Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಮುಂಬೈ ಸಿಟಿ ಎಫ್‌ಸಿ ಪಂದ್ಯ ಸಮಬಲ

Kerala Blasters vs Mumbai City FC, Indian Super League 5 Live Score

ಕೇರಳ, ಅಕ್ಟೋಬರ್ 5: ಕೇರಳದ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಕೇರಳ ಬ್ಲಾಸ್ಟರ್ಸ್ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳ ನಡುವಿನ ಇಂಡಿಯನ್ ಸೂಪರ್ ಲೀಗ್ 7ನೇ ಪಂದ್ಯ 1-1ರಿಂದ ಸಮಬಲಗೊಂಡಿದೆ. ತವರು ನೆಲದಲ್ಲಿ ಪಂದ್ಯ ನಡೆದಿದ್ದರಿಂದ ಕೇರಳ ಜಯಿಸುವ ನಿರೀಕ್ಷೆಯಿತ್ತು. (ಚಿತ್ರ ಕೃಪೆ: ಐಎಸ್ಎಲ್)

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022302

ಕೇರಳ ಬ್ಲಾಸ್ಟರ್ಸ್ ಪರ ಹೋಳಿಚರನ್ ನರ್ಜರಿ 24ನೇ ನಿಮಿಷದಲ್ಲಿ, ಮುಂಬೈ ಸಿಟಿ ಎಫ್‌ಸಿ ಪರ ಪ್ರಂಜಲ್ ಭೂಮಿಜ್ 90+3ನೇ ನಿಮಿಷದಲ್ಲಿ ಗೋಲ್ ಬಾರಿಸಿ ಪಂದ್ಯದ ಫಲಿತಾಂಶವನ್ನು ಸರಿದೂಗಿಸಿಕೊಂಡರು.

ಕೇರಳ ಬ್ಯಾಸ್ಟರ್ಸ್ ಆಡಿರುವ ಮೊದಲ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಎಟಿಕೆ ವಿರುದ್ಧ 2-0ಯ ಜಯ ಸಾಧಿಸುವ ಮೂಲಕ ಬೀಗಿತ್ತು. ಪಂದ್ಯಕ್ಕೂ ಮುನ್ನ ಪಾಯಿಂಟ್ ಟೇಬಲ್ ನಲ್ಲಿ ಕೇರಳ ಮೂರನೇ ಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಜಯ, ಒಂದು ಡ್ರಾ ಮಾಡಿಕೊಂಡಿರುವ ನಾರ್ತ್ ಈಸ್ಟ್ ಯುನೈಟೆಡ್ ಎಫ್ಸಿ ಅಗ್ರ ಸ್ಥಾನದಲ್ಲಿದೆ. ಮೊದಲ ಪಂದ್ಯ ಸೋತು ಮುಂಬೈ 9ನೇ ಸ್ಥಾನದಲ್ಲಿತ್ತು.

ಮುಂಬೈ ಸಿಟಿ ಎಫ್ಸಿ ತಂಡ: ಅಮೃಂದರ್ ಸಿಂಗ್ (ಜಿ.ಕೆ. / ಸಿ), ಶೌವಿಕ್ ಘೋಷ್, ಆರ್ನಾಲ್ಡ್ ಐಸಿಕೊ, ರೇನಿಯರ್ ಫೆರ್ನಾಂಡಿಸ್, ಸುಭಾಶಿಷ್ ಬೋಸ್, ರಾಫೆಲ್ ಬಾಸ್ಟೊಸ್, ಲೂಸಿಯಾನ್ ಗೋಯಾನ್, ಸೌವಿಕ್ ಚಕ್ರವರ್ತಿ, ಸೆಹ್ನಾಜ್ ಸಿಂಗ್, ಮೊಡೌ ಸೌಗೌ, ಪೌಲೊ ಮಕಾಡೋ.

ಕೇರಳ ಬ್ಲಾಸ್ಟರ್ಸ್: ಧೀರಾಜ್ ಸಿಂಗ್ (ಜಿ.ಕೆ.), ನೆಮಂಜ ಲಕಿಯಕ್-ಪೆಸಿಕ್, ನಿಕೋಲಾ ಕ್ರಾಕ್ರೆವಿಕ್, ಸ್ಲಾವಿಸ್ಲಾ ಸ್ಟೋಜಾನೋವಿಕ್, ಸೀಮಿನ್ಲೆನ್ ಡಾಂಜೆಲ್, ಮಾಟೆಜ್ ಪೋಪ್ಲಾಟ್ನಿಕ್, ಮೊಹಮದ್ ರಾಕಿಪ್, ಸಹಾಲ್ ಅಬ್ದುಲ್ ಸಮದ್, ಹಾಲಿಚರನ್ ನರ್ಜಾರಿ, ಸಂದೇಶ್ ಜಿಂಖನ್ (ಸಿ), ಲಲ್ರುತ್ಥಾರ.

Story first published: Saturday, October 6, 2018, 12:11 [IST]
Other articles published on Oct 6, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+