Euro 2024: ಮೂಗು ಮುರಿತಕ್ಕೆ ಒಳಗಾದ ಕೈಲಿಯನ್ ಎಂಬಪ್ಪೆ; ಆಸ್ಟ್ರೀಯಾ ವಿರುದ್ಧ ಫ್ರಾನ್ಸ್ ಗೆಲುವು!
ಜೂನ್ 18 ಮಂಗಳವಾರ, ಜರ್ಮನಿಯ ಡಸೆಲ್ಡಾರ್ಫ್‌ನಲ್ಲಿ ನಡೆಯುತ್ತಿರುವ 2024ರ ಯುರೋ ಫುಟ್‌ಬಾಲ್ ಟೂರ್ನಿಯಲ್ಲಿ (ಸೋಮವಾರ) ಆಸ್ಟ್ರಿಯಾ ವಿರುದ್ಧ ಫ್ರಾನ್ಸ್ 1-0 ಗೋಲುಗಳಿಂದ ಜಯಗಳಿಸಿದೆ.
ಇದೇ ವೇಳೆ ಫ್ರಾನ್ಸ್ ತಂಡದ ನಾಯಕ ಹಾಗು ಸ್ಟಾರ್ ಫುಟ್‌ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಅವರು ಮೂಗು ಮುರಿತಕ್ಕೆ ಒಳಗಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಕೈಲಿಯನ್ ಎಂಬಪ್ಪೆ ಅವರು ಪಂದ್ಯದ ಅರ್ಧದಲ್ಲೇ ಮೈದಾನದಿಂದ ಹೊರ ನಡೆದಿದ್ದಾರೆ.

ಈ ಬಗ್ಗೆ ಫ್ರಾನ್ಸ್ ತಂಡದ ಕೋಚ್ ಡಿಡಿಯರ್ ಡೆಶಾಂಪ್ಸ್ ಅವರು ಮಾಹಿತಿ ನೀಡಿದ್ದಾರೆ. ಸೋಮವಾರ ಡಸೆಲ್ಡಾರ್ಫ್‌ನಲ್ಲಿ ನಡೆದ ಆಸ್ಟ್ರಿಯಾ-ಫ್ರಾನ್ಸ್ ಪಂದ್ಯದ ದ್ವಿತೀಯಾ ಅರ್ಧದಲ್ಲಿ ಈ ಅಹಿತಕರ ಘಟನೆ ನಡೆದಿದೆ.
ಎಂಬಪ್ಪೆ ಆಸ್ಟ್ರಿಯಾದ ಡಿಫೆಂಡರ್ ಕೆವಿನ್ ಡಾನ್ಸೊ ಅವರೊಂದಿಗೆ ಮುಖಾಮುಖಿಯಾದಾಗ ಗಾಯಾಗೊಂಡಿದ್ದಾರೆ. ಮೂಗಿಗೆ ಎಟು ಬಿದ್ದ ರಭಸಕ್ಕೆ ಎಂಬಪ್ಪೆ ನೋವಿನಿಂದ ಮೈದಾನದಲ್ಲೇ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಘಟನೆ ಬಳಿಕ ಎಂಬಪ್ಪೆಅವರನ್ನು ರಾಷ್ಟ್ರೀಯ ತಂಡದ ಬೇಸ್ ಕ್ಯಾಂಪ್‌ಗೆ ಕರೆದುಕೊಂಡು ಹೋಗಲಾಗಿದೆ.
ವರದಿಗಳ ಪ್ರಕಾರ, ಎಂಬಪ್ಪೆ ಅವರಿಗೆ ಡಾ. ಫ್ರಾಂಕ್ ಲೆ ಗಾಲ್ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಟಕ್ಕೆ ಮರಳಿದ್ದರು. ಆದರೆ ನೋವಿನಿಂದ ಮುಖವನ್ನು ಹಿಡಿದುಕೊಂಡು ಮತ್ತೆ ನೆಲಕ್ಕೆ ಬಿದ್ದರು. ಈ ವೇಳೆ ಎಂಬಪ್ಪೆ ಮೂಗಿನ ಮೂಳೆ ಮುರಿದಿರುವುದು ಧೃಡಪಟ್ಟಿದೆ.
ಇನ್ನು ಹಲವು ದಿನಗಳ ವರೆಗೂ ಕೈಲಿಯನ್ ಎಂಬಪ್ಪೆ ಅವರಿಗೆ ಚಿಕಿತ್ಸೆ ಮುಂದುವರೆಯಲಿದ್ದು, ಸದ್ಯಕ್ಕೆ ಶಸ್ತ್ರಚಿಕಿತ್ಸೆಗೆ ಮಾಡಲು ಸಾಧ್ಯವಿಲ್ಲ. ಆದರೆ ಚಿಕಿತ್ಸೆ ಮುಗಿದ ನಂತರ ಆಟಕ್ಕೆ ಮರಳಬಹುದು ಎಂದು ವರದಿಯಾಗಿದೆ. ಶುಕ್ರವಾರದಂದು ಫ್ರಾನ್ಸ್ ಮುಂದಿನ ಪಂದ್ಯದಲ್ಲಿ ಗ್ರೂಪ್ ಅಗ್ರಸ್ಥಾನದಲ್ಲಿರುವ ನೆದರ್ಲ್ಯಾಂಡ್ಸ್ ಅನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications