Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ಯಾರಿಸ್ ಸೇಂಟ್ ಜರ್ಮೈನ್ ಸೇರಲಿರುವ ಲಿಯೋನೆಲ್ ಮೆಸ್ಸಿಗೆ ಪ್ಯಾರಿನಲ್ಲಿ ಅದ್ದೂರಿ ಸ್ವಾಗತ

Lionel Messi gets heros welcome in France after agreeing to join PSG

ಲೆ ಬೊರ್ಗೆಟ್: ಪ್ಯಾರಿಸ್ ಸೇಂಟ್ ಜರ್ಮನ್ (ಪಿಎಸ್‌ಜಿ) ಫುಟ್ಬಾಲ್ ಕ್ಲಬ್ ಸೇರಿಕೊಳ್ಳುವುದಕ್ಕಾಗಿ ಫ್ರಾನ್ಸ್‌ಗೆ ಬಂದ ಅರ್ಜೆಂಟೀನಾದ ಸ್ಟಾರ್ ಫುಟ್ಬಾಲರ್ ಲಿಯೋನೆಲ್ ಮೆಸ್ಸಿಗೆ ಪ್ಯಾರಿಸ್‌ನಲ್ಲಿ ಅದ್ದೂರಿ ಸ್ವಾಗತ ಲಭಿಸಿದೆ. ಬಾರ್ಸಿಲೋನಾ ಫುಟ್ಬಾಲ್‌ ಕ್ಲಬ್‌ಗೆ ಆಘಾತ ರೀತಿಯಲ್ಲಿ ವಿದಾಯ ಘೋಷಿಸಿರುವ ಮೆಸ್ಸಿ ಮಂಗಳವಾರ (ಆಗಸ್ಟ್ 10) ಪ್ಯಾರಿಸ್‌ಗೆ ಬಂದಿಳಿದಿದ್ದಾರೆ (ಚಿತ್ರಕೃಪೆ: ಸ್ವಕ್ಔಕ ಫುಟ್ಬಾಲ್).

ಆರು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ ವೋರ್ ಪ್ರಶಸ್ತಿ ಗೆದ್ದಿರುವ 34ರ ಹರೆಯದ ಲಿಯೋನೆಲ್ ಮೆಸ್ಸಿ ಮುಂಬರುವ ದಿನಗಳಲ್ಲಿ ಶ್ರೀಮಂತ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡಲಿದ್ದಾರೆ. ಫುಟ್ಬಾಲ್ ಕ್ಷೇತ್ರದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಗುರುತಿಸಿಕೊಂಡಿರುವ ಮೆಸ್ಸಿ, ಇನ್ನು ಪಿಎಸ್‌ಜಿಯಲ್ಲಿ ಮಿಂಚಲಿದ್ದಾರೆ.

ಪಿಎಸ್‌ಜಿಯಲ್ಲಿ ಈಗಾಗಲೇ ಸ್ಟಾರ್ ಆಟಗಾರರಿದ್ದಾರೆ. ಬ್ರೆಝಿಲ್ ಖ್ಯಾತ ಫುಟ್ಬಾಲಿಗ ನೇಮರ್ ಮತ್ತು ಫ್ರೆಂಚ್ ಯುವ ಆಟಗಾರ ಕೈಲಿಯನ್ ಎಂಬಪ್ಪೆ ಕೂಡ ಸದ್ಯ ಪಿಎಸ್‌ಜಿ ಕ್ಲಬ್‌ನಲ್ಲಿ ಆಡುತ್ತಿದ್ದಾರೆ. ಲೆ ಬೊರ್ಗೆಟ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವಾಗ ಮೆಸ್ಸಿ 'ದಿಸ್ ಈಸ್ ಪ್ಯಾರಿಸ್' ಟಿ ಶರ್ಟ್ ಧರಿಸಿದ್ದರು.

ಜನಪ್ರಿಯ ಕ್ರೀಡೆ ಕಬ್ಬಡಿ ಒಲಿಂಪಿಕ್ಸ್ ನಲ್ಲಿ ಇನ್ನೂ ಯಾಕೆ ಸ್ಥಾನ ಪಡೆದಿಲ್ಲ? | oneindia kannada

ವಿಮಾನ ನಿಲ್ದಾಣದ ಸಮೀಪ 'ಮೆಸ್ಸಿ ಮೆಸ್ಸಿ ಮೆಸ್ಸಿ..' ಎಂದು ಕೂಗಾಡುತ್ತಿದ್ದ ಅಭಿಮಾನಿಗಳತ್ತ ಮೆಸ್ಸಿ ಕೈ ಬೀಸಿದ್ದು ಕಂಡುಬಂತು. ಒಂದಿಷ್ಟು ಮಂದಿ ಅಭಿಮಾನಿಗಳು ಪಟಾಕಿ ಸಿಡಿಸಿ ತಮ್ಮ ಖುಷಿ ತೋರಿಕೊಂಡರು. ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ನಲ್ಲಿ ಹಲವಾರು ವರ್ಷ ಆಡಿದ್ದ ಮೆಸ್ಸಿ, ಈ ಬಾರಿ ಅಲ್ಲಿ ಒಪ್ಪಂದ ಸರಿ ಹೊಂದಲಿಲ್ಲವೆಂದು ಬಾರ್ಸಿಲೋನಾಕ್ಕೆ ವಿದಾಯ ಹೇಳಿದ್ದಾರೆ.

Story first published: Tuesday, August 10, 2021, 22:57 [IST]
Other articles published on Aug 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+