For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಯುವೆಂಟಸ್‌ನ ಬ್ಲೇಸ್ ಮಾಟುಯಿಡಿ, ಡೇನಿಯಲ್ ರುಗಾನಿ ಕೊರೊನಾದಿಂದ ಮುಕ್ತ

Juventus duo Blaise Matuidi, Daniele Rugani cleared of coronavirus

ಟುರಿನ್, ಏಪ್ರಿಲ್ 18: ಫ್ರೆಂಚ್ ಮಿಡ್‌ಫೀಲ್ಡರ್ ಬ್ಲೇಸ್ ಮಾಟುಯಿಡಿ ಮತ್ತು ಇಟಾಲಿಯನ್ ಡಿಫೆಂಡರ್ ಡೇನಿಯಲ್ ರುಗಾನಿ ಕೊರೊನಾವೈರಸ್‌ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಯುವೆಂಟಸ್ ಎಫ್‌ಸಿ ಹೇಳಿದೆ. ಕಳೆದ ತಿಂಗಳು ಇಬ್ಬರ ಕೊರೊನಾವೈರಸ್ ಪರೀಕ್ಷೆಯ ಫಲಿತಾಂಶ ಕೂಡ ಪಾಸಿಟಿವ್ ಎಂದು ಬಂದಿತ್ತು.

ಇಟಲಿಯ ಟಾಪ್ ಫುಟ್ಬಾಲರ್‌ಗಳಲ್ಲಿ ಕೊರೊನಾವೈರಸ್ ಪತ್ತೆಯಾಗಿದ್ದವರಲ್ಲಿ ಡೇನಿಯಲ್ ರುಗಾನಿ ಮೊದಲಿಗ. ಕಳೆದ ಮಾರ್ಚ್ 11ರಂದು ರುಗಾನಿ ಅವರಲ್ಲಿ ಸೋಂಕಿರುವುದು ಪತ್ತೆಯಾಗಿತ್ತು. ಇದಾಗಿ ಕೆಲವೇ ದಿನಗಳಲ್ಲಿ ವಿಶ್ವಕಪ್ ವಿಜೇತ ಆಟಗಾರ ಬ್ಲೇಸ್ ಮಾಟುಯಿಡಿಗೆ ಸೋಂಕಿರುವುದು ಕಂಡುಬಂದಿತ್ತು.

'ಬ್ಲೇಸ್ ಮಾಟುಯಿಡಿ ಮತ್ತು ಡೇನಿಯಲ್ ರುಗಾನಿ ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ. ಎರಡೆರಡು ಬಾರಿ ಪರೀಕ್ಷೆಯೊಳಗಾಗಿದ್ದ ಮಾಟುಯಿಡಿ ಮತ್ತು ರುಗಾನಿಯ ಫಲಿತಾಂಶ ನೆಗೆಟಿವ್ ಎಂದು ಬಂದಿದೆ,' ಎಂದು ಯುವೆಂಟಸ್ ಕ್ಲಬ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

'ಆಟಗಾರರು ಮಾರಕ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ ಇನ್ನು ಅವರಿಗೆ ಹೋಮ್ ಐಸೊಲೇಶನ್ ಅಗತ್ಯವಿಲ್ಲ,' ಎಂದು ಯುವೆಂಟಸ್ ಪಾರ್ವರ್ಡ್ ಆಟಗಾರ ಪಾಲೊ ಡೈಬಾಲಾ ಹೇಳಿದ್ದಾರೆ. ಡೈಬಾಲಾಗೂ ಸೋಂಕು ಹರಡಿತ್ತು. ಇವರೂ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

Story first published: Saturday, April 18, 2020, 12:12 [IST]
Other articles published on Apr 18, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+