ಲಿಯೊನೆಲ್ ಮೆಸ್ಸಿ ಮೇಲೆ ನಾಲ್ಕು ಪಂದ್ಯಗಳ ನಿಷೇಧ
ಜ್ಯೂರಿಚ್ (ಸ್ವಿಜರ್ಲೆಂಡ್), ಮಾರ್ಚ್ 28: ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ, ಅರ್ಜೆಂಟೀನಾ ತಂಡದ ನಾಯಕ ಹಾಗೂ ಫಾರ್ವಾರ್ಡ್ ಕ್ರೀಡಾಳು ಲಿಯೊನೆಲ್ ಮೆಸ್ಸಿ ಮೇಲೆ ನಾಲ್ಕು ಪಂದ್ಯಗಳಿಗೆ ನಿರ್ಬಂಧ ವಿಧಿಸಿ, ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ) ಆದೇಶ ಹೊರಡಿಸಿದೆ.
ಮಾರ್ಚ್ 24ರಂದು ನಡೆದಿದ್ದ ಪಂದ್ಯವೊಂದರಲ್ಲಿ ಲೈನ್ ರೆಫರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಈ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ವರ್ಷ ನಡೆಯಲಿರುವ ಅಂತಾರಾಷ್ಟ್ರೀಯ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯಾವಳಿಯು ಈಗ ಆರಂಭವಾಗಿದೆ. ಸದ್ಯಕ್ಕೀಗ ದಕ್ಷಿಣ ಅಮೆರಿಕ ಖಂಡದಲ್ಲಿ ಈ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಾವಳಿ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ, ಮಂಗಳವಾರ, ಮೇ 24ರಂದು ಚಿಲಿ ವಿರುದ್ಧ ಪಂದ್ಯವೊಂದು ನಡೆದಿತ್ತು. ಅರ್ಜೆಂಟೀನಾ ತಂಡವು ಈ ಪಂದ್ಯದಲ್ಲಿ 1-0 ಗೋಲಿನಿಂದ ಚಿಲಿಯನ್ನು ಮಣಿಸಿತ್ತು.
ಗೋಲ್ ಡಾಟ್ ಕಾಮ್ ವರದಿಯ ಪ್ರಕಾರ, ಈ ಪಂದ್ಯದಲ್ಲಿ ನಿರತರಾಗಿದ್ದಾಗ ಲಿಯೊನೆಲ್ ಮೆಸ್ಸಿಯು ತಮ್ಮದೇ ತಂಡದ ಆಟಗಾರನಾದ ಏಂಜೆಲ್ ಡಿ ಮಾರಿಯಾ ಅವರನ್ನು ಆಕಸ್ಮಿಕವಾಗಿ ತಳ್ಳಿದ್ದರು. ತಕ್ಷಣವೇ ಇದನ್ನು ಗಮನಿಸಿದ ಲೈನ್ ರೆಫರಿ, ಮಾರ್ಸೆಲೋ ವ್ಯಾನ್ ಗಾಸ್ಸಿ, ಅರ್ಜೆಂಟೈನಾ ತಂಡಕ್ಕೆ ಪೆನಾಲ್ಟಿ ಶಿಕ್ಷೆಯನ್ನು ವಿಧಿಸಿದರು.
ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಮೆಸ್ಸಿಯು ಪಂದ್ಯ ಮುಗಿದ ನಂತರ, ಎದುರಾಳಿ ತಂಡದ ಆಟಗಾರರಿಗೆ ಹಾಗೂ ಪಂದ್ಯದ ರೆಫರಿಗಳಿಗೆ ಔಪಚಾರಿಕವಾಗಿ ಕೈ ಕುಲುಕುವಾಗ ವ್ಯಾನ್ ಗಾಸ್ಸಿಯವರ ಕೈ ಕುಲುಕುವ ಸಂದರ್ಭದಲ್ಲಿ ಹಸ್ತ ಲಾಘವದಿಂದ ಹಿಂದೆ ಸರಿದ ಮೆಸ್ಸಿ, ಕೋಪೋದ್ರಿಕ್ತರಾಗಿ, ಗಾಸ್ಸಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ, ಅವರ ಮೇಲೆ ನಿಷೇಧದ ಶಿಕ್ಷೆ ವಿಧಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications