Kylian Mbappe: ಸ್ಟಾರ್ ಫುಟ್ಬಾಲ್ ಆಟಗಾರನ ಮೇಲೆ ಅತ್ಯಾಚಾರದ ಗಂಭೀರ ಆರೋಪ
ವಿಶ್ವದಲ್ಲೇ ತನ್ನ ವಿಶಿಷ್ಠ ಆಟದ ಶೈಲಿಯಿಂದ ಹಲವು ಫುಟ್ಬಾಲ್ ಆಟಗಾರರು ಹೆಸರು ಮಾಡಿದ್ದಾರೆ. ಈ ಸಾಲಿಗೆ ಫ್ರೆಂಚ್ ಸ್ಟಾರ್ ಆಟಗಾರ ಕೈಲಿಯನ್ ಎಂಬಪ್ಪೆ ಸೇರಿದ್ದಾರೆ. ಕತಾರ್‌ದಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲೂ ಎಂಬಪ್ಪೆ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದರು. ಆದರೆ ಸ್ಟಾರ್ ಆಟಗಾರ್ತಿ ಮೇಲೆ ಇವರು ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪೊಲೀಸರು ಸಹ ತಮ್ಮ ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಫ್ರೆಂಚ್ ಸ್ಟಾರ್ ಆಟಗಾರ ಮೌನ ಮುರಿದಿದ್ದಾರೆ.
ಸ್ಪೀಡಿಶ್ ಪತ್ರಿಕೆ ಎಂಬಪ್ಪೆ ಅವರ ಅತ್ಯಾಚಾರದ ಬಗ್ಗೆ ಮೊದಲ ಬಾರಿಗೆ ವರದಿಯನ್ನು ಮಾಡಿತ್ತು. ಆದರೆ ವರದಿಯಲ್ಲಿ ಪತ್ರಿಕೆ ಆರೋಪಿಯ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಇನ್ನೊಂದು ಪತ್ರಿಕೆ ಈ ಅತ್ಯಾಚಾರ ಪ್ರಕರಣದಲ್ಲಿ ಸ್ಟಾರ್ ಫುಟ್ಬಾಲ್ ಆಟಗಾರ ಎಂಬಪ್ಪೆ ಭಾಗಿಯಾಗಿದ್ದರ ಬಗ್ಗೆ ವರದಿಯನ್ನು ಮಾಡಿತ್ತು. ಪೊಲೀಸರು ಈ ಬಗ್ಗೆ ಗಂಭೀರ ತನಿಖೆ ನಡೆಸುತ್ತಿದ್ದಾರೆ ಎಂದು ಪತ್ರಿಕೆ ವರದಿ ಮಾಡಿತ್ತು. ಇಷ್ಟೆಲ್ಲಾ ಬೆಳವಣಿಗೆಗಳ ಬೆನ್ನಲ್ಲೆ ಎಂಬಪ್ಪೆ ಅವರು ತಮ್ಮ ಮೌನವನ್ನು ಮುರಿದಿದ್ದಾರೆ.

ಎಂಬಪ್ಪೆ ಪೋಸ್ಟ್ ವೈರಲ್
ಕೈಲಿಯನ್ ಎಂಬಪ್ಪೆ ತಮ್ಮ ಸಾಮಾಜಿಕ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಮೇಲಿನ ಆರೋಪವನ್ನು ಅವರ ತಳ್ಳಿ ಹಾಕಿದ್ದಾರೆ. ಅಲ್ಲದೆ ಈ ವಿಷಯದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಎಂಬಪ್ಪೆ ಬೆಂಬಲಕ್ಕೆ ನಿಂತ ಸ್ನೇಹಿತರು
ಸ್ಟಾರ್ ಫುಟ್ಬಾಲ್ ಆಟಗಾರನ ಮೇಲೆ ಅತ್ಯಾಚಾರ ಆರೋಪ ಕೇಳಿ ಬರುತ್ತಿದ್ದಂತೆ ಎಂಬಪ್ಪೆ ಸ್ನೇಹಿತರು ಸಹ ಮೌನ ಮುರಿದಿದ್ದರು. ಎಂಬಪ್ಪೆ ಅವರ ಮೇಲೆ ಆರೋಪವನ್ನು ನಿರಾಕರಿಸಿದ್ದ ಅವರು ಇದ ಅಸಂಬದ್ಧ ಎಂದು ದೂರಿದ್ದರು. ಎಂಬಪ್ಪೆ ಅವರ ಖ್ಯಾತಿಯನ್ನು ಕಡಿಮೆ ಮಾಡಲು ಈ ರೀತಿಯಾದ ಸಂಚು ರೂಪಿಸಲಾಗಿದೆ ಎಂದು ತಿಳಿಸಿದ್ದರು.

ಎಂಬಪ್ಪೆ ಅವರು ಸದ್ಯ ಪಿಎಸ್‌ಜಿ ವಿರುದ್ಧ ಧ್ವನಿ ಎತ್ತಿದ್ದಾರೆ. ಇವರಿಬ್ಬರ ನಡವೆ ವಿವಾದ ನಡೆದಿದೆ. ಅಂದಹಾಗೆ ಕ್ಲಬ್ ತನಗೆ 60 ಮಿಲಿಯನ್ ಯುಎಸ್ ಡಾಲರ್ ನೀಡುವುದು ಬಾಕಿ ಇದೆ ಎಂದು ಎಂಬಪ್ಪೆ ಹೇಳಿಕೊಂಡಿದ್ದಾರೆ. ಎಂಬಪ್ಪೆ ಪಿಎಸ್‌ಜಿ ಕ್ಲಬ್ ಪರವಾಗಿ ಏಳು ವರ್ಷಗಳ ಕಾಲ ಆಡಿದ ನಂತರ ಈಗ ರಿಯಲ್ ಮ್ಯಾಡ್ರಿಡ್ ತಂಡದ ಪರ ಆಡುತ್ತಿದ್ದಾರೆ. ಎಂಬಪ್ಪೆ ಫ್ರಾನ್ಸ್‌ನ ಪ್ರಸಿದ್ಧ ಫುಟ್ಬಾಲ್ ಆಟಗಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications