Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್ ಬೂಟು, ಕನಸು ಎರಡನ್ನೂ ತೂಗು ಹಾಕಿದ ಉಸೇನ್ ಬೋಲ್ಟ್!

‘It was a good experience’ - Usain Bolt hanging up boots on football dream

ಕಿಂಗ್‌ಸ್ಟನ್, ಜನವರಿ 23: ಫುಟ್ಬಾಲ್ ಮೈದಾನದಲ್ಲಿ ಮಿಂಚಬೇಕೆಂದು ಕನಸು ಕಂಡಿದ್ದ ಒಲಿಂಪಿಕ್ ಚಾಂಪಿಯನ್, ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಅವರು ಫುಟ್ಬಾಲ್ ಬೂಟು-ಕನಸು ಎರಡನ್ನೂ ತೂಗು ಹಾಕಿದ್ದಾರೆ. ಬೋಲ್ಟ್, ಫುಟ್ಬಾಲ್‌ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

32ರ ಹರೆಯದ ಅಥ್ಲೀಟ್ ಉಸೇನ್ ಒಟ್ಟು ಎಂಟು ಸಾರಿ ಒಲಿಂಪಿಕ್‌ನಲ್ಲಿ ಚಾಂಪಿಯನ್ ಅನ್ನಿಸಿದ್ದ ಸ್ಪ್ರಿಂಟರ್. ಅಥ್ಲೆಟಿಕ್ಸ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಬೋಲ್ಟ್ ವೃತ್ತಿಪರ ಫುಟ್ಬಾಲ್ ಆಟಗಾರ ಆಗುವ ಇಂಗಿತ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾದ ಸೆಂಟ್ರಲ್ ಕೋಸ್ಟ್ ಮರೀನರ್ಸ್ ಕ್ಲಬ್‌ನಲ್ಲಿ ನೆಲಯೂರೋದಕ್ಕೂ ಪ್ರಯತ್ನಿಸಿದ್ದರು.

ಆದರೆ ಗಾಯ, ಬಳಲಿಕೆಯ ಕಾರಣ ಸೆಂಟ್ರಲ್ ಕೋಸ್ಟ್ ಮರೀನರ್ಸ್ ತಂಡದಲ್ಲಿ ಬೋಲ್ಟ್ ಗಟ್ಟಿಯಾಗಲಿಲ್ಲ. ಹೀಗಾಗಿ ಉಸೇನ್ ಫುಟ್ಬಾಲ್ ಕನಸನ್ನೂ ಕೈಬಿಟ್ಟಿದ್ದಾರೆ. ಸೋಮವಾರವೇ (ಜನವರಿ 21) ತಾನು ಬ್ಯುಸಿನೆಟ್ (ಉದ್ಯಮ) ವೃತ್ತಿಯತ್ತ ಗಮನ ಹರಿಸುವುದಾಗಿ ಅ ವರು ತಿಳಿಸಿದ್ದರು. ಈಗ ಬೋಲ್ಟ್ ಫುಟ್ಬಾಲ್‌ನಿಂದ ಹೊರ ನಡೆದಿರುವ ವಿಚಾರ ಖಾತ್ರಿಯಾಗಿದೆ.

Story first published: Wednesday, January 23, 2019, 11:00 [IST]
Other articles published on Jan 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+