Euro Cup Football 2024: ಯುರೋ ಕಪ್‌ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಯಾರು ಗೊತ್ತೇ?
ಜುಲೈ 10 ಬುಧವಾರ, ಯೂರೋ ಕಪ್ 2024ರ ಸೆಮಿ ಫೈನಲ್‌ನಲ್ಲಿ ಸ್ಪೇನ್ ಎದುರು ಫ್ರಾನ್ಸ್ ಸೋಲು ಅನುಭವಿಸಿದೆ. ಫ್ರಾನ್ಸ್ ವಿರುದ್ಧ 2-1 ಗೋಲುಗಳಿಂದ ಸ್ಪೇನ್ ರೋಚಕ ಜಯ ಸಾಧಿಸಿದೆ.
ನಾಕೌಟ್ ಪಂದ್ಯದಲ್ಲಿ ಫ್ರಾನ್ಸ್ ನಾಯಕ ಕೈಲಿಯನ್ ಎಂಬಪ್ಪೆ ಅವರು ಅಮೋಘ ಪ್ರದರ್ಶನ ನೀಡಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಯುರೋ ಕಪ್ ಟೂರ್ನಿಯಲ್ಲಿ ಸ್ಪೇನ್ 5ನೇ ಬಾರಿಗೆ ಫೈನಲ್ ತಲುಪಿರುವ ಸಾಧನೆ ಮಾಡಿದೆ.

ಫ್ರಾನ್ಸ್ ಎದುರು ಸ್ಪೇನ್ ಗೆಲುವಿಗೆ ಮೊದಲು ಸ್ಪೇನ್ ಫಾರ್ವರ್ಡ್ ಆಟಗಾರ ಲ್ಯಾಮಿನ್ ಯಮಲ್ ಅವರು ಗೋಲು ಹೊಡೆದು ಅಡಿಪಾಯ ಹಾಕಿದರು. ಈ ಗೋಲು ಹೊಡೆಯುತ್ತಿದ್ದಂತೆ ಲ್ಯಾಮಿನ್ ಯಮಲ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
ಲ್ಯಾಮಿನ್ ಯಮಲ್ ಯುರೋ ಕಪ್ ಇತಿಹಾಸದಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಯಮಲ್ ಅವರ ವಯಸ್ಸು 16 ವರ್ಷ 362 ದಿನಗಳು. ಜುಲೈ 13 ರಂದು ಯಮಲ್ 17ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಜೊಹಾನ್ ವಾನ್ ಲ್ಯಾಂಥನ್ ಅವರ 18 ವರ್ಷ ಮತ್ತು 141 ದಿನಗಳ ದಾಖಲೆಯನ್ನು ಲ್ಯಾಮಿನ್ ಯಮಲ್ ಹಿಂದಿಕ್ಕಿದರು. ವಿಶ್ವಕಪ್‌ನಲ್ಲಿ ಬ್ರೆಜಿಲ್‌ಗಾಗಿ ಮೊದಲ ಗೋಲು ಗಳಿಸಿದಾಗ ಫುಟ್‌ಬಾಲ್ ದಂತಕಥೆ ಪೀಲೆ ಅವರಿಗೆ 17 ವರ್ಷ ಮತ್ತು 239 ದಿನಗಳು ಅಗಿತ್ತು.
ಯುರೋ ಕಪ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಲಾಂಗ್ ರೇಂಜರ್ ಶಾಟ್ ಮೂಲಕ ಯಮಲ್ ಯುರೋ ಕಪ್‌ನಲ್ಲಿ ಮೊದಲ ಗೋಲು ಗಳಿಸಿದರು. ಪಂದ್ಯದ 21ನೇ ನಿಮಿಷದಲ್ಲಿ ಯಮಲ್ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಈ ಭರ್ಜರಿ ಗೋಲಿನೊಂದಿಗೆ ಸ್ಪೇನ್ ತಂಡ ಯುರೋ ಫೈನಲ್ ಪ್ರವೇಶಿಸಿತು.
ಸ್ಪೇನ್ ಪರ ಡ್ಯಾನಿ ಓಲ್ಮೊ ಮತ್ತೊಂದು ಗೋಲು ದಾಖಲಿಸಿದರು. ಕೊಲೊ ಮುವಾನಿ ಕೂಡ ಫ್ರಾನ್ಸ್ ಪರ ಗೋಲು ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications