ಕೇರಳ ಬ್ಲಾಸ್ಟರ್ಸ್: ತವರು ಮೈದಾನ ಬದಲಾವಣೆಗೆ ತೆರೆಮರೆಯ ಸಿದ್ಧತೆ
ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಆರಂಭಕ್ಕೆ ತೆರೆ ಮರೆಯ ಕಸರತ್ತುಗಳು ನಡೆದಿವೆ. ದೇವರು ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳ ಮೈದಾನದ ಸಮಸ್ಯೆಯನ್ನು ಎದುರಿಸುತ್ತಿದೆ. ಕೇರಳ ಬ್ಲಾಸ್ಟರ್ಸ್ ತಂಡವು ತನ್ನ ನೆಲೆಯನ್ನು ಬದಲಿಸುವ ಯೋಚನೆಯಲ್ಲಿದ್ದು, ಕೇರಳ ಉತ್ತರದತ್ತ ಮುಖ ಮಾಡಿದೆ. ಈ ಮೂಲಕ ಬಹು ದಿನಗಳಿಂದ ಕೊಚ್ಚಿಯನ್ನೇ ತನ್ನ ತವರನ್ನಾಗಿಸಿಕೊಂಡಿದ್ದ ತಂಡ ಬೇರೆ ಕಡೆಗೆ ಸ್ಥಳಾಂತರವಾಗಲಿದೆ.
ಇಂಡಿಯನ್ ಸೂಪರ್ ಲೀಗ್ ಆರಂಭದಿಂದಲೂ ಕೇರಳ ಬ್ಲಾಸ್ಟರ್ಸ್ ತಂಡ ಕೊಚ್ಚಿಯಲ್ಲಿರುವ ಜವಾಹರಲಾಲ್ ನೇಹರು ಕ್ರೀಡಾಂಗಣವನ್ನು ತನ್ನ ತವರು ಮೈದಾನವನ್ನಾಗಿಸಿಕೊಂಡಿತ್ತು. ಆದರೆ ಈ ಬಾರಿ ಕೇರಳ ತಂಡ ಕೋಝಿಕೋಡ್‌ನ ಇಎಂಎಸ್ ಕ್ರೀಡಾಂಗಣದಲ್ಲಿ ಆಡುವ ನಿರೀಕ್ಷೆಯಿದೆ.

ಐಎಸ್‌ಎಲ್ ಆರಂಭದಿಂದಲೂ ಕೇರಳ ಬ್ಲಾಸ್ಟರ್ಸ್ ತಂಡವು ಕೊಚ್ಚಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ತಮ್ಮ ತವರು ಪಂದ್ಯಗಳನ್ನು ಆಡುತ್ತಿದೆ, ಆದರೆ ಈ ಋತುವಿನಲ್ಲಿ ಅದನ್ನು ಕೋಝಿಕೋಡ್‌ನ ಇಎಂಎಸ್ ಕ್ರೀಡಾಂಗಣದಲ್ಲಿ ಆಡುವ ನಿರೀಕ್ಷೆಯಿದೆ. ಐತಿಹಾಸಿಕ ನಗರವಾದ ಕೋಝಿಕೋಡ್‌ನಲ್ಲಿ ಕೇರಳ ತಂಡ ತನ್ನ ತವರು ಪಂದ್ಯಗಳನ್ನು ಆಡುವ ನಿರೀಕ್ಷೆ ಇದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರ ಬಂದಿಲ್ಲ.
ಇಎಂಎಸ್ ಕ್ರೀಡಾಂಗಣವು ಪ್ರಸ್ತುತ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲು ಯೋಗ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಈ ಮೈದಾನವನ್ನು ಸೂಪರ್ ಕ್ರಾಸ್ ಸ್ಪರ್ಧೆಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಈ ಕ್ರೀಡಾಂಗಣ ಫುಟ್‌ಬಾಲ್ ಪಂದ್ಯ ಆಯೋಜಿಸಲು ಸೂಕ್ತವಲ್ಲ. ಇನ್ನು ಈ ಕ್ರೀಡಾಂಗಣವನ್ನು ಫೆಬ್ರವರಿಯಲ್ಲಿ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಕೇರಳ ಬ್ಲಾಸ್ಟರ್ಸ್ ನಂಬಿದೆ. ಕೊಚ್ಚಿ ಕ್ರೀಡಾಂಗಣ ಬ್ಲಾಸ್ಟರ್ಸ್ ತಂಡದ ಸಾಂಪ್ರದಾಯಿಕ ನೆಲೆಯಾಗಿದ್ದರೂ, ಈ ಮೈದಾನ ಇನ್ನು ನವೀಕರಣಗೊಂಡಿಲ್ಲ.
ಮೂಲಸೌಕರ್ಯಗಳ ಕೊರತೆ
ಕೇರಳ ಬ್ಲಾಸ್ಟರ್ಸ್ ಈ ಹಿಂದೆ ಕ್ರೀಡಾಂಗಣದ ನಿರ್ವಹಣೆಯನ್ನು ಮಾಡುತ್ತಿತ್ತು. ಫುಟ್ಬಾಲ್ ದೈತ್ಯ ಆಟಗಾರ ಲಿಯೋನೆಲ್ ಮೆಸ್ಸಿ ಈ ಮೈದಾನಕ್ಕೆ ಭೇಟಿ ನೀಡುವ ಸಂಭವವಿತ್ತು. ಆದರೆ ಈ ಪ್ಲ್ಯಾನ್ ಫಲಿಸಲಿಲ್ಲ. ಇದರಿಂದಾಗಿ ಕ್ರೀಡಾಂಗಣದ ಸ್ಥಿತಿ ಹದಗೆಟ್ಟಿದೆ. ಈ ಮೈದಾನದಲ್ಲಿ ಇನ್ನು ಎಲ್‌ಇಡಿ ಫ್ಲಡ್ ಲೈಟ್‌ಗಳನ್ನು ಅಳವಡಿಸಿಲ್ಲ. ಈ ಮೈದಾನದಲ್ಲಿ ಮೂಲಭೂತ ಸೌಲಭ್ಯಗಳು ಸಹ ಪೂರ್ಣಗೊಂಡಿಲ್ಲ. ಈ ಮೈದಾನದ ಅಭಿವೃದ್ಧಿಗೆ ಹೆಚ್ಚಿನ ಹಣ ಪೋಲಾಗುತ್ತದೆ ಎಂದು ತಿಳಿದು ಬ್ಲಾಸ್ಟರ್ ಬೇರೆ ಯೋಜನೆ ಮಾಡಿಕೊಂಡಿದೆ.
ಬ್ಲಾಸ್ಟರ್ಸ್ ಎಲ್ಲಿ ಆಡಬಹುದು?
ಈ ಎಲ್ಲ ಸಮಸ್ಯೆಗಳ ನಡುವೆ, ಕೆಬಿಎಫ್‌ಸಿ ಮಂಜೇರಿಯ ವಯ್ಯನಾಡ್ ಕ್ರೀಡಾಂಗಣವನ್ನು ಕೊನೆಯ ಆಯ್ಕೆಯಾಗಿ ಬ್ಲಾಸ್ಟರ್ಸ್ ಹೊಂದಿದೆ. ಇದೇ ಮೈದಾನದಲ್ಲಿ ಕೇರಳ ಸೂಪರ್ ಲೀಗ್ ಪಂದ್ಯ ಆಯೋಜಿಸಿತ್ತು. ಮಂಜೇರಿಯ ಕ್ರೀಡಾಂಗಣವು ಉತ್ತಮವಾಗಿದ್ದರೂ, ಸಾರಿಗೆ, ಹೋಟೇಲ್‌ಗಳ ಕೊರತೆ ಕಲ್ಪಿಸುವುದು ಕಷ್ಟವಾಗಿದೆ. ಇದರಿಂದಾಗಿ ಕೇರಳ ಬ್ಲಾಸ್ಟರ್ಸ್ ಬೇರೆ ಮೈದಾನದತ್ತ ಚಿತ್ತ ನೆಟ್ಟಿದೆ. ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಕೋಝಿಕೋಡ್ ಕ್ರೀಡಾಂಗಣವು ಪ್ರಾಥಮಿಕ ಆಯ್ಕೆಯಾಗಿದೆ. ಋತುವಿನ ಆರಂಭಕ್ಕೂ ಮುನ್ನ ಕ್ರೀಡಾಂಗಣ ಸಿದ್ಧವಾಗಬಹುದು ಎಂದು ತಿಳಿದು ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications