Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೇರಳದ ದಟ್ಟ ಕಾನನದ ಮಧ್ಯೆ ಫುಟ್ಬಾಲ್ ಕ್ರೇಜ್‌: ವಿಡಿಯೋ ನೋಡಿದರೆ ನೋಡುತ್ತಲೇ ಇರಬೇಕೆನಿಸುತ್ತದೆ

ವಿಶ್ವದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಫುಟ್ಬಾಲ್ ಜ್ವರ ಆವರಿಸಿಕೊಳ್ಳಲಿದೆ. ಇನ್ನು ಇದರ ಕಾವು ಭಾರತದಲ್ಲೂ ಕಾಣಿಸಿಕೊಳ್ಳುತ್ತಿದೆ. ಭಾರತದ ಫುಟ್ಬಾಲ್‌ ಪ್ರೇಮಿಗಳು ತಮ್ಮ ತಮ್ಮ ತಂಡಗಳನ್ನು ಬೆಂಬಲಿಸಲು ಸಜ್ಜಾಗಿದ್ದಾರೆ. ಇನ್ನು ದಿನೇ ದಿನೇ ಭಾರತದಲ್ಲೂ ಫುಟ್ಬಾಲ್‌ ಕ್ರೇಜ್‌ ಹೆಚ್ಚುತ್ತಲೇ ಇದೆ. ಕೇರಳದಲ್ಲಿ ಫುಟ್‌ಬಾಲ್ ಕ್ರೇಜ್ ಸಾಮಾನ್ಯ. ತ್ರಿಶೂರ್ ಕಾಡುಗಳ ಮಧ್ಯೆ ಜನರ ಫುಟ್ಬಾಲ್‌ ಪ್ರೀತಿಗೆ ಈ ವರದಿ ಸಾಕ್ಷಿ.

ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಫುಟ್ಬಾಲ್‌ ಪ್ರೀತಿ ಹೆಚ್ಚಿದೆ. ಕೇರಳದ ಶಹರ ಹಾಗೂ ಹಳ್ಳಿಗಳಲ್ಲೂ ಫುಟ್ಬಾಲ್‌ ಕ್ರೀಡೆಗೆ ಜನರು ಮನಸೋತಿದ್ದಾರೆ. ಮೂಲ ಸೌಕರ್ಯಗಳು ಇಲ್ಲದೇ ಇದ್ದಾಗ, ಫುಟ್ಬಾಲ್‌ ಆಡುವುದನ್ನು ಮೈಗೂಡಿಸಿಕೊಂಡಿರುವ ಜನರು ಕಾಡಿನ ಮಧ್ಯದಲ್ಲಿ ಆಟವನ್ನು ಆನಂದಿಸುತ್ತಾರೆ. ಇಲ್ಲಿ ಆಧುನಿಕ ಸೌಲಭ್ಯಗಳಿಲ್ಲದಿದ್ದರೂ, ಇಲ್ಲಿನ ಯುವಕರ ರಕ್ತದಲ್ಲಿ ಫುಟ್‌ಬಾಲ್ ಹಾಸುಹೊಕ್ಕಾಗಿದೆ.

Kerala

ತ್ರಿಶೂರ್‌ನ ಅದಿರಪ್ಪಿಳ್ಳಿ, ಮಲಕಪ್ಪಾರ ಅಥವಾ ವಜಾಚಲ್‌ನಂತಹ ಅರಣ್ಯ ಪ್ರದೇಶಗಳಲ್ಲಿ ದಟ್ಟ ಕಾನನ. ಇಲ್ಲಿನ ಜನರು ಫುಟ್ಬಾಲ್‌ ಆಟವನ್ನು ಆಡಲು ಸಣ್ಣ ಖಾಲಿ ಜಾಗಗಳನ್ನು ಬಳಸಿಕೊಂಡು ಕಾಲ್ಚಳಕ ತೋರಿಸುತ್ತಾರೆ. ರಬ್ಬರ್/ಟೀ ತೋಟಗಳ ನಡುವಿನ ಬಯಲುಗಳೇ ಇಲ್ಲಿನ ಕ್ರೀಡಾಂಗಣಗಳು. ಇಲ್ಲಿನ ಜನರಿಗೆ ಫುಟ್ಬಾಲ್ ಪರಿಕರಗಳು ಸಾಮಾನ್ಯವಾಗಿ ಲಭ್ಯವಿಲ್ಲದೇ ಇದ್ದಾಗ, ಸಿಗುವ ವಸ್ತುಗಳನ್ನು ಬಳಸಿಕೊಂಡು ಫುಟ್ಬಾಲ್ ಆಡುತ್ತಾರೆ. ಇವರು ಬಿದಿರಿನ ಕಡ್ಡಿಗಳನ್ನು ಬಳಸಿ ಗೋಲ್‌ ಪೋಸ್ಟ್‌ ಮಾಡುತ್ತಾರೆ.

ಕಣ್ಮನ ಸೆಳೆಯುವ ಫುಟ್ಬಾಲ್‌ ಮೈದಾನ

ಫುಟ್ಬಾಲ್‌ ಆಟವನ್ನು ಆಡಬೇಕು ಎಂದು ಯುವಕರು ಕಲ್ಲು ಮುಳ್ಳುಗಳನ್ನು ಲೆಕ್ಕಿಸದೇ ಆಟವನ್ನು ಆಡುತ್ತಾರೆ. ಕಾಡಿನಲ್ಲಿನ ಮಣ್ಣು ಹಾಗೂ ಗಿಡಗಳಿಂದ ಬಿದ್ದ ಎಲೆಗಳ ಮೇಲೆ ಕಾಲಿಟ್ಟು ಈ ಆಟಗಾರರು ಕಾಲ್ಚಳಕ ಪ್ರದರ್ಶಿಸುತ್ತಾರೆ.



ಈ ಕಾಡಿನ ಹಳ್ಳಿಗಳಲ್ಲೂ ಫುಟ್ಬಾಲ್ ಭಾರಿ ಜನಪ್ರಿಯ. ಮಳೆಗಾಲದಲ್ಲಿ ಮಳೆ ಸುರಿಯುತ್ತಿದ್ದರೂ, ಕೆಸರು ಮಯವಾದ ಮೈದಾನದಲ್ಲಿ ಸ್ಥಳೀಯ ಕ್ಲಬ್‌ಗಳು ಪಂದ್ಯಾವಳಿಗಳನ್ನು ಆಯೋಜಿಸುತ್ತವೆ. ಇಡೀ ಹಳ್ಳಿಯ ಜನರೇ ಒಟ್ಟಾಗಿ ಬಂದು ತಮ್ಮ ನೆಚ್ಚಿನ ತಂಡಗಳನ್ನು ಪ್ರೋತ್ಸಾಹಿಸುತ್ತಾರೆ. ಇದು ಕೇವಲ ಆಟವಲ್ಲ, ಕಾಡಿನ ಜನರನ್ನು ಒಂದೆಡೆ ಸೇರಿಸುವ ದೊಡ್ಡ ಹಬ್ಬವಾಗಿದೆ. ಸಂಜೆಯಾಗುತ್ತಿದ್ದಂತೆ ಕಾಡಾನೆ ಅಥವಾ ಚಿರತೆಗಳ ಭಯವಿರುತ್ತದೆ. ಆದರೂ ಇವರು ಹಗಲಿನ ಬೆಳಕಿರುವಷ್ಟೂ ಸಮಯ ಆಟದಲ್ಲಿ ಮುಳುಗಿರುತ್ತಾರೆ. ಜೆರ್ಸಿಗಳು ಅಥವಾ ತರಬೇತುದಾರರಿಲ್ಲದಿದ್ದರೂ ಕೇವಲ ಪ್ರತಿಭೆ ಮತ್ತು ಶ್ರಮದ ಬಲದಿಂದಲೇ ಅದ್ಭುತವಾಗಿ ಆಡುತ್ತಾರೆ.

ತ್ರಿಶೂರ್‌ನ ಹಸಿರು ಕಾಡುಗಳ ನಡುವೆ ಕೇಳಿಬರುವ ಫುಟ್‌ಬಾಲ್ ಕಿಕ್‌ಗಳ ಸದ್ದು, ಕ್ರೀಡೆಗೆ ಯಾವುದೇ ಗಡಿ ಅಥವಾ ಸೌಲಭ್ಯಗಳ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.

Story first published: Saturday, June 6, 2026, 8:00 [IST]
Other articles published on Jun 6, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+