For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನನ್ನ ಖಾತೆ ಹ್ಯಾಕ್ ಆಗಿತ್ತು: ತಾನು ಸಲಿಂಗಕಾಮಿ ಎಂದು ಟ್ವೀಟ್ ಮಾಡಿದ್ದ ದಿಗ್ಗಜ ಇಕರ್ ಕ್ಯಾಸಿಯಸ್ ಸ್ಪಷ್ಟನೆ

Legendary Spain and Madrid football player Iker Casillas tweeted as Iam gay then said Account Hacked

ವಿಶ್ವ ಫುಟ್‌ಬಾಲ್‌ನಲ್ಲಿ ದಿಗ್ಗಜನಾಗಿ ಖ್ಯಾತರಾದ ಸ್ಪೇನ್‌ನ ಮಾಜಿ ಆಟಗಾರ ಇಕರ್ ಕ್ಯಾಸಿಯಸ್ ತಾನೊರ್ವ ಸಲಿಂಗಕಾಮಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡು ಸುದ್ದಿಯಾಗಿದ್ದಾರೆ. 'ನಾನೊಬ್ಬ ಸಲಿಂಗಕಾಮಿ, ನೀವು ನನ್ನನ್ನು ಗೌವಿಸುತ್ತೀರಿ ಎಂದು ಭಾವಿಸುತ್ತೇನೆ' ಎಂದು ಟ್ವೀಟ್ ಮಾಡಿದ ಇಕರ್ ಕ್ಯಾಸಿಯರ್ ಬಳಿಕ ಆ ಟ್ವೀಟ್‌ಅನ್ನು ಡಿಲೀಟ್ ಮಾಡಿದ್ದಾರೆ. ಕ್ಯಾಸಿಯಸ್ ಈ ಘೋಷಣೆ ಮಾಡಿದ ಬಳಿಕ ಅಭಿಮಾನಿಗಳು ಸ್ಪ್ಯಾನಿಷ್ ದಿಗ್ಗಜ ಆಟಗಾರನಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ಯಾಸಿಯಸ್ ತಮ್ಮ ಟ್ವಿಟ್ಟರ್ ಅಕೌಟ್ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.

41ರ ಹರೆಯದ ಕ್ಯಾಸಿಯಸ್ ಅವರು ಈ ಹಿಂದೆ ಕ್ರೀಡಾ ಪತ್ರಕರ್ತೆ ಸಾರಾ ಕಾರ್ಬೊನೆರೊ ಅವರನ್ನು ವಿವಾಹವಾಗಿದ್ದರು. ಐದು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಈ ಜೋಡಿ ಕಳೆದ ಮಾರ್ಚ್‌ನಲ್ಲಿ ಬೇರ್ಪಟ್ಟಿದ್ದರು. ಕ್ಯಾಸಿಯಸ್ ಮತ್ತು ಸಾರಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಕ್ಯಾಸಿಯಸ್ ಅವರು ಕೇವಲ 9 ವರ್ಷದವರಾಗಿದ್ದಾಗ ರಿಯಲ್ ಮ್ಯಾಡ್ರಿಡ್ ಕ್ಲಬ್‌ಗೆ ಸೇರಿಕೊಂಡಿದ್ದರು. ಈ ಕ್ಲಬ್‌ನಲ್ಲಿ 25 ವರ್ಷ ಕಳೆದ ಈ ಆಟಗಾರ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸ್ಪೇನ್‌ ತಂಡಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಸಾಧನೆ ಮಾಡಿದ್ದಾರೆ. ಅಲ್ಲದೆ ಯುರೋಪಿಯನ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು 2 ಬಾರಿ ಮುಡಿಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನು ಮತ್ತೊಂದು ಪ್ರತಿಷ್ಠಿತ ಫುಟ್ಬಾಲ್ ಲೀಗ್ ಟೂರ್ನಿಯಾದ ಲಾ ಲೀಗಾ ಪ್ರಶಸ್ತಿಯನ್ನು ಐದು ಬಾರಿ ಗೆದ್ದ ಸಾಧನೆ ಮಾಡಿರುವ ಕ್ಯಾಸಿಯಸ್ ಮೂರು ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಿಯಲ್ ಮ್ಯಾಡ್ರಿಡ್ ತಂಡವನ್ನು ಮುನ್ನಡೆಸಿದ್ದು ಈ ತಂಡದ ಪರವಾಗಿ 19 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

2004 ಮತ್ತು 2008ರ ಅವಧಿಯಲ್ಲಿ ಕ್ಯಾಸಿಯಸ್ ಪತ್ರಕರ್ತೆ ಕಾರ್ಬೊನೆರೊ ಹಾಗೂ ಇವಾ ಗೊನ್ಜಾಲೆಜ್ ಜೊತೆ ಡೇಟಿಂಗ್ ಮಾಡಿ ಸುದ್ದಿಯಾಗಿದ್ದರು. ಇನ್ನು 2010 ರಲ್ಲಿ ಸ್ಪೇನ್ ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸಿ ವಿಶ್ವಕಪ್ ಗೆದ್ದಾಗ ಕ್ರೀಡಾ ಪತ್ರಕರ್ತೆ ಕಾರ್ಬೊನೆರೊ ಅವರೊಂದಿಗೆ ಸಂದರ್ಶನದ ಬಳಿಕ ತಬ್ಬಿಕೊಂಡು ಮುತ್ತಿಟ್ಟಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಕ್ಯಾಸಿಯಸ್ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆ ಭಿನ್ನ ರೀತಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕೆಲವರು ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಕಟುವಾಗಿ ಟೀಕಿಸಿದ್ದಾರೆ. ಆದರೆ ಕ್ಯಾಸಿಯಸ್ ತಾವು ಮಾಡಿದ ಟ್ವೀಟ್‌ಅನ್ನು ಕೆಲ ಕ್ಷಣಗಳ ಬಳಿಕ ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದರು.

ಮೂಲಗಳ ಪ್ರಕಾರ ಕ್ಯಾಸಿಯಸ್‌ಗೆ ಮಹಿಳೆಯೊಬ್ಬರ ಜೊತೆಗೆ ಹೊಸ ಸಂಬಂಧವಿದೆ ಎಂಬುದನ್ನು ಕೆಲ ಮಾಧ್ಯಮಗಳು ಸುದ್ದಿ ಮಾಡಲು ತೊಡಗಿದ್ದವು. ಈ ಹಿನ್ನೆಲೆಯಲ್ಲಿ ಸ್ಪೇಯ್ನ್ ದಿಗ್ಗಜ ತಮಾಷೆಗಾಗಿ ಆ ಟ್ವೀಟ್ ಮಾಡುವ ಮೂಲಕ ತಾನು ಸಲಿಂಗಕಾಮಿ ಎಂದು ಹೇಳಿಕೊಂಡಿದ್ದಾರೆ ಎಂದಿದ್ದಾರೆ. ಆದರೆ ಬಳಿಕ ಅದನ್ನು ಕ್ಯಾಸಿಯಸ್ ಡಿಲೀಟ್ ಮಾಡಿದ್ದಾರೆ. ಆದರೆ ಇದೀಗ ತನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎನ್ನುವ ಮೂಲಕ ತಾನು ಆ ಟ್ವೀಟ್ ಮಾಡಿಲ್ಲ ಎಂಬ ಸಂದೇಶ ನೀಡಿದ್ದಾರೆ.

ಕ್ಯಾಸಿಯಸ್ ಅವರು ವೃತ್ತಿಜೀವನದಲ್ಲಿ ಕೊನೆಯದಾಗಿ ಪೋರ್ಟೊ ಕ್ಲಬ್ ಪರವಾಗಿ ಆಡಿದ್ದರು. ಆ ತಂಡದ ತರಬೇತಿಯ ಸಂದರ್ಭದಲ್ಲಿ ಕ್ಯಾಸಿಯಸ್ ಹೃದಯಾಘಾತಕ್ಕೆ ಒಳಗಾಗಿದ್ದರು. ನಂತರ 2020ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. ಅವರು ಸ್ಪೇನ್ ಪರವಾಗಿ 167 ಪಂದ್ಯಗಳನ್ನು ಆಡಿದ್ದು ರಿಯಲ್ ಮ್ಯಾಡ್ರಿಡ್ ಪರವಾಗಿ 510 ಪಂದ್ಯಗಳನ್ನು ಆಡಿದ್ದಾರೆ. ಪೋರ್ಟೊ ಪರವಾಗಿ 116 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

Story first published: Sunday, October 9, 2022, 23:08 [IST]
Other articles published on Oct 9, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+