
ರೋಮ್, ಮೇ 29: ಇಟಲಿಯ ದೊಡ್ಡಮಟ್ಟದ ಫುಟ್ಬಾಲ್ ಟೂರ್ನಿ 'ಸೀರೀ ಎ'ಯನ್ನು ಜೂನ್ 20ರಂದು ಪುನರಾರಂಭಿಸಲು ಗ್ರೀನ್ ಸಿಗ್ನಲ್ ಲಭಿಸಿದೆ. ಕೊರೊನಾ ವೈರಸ್ ನಿಂದ ನಿಲುಗಡೆಯಾಗಿದ್ದ ಪಂದ್ಯಾಟ ಮುಂದಿನ ತಿಂಗಳು ಮರು ಆರಂಭಗೊಳ್ಳಲಿದೆ ಎಂದು ಕ್ರೀಡಾ ಸಚಿವ ವಿನ್ಸೆಂಜೊ ಸ್ಪಡಾಫೊರಾ ತಿಳಿಸಿದ್ದಾರೆ.
ಇಟಲಿಯಲ್ಲಿ ಕೊರೊನಾವೈರಸ್ ಪ್ರಕರಣ ಆತಂಕಕಾರಿಯಾಗಿ ಕಾಣಿಸಿಕೊಂಡಿದ್ದರಿಂದ ಮಾರ್ಚ್ 9ರಂದು ಪ್ರತಿಷ್ಠಿತ ಸೀರೀ ಎ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ಜೂನ್ 20ರಂದೇ ಸೀರೀ ಬಿಯ (ಈಗ ಸೀರೀ ಬಿಕೆಟಿ ಎಂದು ಹೆಸರು ಬದಲಾಯಿಸಲಾಗಿರುವ) ಎರಡನೇ ಪಂದ್ಯವೂ ಪುನರಾರಂಭವಾಗಲಿದೆ.
'ಇಟಲಿ ಮತ್ತೆ ಪುನರಾರಂಭಗೊಳ್ಳುತ್ತಿದೆ. ಇದರೊಂದಿಗೆ ಫುಟ್ಬಾಲ್ ಕೂಡ ಶುರುವಾಗುತ್ತಿದೆ,' ಎಂದು ಇಟಾಲಿಯನ್ ಫುಟ್ಬಾಲ್ ಫೆಡರೇಶನ್ (ಎಫ್‌ಐಜಿಸಿ) ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಪಡಾಫೊರಾ ಮಾಹಿತಿ ನೀಡಿದ್ದಾರೆ.
ಯುರೋಪ್‌ನ ಟಾಪ್ ಐದು ದೇಸೀ ಲೀಗ್‌ಗಳಲ್ಲಿ ಬುಂಡೇಸ್ಲಿಗಾ, ಸೀರೀ ಎ, ಲಾ ಲಿಗಾ, ಇಂಗ್ಲಿಷ್ ಪ್ರೀಮಿಯರ್ ಲೀಗ್‌ಗಳು ಸೇರಿವೆ. ಬುಂಡೇಸ್ಲಿಗಾ ಆರಂಭಗೊಂಡ ಬಳಿಕ ಸೀರೀ ಎ ಶುರುವಾಗುವುದರಲ್ಲಿದೆ. ಬುಂಡೇಸ್ಲಿಗಾ ಮೇ 16ರಂದೇ ಚಾಲನೆಗೊಂಡಿದೆ.