ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ 2019: ಪ್ಲೇ ಆಫ್ ಮೇಲೆ ಗೋವಾ ಕಣ್ಣು

ISL 2019 : Play-off berth in sight for Goa

ಗೋವಾ, ಫೆಬ್ರವರಿ 17: ಬೆಂಗಳೂರು ಎಫ್ ಸಿ ತಂಡದ ಹಾದಿಯಲ್ಲೇ ಮುನ್ನಡೆಯುತ್ತಿರುವ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್‌ನ ಪ್ಲೇ ಆಫ್ ಹಂತವನ್ನು ತಲುಪಲು ಉತ್ಸುಕವಾಗಿದೆ.

15 ಪಂದ್ಯಗಳನ್ನಾಡಿರುವ ಸರ್ಗಿಯೊ ಲೊಬೆರಾ ಪಡೆ 28 ಅಂಕಗಳನ್ನು ಗಳಿಸಿ, ಲೀಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಿದರೆ ಪ್ಲೇ ಆಫ್ ಹಂತ ಪ್ರವೇಶಿಸಲಿದೆ.

ಎಟಿಕೆ ವಿರುದ್ಧ ನಡೆದ ಪಂದ್ಯದಲ್ಲಿ 3-0 ಗೋಲುಗಳ ಅಂತರದ ಜಯ ಸೇರಿದಂತೆ ಸತತ ಐದು ಪಂದ್ಯಗಳಲ್ಲಿ ಸೋಲರಿಯದ ಗೋವಾ ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎಟಿಕೆ ವಿರುದ್ಧದ ಪಂದ್ಯದಲ್ಲಿ ಗೋವಾ ಆಕ್ರಮಣಕಾರಿ ಆಟ ಪ್ರದರ್ಶಿಸಿತು.

ISL 2019 : Play-off berth in sight for Goa

ತಂಡದ ಪ್ರಮುಖ ಸ್ಟ್ರೈಕರ್ ಫೆರಾನ್ ಕೊರೊಮಿನಾಸ್ ಎರಡು ಗೋಲುಗಳನ್ನು ಗಳಿಸಿ ಒಟ್ಟು 13 ಗೋಲುಗಳ ಸರದಾರರೆನಿಸಿದರು. ನಾರ್ತ್ ಈಸ್ಟ್ ಯುನೈಟೆಡ್ ಬಾರ್ತಲೋಮ್ಯೊ ಒಗ್ಬಚೆ 12 ಗೋಲುಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಲೀಗ್‌ನ ಕೊನೆಯ ಎರಡು ಪಂದ್ಯಗಳಲ್ಲಿ ಗೋವಾ ತಂಡ ಕಳೆದ ಬಾರಿಯ ಚಾಂಪಿಯನ್ ಚೆನ್ನೆಯಿನ್ ಹಾಗೂ ಫೈನಲಿಸ್ಟ್ ಬೆಂಗಳೂರು ವಿರುದ್ಧ ಆಡಲಿದೆ, ಆದ್ದರಿಂದ ಕೇರಳ ವಿರುದ್ಧ ಆದಷ್ಟು ಹೆಚ್ಚಿನ ಅಂಕ ಗಳಿಸಲು ಪ್ರಯತ್ನ ನಡೆಸಲಿವೆ.

'ನೂತನ ಕೋಚ್ ಮೂಲಕ ಉತ್ತಮ ಪೈಪೋಟಿ ನೀಡುತ್ತಿರುವ ತಂಡದ ವಿರುದ್ಧ ನಾವು ಆಡಲಿದ್ದೇವೆ, ನಾವು ಶೇ. 100 ರಷ್ಟು ಶ್ರಮ ನೀಡದಿದ್ದರೆ, ಉತ್ತಮ ಪೈಪೋಟಿ ನೀಡದಿದ್ದರೆ ಅಂಕ ಗಳಿಸುವುದು ಕಠಿಣವಾಗಲಿದೆ. ಮೂರು ಅಂಕಗಳನ್ನು ಗಳಿಸುವುದು ಕಷ್ಟವಾಗಲಿದೆ. ನಾವು ಜಯ ಗಳಿಸಿದರೆ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲಿ ಯತ್ನಿಸುವೆವು,' ಎಂದು ಲೊಬೆರಾ ಹೇಳಿದ್ದಾರೆ.

ಕೇರಳ ತಂಡಕ್ಕೆ ಈಗ ಯಾವುದೇ ಗುರಿ ಇಲ್ಲ, ಕೇವಲ ಗೌರವಕ್ಕಾಗಿ ಆಡಬೇಕಾಗಿದೆ, ನೆಲೊ ವಿಂಗಡಾ ಪಡೆಗೆ ಟಾಪ್ ಆರರಲ್ಲೂ ಸ್ಥಾನ ಪಡೆಯುವುದು ಕಷ್ಟವೆನಿಸಿದೆ. ಡೇವಿಡ್ ಜೆಮ್ಸ್ ಅವರು ತರಬೇತಿ ನೀಡುತ್ತಿರುವಾಗಲೇ ವೈಫಲ್ಯದ ಹಾದಿ ಹಿಡಿದಿದ್ದ, ಕೇರಳ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುವುದು ವಿಂಗಡಾ ಪಾಲಿಗೆ ಕಠಿಣ ಎನಿಸುವುದು ಕಷ್ಟವಾಗಿದೆ. ಆದರೆ ಅವರ ಆಗಮನದ ನಂತರ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ.

ಡೆಲ್ಲಿ ಡೈನಮೋಸ್ ವಿರುದ್ಧ 0-2 ಗೋಲಿನಿಂದ ಸೋಲನುಭವಿಸುವ ಮೂಲಕ ಕೇರಳ ತಂಡ ಮತ್ತಷ್ಟು ಆಘಾತ ಕಂಡಿತು. ಬೆಂಗಳೂರು ವಿರುದ್ಧ ಪಂದ್ಯದ ಪ್ರಥಮಾರ್ಧದಲ್ಲಿ ಕೇರಳ ಉತ್ತಮ ಪ್ರದರ್ಶನ ತೋರಿತ್ತು, ಆದರೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಚೆನ್ನೆ'ಯಿನ್ ವಿರುದ್ಧದ ಪಂದ್ಯದಲ್ಲಿ ಕೇರಳ 3-0 ಗೋಲಿನಿಂದ ಜಯ ಗಳಿಸುವ ಮೂಲಕ ಮನೆಯಂಗಣದ ಪ್ರೇಕ್ಷಕರಿಗೆ ಫುಟ್ಬಾಲ್‌ನ ಸವಿ ನೀಡಿತ್ತು.

'ಈ ಪಂದ್ಯದ ಮೂಲಕ ನಮ್ಮ ತಂಡ ಐಎಸ್‌ಎಲ್‌ನಲ್ಲಿರುವ ಬಲಿಷ್ಠ ತಂಡಗಳ ವಿರುದ್ಧ ಹೇಗೆ ಆಡುತ್ತದೆ ಎಂಬುದನ್ನು ನೋಡಬೇಕಾಗಿದೆ. ನಮಗಿಂತ ಗೋವಾ ತಂಡ ಬಲಿಷ್ಠವಾಗಿದೆ ಎಂಬುದರಲ್ಲಿ ಸಂಶಯವಿಲ್ಲ, ಆದರೆ ಅವರು ಪಂದ್ಯ ಗೆಲ್ಲುತ್ತಾರೆಂದು ಹೇಳಲಾಗದು,' ಎಂದು ವಿಂಗಡಾ ಹೇಳಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಗೋವಾ ತಂಡ ಕೇರಳ ವಿರುದ್ಧ 3-1 ಗೋಲಿನಿಂದ ಗೆದ್ದಿತ್ತು.

Story first published: Sunday, February 17, 2019, 19:41 [IST]
Other articles published on Feb 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X