Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup: ಮೆಸ್ಸಿ ಕಣ್ಣು ನೆಟ್ಟಿರುವ ಟಾಪ್‌ 5 ದಾಖಲೆಗಳು

ಫಿಫಾ 2026ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯನ್ನು ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ದೇಶಗಳು ಆಯೋಜನೆ ಮಾಡಲಿವೆ. ಈ ಟೂರ್ನಿಯಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ತಮ್ಮ ದೇಶಗಳ ಪರ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಇದೇ ವೇಳೆ ಎಲ್ಲರ ಕಣ್ಣುಗಳು ಅರ್ಜೆಂಟೀನಾ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಮೇಲೆ ನೆಟ್ಟಿರಲಿವೆ. ಇವರು ಈ ಫಿಫಾ ವಿಶ್ವಕಪ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ.

6ನೇ ವಿಶ್ವಕಪ್ ಆಡಲಿರುವ ಮೆಸ್ಸಿ

ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಫಿಫಾ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಆಡಲು ಕಣಕ್ಕೆ ಇಳಿಯುತ್ತಿದ್ದಂತೆ 6 ಫುಟ್ಬಾಲ್ ವಿಶ್ವಕಪ್ ಆಡಿದ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಇವರು 2006, 2010, 2014, 2018 ಮತ್ತು 2022 ಸಹ ಈ ಮೊದಲು ಆಡಿದ್ದರು. ಇನ್ನು ಇದೇ ದಾಖಲೆಯನ್ನು ಪೋರ್ಚಗಲ್ ತಂಡದ ಕ್ರಿಸ್ಟಿಯಾನೋ ರೊನಾಲ್ಡೊ, ಮೆಕ್ಸಿಕೊ ತಂಡದ ಗಿಲ್ಲೆರ್ಮೊ ಒಚೋವಾ ಇಂತಹದ್ದೇ ದಾಖಲೆ ಬರೆಯಲಿದ್ದಾರೆ.

Lionel Messi

4 ಗೋಲು ಬಾರಿಸುತ್ತಲೇ ದಾಖಲೆ

ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಮೆಸ್ಸಿ ಕೂಡ ತಲುಪಬಹುದು. ಮೆಸ್ಸಿ ಆಡಿದ 26 ಪಂದ್ಯಗಳಲ್ಲಿ 13 ಗೋಲುಗಳನ್ನು ಗಳಿಸಿದ್ದಾರೆ. ಜರ್ಮನಿಯ ಮಾಜಿ ಸ್ಟ್ರೈಕರ್ ಮಿರೋಸ್ಲಾವ್ ಕ್ಲೋಸ್ ಪ್ರಸ್ತುತ 16 ಗೋಲುಗಳೊಂದಿಗೆ ದಾಖಲೆಯನ್ನು ಹೊಂದಿದ್ದಾರೆ. ಈ ದಾಖಲೆಯನ್ನು ಮೆಸ್ಸಿ ಮುರಿಯಲುಬಹುದು.

ಇನ್ನೊಂದು ಅಸಿಸ್ಟ್ ಮತ್ತೊಂದು ದಾಖಲೆ

ಫುಟ್ಬಾಲ್ ಆಟದಲ್ಲಿ ಒಬ್ಬ ಆಟಗಾರನು ತನ್ನ ಸಹ-ಆಟಗಾರನಿಗೆ ಗೋಲ್ ಹೊಡೆಯಲು ಅತ್ಯಂತ ಸಹಕಾರಿಯಾಗುವಂತೆ ಪಾಸ್ ನೀಡುವುದನ್ನೇ ಅಸಿಸ್ಟ್ ಎಂದು ಕರೆಯುತ್ತಾರೆ. ಮೆಸ್ಸಿ ವಿಶ್ವಕಪ್‌ನಲ್ಲಿ 8 ಅಸಿಸ್ಟ್‌ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಈ ಮೂಲಕ ಅರ್ಜೆಂಟೀನಾ ಪರ ಡಿಯಾಗೋ ಮರಡೋನಾ ಅವರೊಂದಿಗೆ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಆದರೆ ಇನ್ನೆರಡು ಅಸಿಸ್ಟ್ ಪಂದ್ಯಾವಳಿಯ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಅವರಿಗೆ ಸಹಾಯ ಮಾಡುತ್ತದೆ.

ಮತ್ತೊಮ್ಮೆ ವಿಶ್ವಕಪ್‌

ಮೆಸ್ಸಿ ಅರ್ಜೆಂಟೀನಾ ತಂಡಕ್ಕೆ ಮತ್ತೊಂದು ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಟ್ಟರೆ ಮತ್ತೊಂದು ಐತಿಹಾಸಿಕ ಸಾಧನೆ ನಿರ್ಮಿಸಬಹುದಾಗಿದೆ. ಯಾವುದೇ ಆಟಗಾರ ನಾಯಕನಾಗಿ ಎರಡು ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ, ಇದು ಒಂದು ವಿಶಿಷ್ಟ ದಾಖಲೆಯಾಗಲಿದೆ.

ಫೈನಲ್‌ ತಲುಪಿದರೂ ಇತಿಹಾಸ

ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಯಾವೊಬ್ಬ ನಾಯಕ ತಮ್ಮ ತಂಡವನ್ನು ಮೂರು ಬಾರಿ ಫೈನಲ್‌ಗೆ ಕೊಂಡೊಯ್ದಿಲ್ಲ. ಈ ಬಾರಿಯ ವಿಶ್ವಕಪ್‌ನಲ್ಲಿ ಮೆಸ್ಸಿ ಈ ಸಾಧನೆ ಮಾಡಿದರೆ ದೊಡ್ಡ ದಾಖಲೆ ಬರೆಯಲಿದ್ದಾರೆ. ಇದಕ್ಕೂ ಮೊದಲು ಮೆಸ್ಸಿ ಮುಂದಾಳತ್ವದಲ್ಲಿ ಅರ್ಜೆಂಟೀನಾ 2014, 2022ರಲ್ಲಿ ಫೈನಲ್ ಪ್ರವೇಶಿಸಿತ್ತು. ಈ ಬಾರಿಯೂ ಫೈನಲ್ ಪ್ರವೇಶಿಸಿದರೆ ಮೆಸ್ಸಿ ಹೊಸ ಇತಿಹಾಸ ಬರೆಯಲಿದ್ದಾರೆ.

Story first published: Sunday, June 7, 2026, 8:05 [IST]
Other articles published on Jun 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+