ಸತತ 9ನೇ ಬಾರಿಗೆ ಸೀರೀ ಎ ಪ್ರಶಸ್ತಿ ಗೆದ್ದ ಯುವೆಂಟಸ್ ಎಫ್‌ಸಿ

ಮಿಲನ್, ಜುಲೈ 27: ಭಾನುವಾರ ನಡೆದ ಪಂದ್ಯದಲ್ಲಿ ಸಂಪಡೋರಿಯಾ ವಿರುದ್ಧ 2-0ಯ ಜಯ ಗಳಿಸುವ ಮೂಲಕ ಯುವೆಂಟಸ್ ಎಫ್‌ಸಿ ತಂಡ ಸತತ 9ನೇ ಬಾರಿಗೆ ಸೀರೀ ಎ ಪ್ರಶಸ್ತಿ ಜಯಿಸಿದೆ. ಯುವೆಂಟನ್ ತಂಡಕ್ಕೆ ಇನ್ನೂ 2 ಪಂದ್ಯಗಳು ಬಾಕಿ ಉಳಿದಿವೆ. ಆದರೆ ಟ್ರೋಫಿ ಗೆಲ್ಲಲು ಬೇಕಾದಷ್ಟು ಅಂಕ ಈಗಾಗಲೇ ಯುವೆಂಟಸ್ ಖಾತೆಯಲ್ಲಿದೆ.
ಯುವೆಂಟಸ್ ತಂಡದ ಸ್ಟಾರ್ ಆಟಗಾರ, ಪೋರ್ಚುಗೀಸ್ ಬಲಾಡ್ಯ ಕ್ರಿಸ್ಚಿಯಾನೊ ರೊನಾಲ್ಡೋ 45+7ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ 66ನೇ ನಿಮಿಷದಲ್ಲಿ ಫೆಡೆರಿಕೊ ಬರ್ನಾರ್ಡೆಸ್ಚಿ ಎರಡನೇ ಗೋಲ್ ಬಾರಿಸಿ ಗೆಲುವಿನ ಅಂತರ ಹೆಚ್ಚಿಸಿದರು.
ಐದು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆದ್ದಿರುವ ಕ್ರಿಸ್ಚಿಯಾನೊ ರೊನಾಲ್ಡೋ ಒಂದು ಪೆನಾಲ್ಟಿ ಅವಕಾಶವನ್ನು ಕೈತಪ್ಪಿಸಿಕೊಂಡರು. ಆದರೆ ಮೌರಿಜಿಯೊ ಸರ್ರಿ ಕೋಚಿಂಗ್ ಅಡಿಯಲ್ಲಿರುವ ಯುವೆಂಟಸ್ ತಂಡ ಪಂದ್ಯ ಗೆದ್ದು, 7 ಅಂಕಗಳೊಂದಿಗೆ ಇಂಟರ್ ಮಿಲನ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತಲ್ಲದೆ 36ನೇ ಬಾರಿಗೆ ಸೀರೀ ಎ ಚಾಂಪಿಯನ್ಸ್ ಆಗಿ ಮಿನುಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications