿ ತಂಡಗಳ ಮುಖಾಮುಖಿಯಲ್ಲಿ ಎರಡೂ ತಂಡಗಳು 2-2ರಿಂದ ಸಮಬಲ ಸಾಧಿಸಿವೆ.

ನಾರ್ತ್ ಯುನೈಟೆಡ್ ನ ಫೆಡೆರಿಕೊ ಗ್ಯಾಲ್ಗೊ ಅವರು 8ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಅನಂತರ ಗೋವಾದಿಂದ ಕೋರೋ ಅವರು 14 ಮತ್ತು 39ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಭರ್ಜರಿ ಮುನ್ನಡೆ ಕೊಟ್ಟರು.

ಆದರೆ ಪಂದ್ಯದ ಫಲಿತಾಂಶ ಒಂದೆಡೆ ವಾಲಲು ನಾರ್ತ್ ಈಸ್ಟ್ ಆಟಗಾರ ಬಾರ್ಥೊಲೊಮೆವ್ ಓಗ್ಬೆಚೆ ಅವಕಾಶ ಕೊಡಲಿಲ್ಲ. 53ನೇ ನಿಮಿಷದಲ್ಲಿ ಓಗ್ಬೆಚೆ ಸಿಡಿಸಿದ ಗೋಲ್ ಪಂದ್ಯವನ್ನು ಸಮಬಲ ಗೊಳಿಸಿತು. ಗೋವಾ ಗೆಲ್ಲುವುದನ್ನು ನಿರೀಕ್ಷಿಸಲಾಗಿತ್ತಾದರೂ ಹಾಗಾಗಲಿಲ್ಲ.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022298

ಹಿಂದಿನ ಸೀಸನ್ ಗಳನ್ನು ಗಮನಿಸಿದರೆ ನಾರ್ತ್ ಈಸ್ಟ್ ಯುನೈಟೆಡ್ ಅಷ್ಟೋನೂ ಉತ್ತಮ ಪ್ರದರ್ಶನ ತೋರಿಸಿರಲಿಲ್ಲ. ಆದರೆ ಈ ಬಾರಿ ತಂಡದಲ್ಲಿ ಕೆಲ ಬದಲಾವಣೆಗಳಾಗಿದ್ದವು. ಹೀಗಾಗಿ ಪಂದ್ಯವನ್ನು ಗೆಲ್ಲುವ ನೆಲೆಯಲ್ಲಿ ಆತಿಥೇಯ ನಾರ್ತ್ ಈಸ್ಟ್ ತಂಡ, ಗೋವಾಕ್ಕೆ ಪ್ರಬಲ ಪೈಪೋಟಿ ನೀಡಿತ್ತು.

ನಾರ್ತ್ ಈಸ್ಟ್ ಯುನೈಟೆಡ್ ತಂಡ
ಗೋಲ್ಕೀಪರ್ಗಳು: ರೀಹೆಶ್ ಟಿಪಿ, ಪವನ್ ಕುಮಾರ್, ಗುರ್ಮೆತ್,
ಡಿಫೆಂಡರ್ಸ್: ಮಾಟೊ ಗ್ರ್ಯಾಜಿಕ್, ಮಿಸ್ಲಾವ್ ಕೊಮೊರ್ಸ್ಕಿ, ರೇಗನ್ ಸಿಂಗ್, ಕೀಗನ್ ಪೆರೇರಾ, ಪವನ್ ಕುಮಾರ್, ಪ್ರೊವತ್ ಲಕ್ರಾ, ಗುರ್ವಿಂದರ್ ಸಿಂಗ್, ರಾಬರ್ಟ್ ಲಾಲ್ತ್ಲಾವಾನಾ
ಮಿಡ್ಫೀಲ್ಡರ್ಸ್: ಜೋಸ್ ಡೇವಿಡ್ ಲ್ಯುಡೊ, ಫೆಡೆರಿಕೋ ಗ್ಯಾಲ್ಲ್ಗೊ, ಅಗಸ್ಟಿನ್ ಒಕ್ರಾಹ್, ರೌಲಿನ್ ಬೋರ್ಜೆಸ್, ಸೀಟಿಸೆಸೆನ್ ಸಿಂಗ್, ಫಾನೈ ಲಲ್ರೆಮ್ಪುಯಾ, ನಿಖಿಲ್ ಕದಮ್, ರಿಡೀಮ್ ಟಿಲಾಂಗ್, ಸಿಮರಾಜಿತ್ ಸಿಂಗ್, ಲಲ್ತತಂಗ ಖವ್ಲಿಂಗ್, ರೂಪರ್ಟ್ ನಾಂಗ್ರಮ್.
ಫಾರ್ವರ್ಡ್ಸ್: ಗಿರಿಕ್ ಖೊಸ್ಲಾ, ಕಿವಿ ಝಿಮೊಮಿ, ಜುವಾನ್ ಕ್ರೂಜ್ ಮಸ್ಸಿಯಾ, ಬಾರ್ಥಲೋಮೌ ಓಗ್ಬೆಚೆ.

ಗೋವಾ ಎಫ್ ತಂಡ
ಗೋಲ್ಕೀಪರ್ಸ್: ಲಲ್ತುಮುಮಾಲಿಯಾ ರಾಲ್ಟೆ, ಲಕ್ಷ್ಮಿಕಾಂತ್ ಕಟ್ಟಿಮಣಿ, ಮೊಹಮ್ಮದ್ ನವಾಜ್
ಡಿಫೆಂಡರ್ಸ್: ಕಾರ್ಲೋಸ್ ಪೆನಾ, ಚಿಂಗ್ಲೆನ್ಸನಾ ಸಿಂಗ್, ಲಾಲ್ಮಾಂಗೈಹಸಂಗ, ಮೊಹಮದ್ ಅಲಿ, ನಿರ್ಮಲ್ ಚೆಟ್ರಿ, ಸಂರಕ್ಷಕ ಗಾಮಾ, ಮೌರ್ಟಾಡಾ ಫಾಲ್, ಸೆರಿಟನ್ ಫರ್ನಾಂಡಿಸ್
ಮಿಡ್ಫೀಲ್ಡರ್ಸ್: ಅಹ್ಮದ್ ಜಹೌಹ್, ಬ್ರ್ಯಾಂಡನ್ ಫೆರ್ನಾಂಡಿಸ್, ಎಡು ಬೈಡಿಯಾ, ಹ್ಯೂಗೋ ಬೌಮಸ್, ಇಮ್ರಾನ್ ಖಾನ್, ಜಾಕಿಚಂದ್ ಸಿಂಗ್, ಲೆನ್ನಿ ರೊಡ್ರಿಗಸ್, ಮಂದರ್ ರಾವ್ ದೆಸ್ಸಾಯ್, ಮಿಗುಯೆಲ್ ಫೆರ್ನಾಂಡೀಸ್, ಪ್ರದೇಶ್ ಶಿರೋದ್ಕರ್, ಪ್ರಿನ್ಸ್ಟನ್ ರೆಬೆಲ್ಲೊ
ಫಾರ್ವರ್ಡ್ಸ್: ಫೆರಾನ್ ಕೊರೊಮಿನಾಸ್, ಲಿಸ್ಟನ್ ಕೊಲಾಕೊ, ಮನ್ವಿರ್ ಸಿಂಗ್.

Story first published: Wednesday, October 3, 2018, 15:41 [IST]
Other articles published on Oct 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+