ರೊನಾಲ್ಡೋ ಗೋಲ್ ಮಿಸ್, ಇಟಾಲಿಯನ್ ಕಪ್ ಫೈನಲ್‌ಗೆ ಯುವೆಂಟಸ್

ರೋಮ್, ಜೂನ್ 13: ಮೂರು ತಿಂಗಳ ಬಳಿಕ ಪುನರಾರಂಭವಾಗಿರುವ ಇಟಾಲಿಯನ್ ಕಪ್ ಫುಟ್ಬಾಲ್ ಪಂದ್ಯದಲ್ಲಿ ಸ್ಟಾರ್ ಫುಟ್ಬಾಲಿಗ ಕ್ರಿಸ್ಚಿಯಾನೊ ರೊನಾಲ್ಡೋ ಅವರಿದ್ದ ಯುವೆಂಟಸ್ ತಂಡ ಫೈನಲ್‌ಗೆ ಪ್ರವೇಶಿಸಿದೆ. ಟುರಿನ್‌ನಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಎಸಿ ಮಿಲಾನ್ ಮತ್ತು ಯುವೆಂಟಸ್ ತಂಡಗಳು ಕಾದಾಡಿದ್ದವು.
ಎಸಿ ಮಿಲಾನ್ vs ಯುವೆಂಟಸ್ ನಡುವಿನ ಕಾಳಗ ಗೋಲೇ ದಾಖಲಾಗದೆ ಕೊನೆಗೊಂಡಿತು. ಆದರೆ ಕೊರೊನಾವೈರಸ್‌ಗೂ ಮುನ್ನ ಫೆಬ್ರವರಿಯಲ್ಲಿ ನಡೆದಿದ್ದ ಫಸ್ಟ್ ಲೆಗ್ ಸೆಮಿಫೈನಲ್ ಪಂದ್ಯ 1-1ರ ಡ್ರಾಗೊಂಡಿದ್ದರ ಆಧಾರದಲ್ಲಿ ಯುವೆಂಟಸ್ ತಂಡ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಇಟಲಿ ಕೇಂದ್ರದಲ್ಲಿರುವ ಸ್ಟೇಡಿಯೋ ಒಲಿಂಪಿಕೊ ಸ್ಟೇಡಿಯಂ ಪಂದ್ಯದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಚ್ ಮೌರಿಜಿಯೊ ಸರ್ರಿ ಮುಂದಾಳತ್ವದ ಯುವೆಂಟಸ್ ತಂಡ ಒಂದೋ ನಪೋಲಿ ಅಥವಾ ಇಂಟರ್ ಮಿಲಾನ್ ತಂಡದ ಸವಾಲು ಸ್ವೀಕರಿಸಲಿದೆ.
ಎಸಿ ಮಿಲಾನ್ vs ಯುವೆಂಟಸ್ ಕಾಳಗದಲ್ಲಿ ರೊನಾಲ್ಡೋ, ಪೆನಾಲ್ಡಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರಿಂದ ದಾಖಲಾಗಲಿದ್ದ ಒಂದು ಗೋಲೂ ಮಿಸ್ ಎನಿಸಿತು. ಸೆಕೆಂಡ್ ಲೆಗ್ ಸೆಮಿಫೈನಲ್ ಪಂದ್ಯವಾಗಿ ಶನಿವಾರ (ಜೂನ್ 13) ನಪೋಲಿ ಮತ್ತು ಇಂಟರ್ ಮಿಲಾನ್ ತಂಡಗಳು ಕಾದಾಡಲಿವೆ. ಇದರಲ್ಲಿ ಗೆದ್ದ ತಂಡ ಯುವೆಂಟಸ್ ಜೊತೆ ಪ್ರಶಸ್ತಿ ಸುತ್ತಿನಲ್ಲಿ ಸ್ಪರ್ಧಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications