For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮೆಸ್ಸಿ ನಿವೃತ್ತಿ ಸುಳಿವು: ಸೆ.4ರಂದು ತವರಿನಲ್ಲಿ ಕೊನೆಯ ಪಂದ್ಯ

ವಿಶ್ವದ ಸ್ಟಾರ್ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ತಮ್ಮ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ. 38 ವರ್ಷದ ಮೆಸ್ಸಿ ತಮ್ಮ ವೃತ್ತಿ ಬದುಕಿನ ಸಂಧ್ಯಾಕಾಲದಲ್ಲಿ ಇದ್ದಾರೆ. ಮೆಸ್ಸಿ ಸೆಪ್ಟೆಂಬರ್ 4 ರಂದು ಬ್ಯೂನಸ್ ಐರಿಸ್‌ನ ಎಸ್ಟಾಡಿಯೊ ಮಾನ್ಯುಮೆಂಟಲ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದ ವೇಳೆ ಕಣಕ್ಕೆ ಇಳಿಯಲಿದ್ದಾರೆ. ಇದು ಬಹುಶಃ ಮೆಸ್ಸಿ ಅವರ ಕೊನೆಯ ದೇಶೀಯ ಪಂದ್ಯವಾಗಿರುತ್ತದೆ ಎಂದು ಮೆಸ್ಸಿ ಸೂಚಿಸಿದ್ದಾರೆ.

ಲಿಯೋನೆಲ್‌ ಮೆಸ್ಸಿ ಕಾರ್ಯಕ್ರಮ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಆಪಲ್‌ ಟಿವಿಗೆ ಮೆಸ್ಸಿ ನೀಡಿದ ಸಂದರ್ಶನದಲ್ಲಿ ತಮ್ಮ ನಿವೃತ್ತಿಯ ಸುಳಿವು ನೀಡಿದ್ದಾರೆ. ತವರಿನಲ್ಲಿ ನಡೆಯುವುದು ನನಗೆ ವಿಶೇಷ ಪಂದ್ಯವಾಗಿರಲಿದೆ. ಇದು ನನಗೆ ನನ್ನ ಕೊನೆಯ ಅರ್ಹತಾ ಪಂದ್ಯವಾಗಿರಬಹುದು. ಇದರ ನಂತರ ಸ್ನೇಹಪರ ಅಥವಾ ಇತರ ಪಂದ್ಯಗಳು ನಡೆಯುತ್ತವೆಯೇ ಅಥವಾ ಇಲ್ಲವೇ ಎಂದು ನನಗೆ ತಿಳಿದಿಲ್ಲ. ಹೀಗಾಗಿ ಈ ಪಂದ್ಯವನ್ನು ವೀಕ್ಷಿಸಲು ನನ್ನ ಈಡೀ ಕುಟುಂಬ ಮೈದಾನದಲ್ಲಿ ಹಾಜರಿರಲಿದೆ. ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಪೋಷಕರು, ನನ್ನ ಒಡಹುಟ್ಟಿದವರು ಮತ್ತು ನನ್ನ ಹೆಂಡತಿಯ ಎಲ್ಲಾ ಸಂಬಂಧಿಕರು ಕ್ರೀಡಾಂಗಣದಲ್ಲಿ ಹಾಜರಿರಲಿದ್ದಾರೆ" ಎಂದು ಮೆಸ್ಸಿ ತಿಳಿಸಿದ್ದಾರೆ.

Lionel Messi hints at retirement possibly playing his last home game for Argentina

ಮಾಜಿ ವಿಶ್ವಕಪ್‌ ಚಾಂಪಿಯನ್‌ ಅರ್ಜಿಂಟೀನಾ ಈಗಾಗಲೇ 2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ದಕ್ಷಿಣ ಅಮೆರಿಕಾ ವಲಯದ ಅರ್ಹತಾ ಪಂದ್ಯಗಳಲ್ಲಿ ಅರ್ಜಿಂಟಿನಾ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಸೆ.4 ರಂದು ನಡೆಯುವ ಪಂದ್ಯ ಅರ್ಜೆಂಟೀನಾ ಪಾಲಿಗೆ ಔಪಚಾರಿಕ ಆಗಿರಲಿದೆ. ಅಲ್ಲದೆ ಮೆಸ್ಸಿ ಅವರಿಗೆ ಈ ಪಂದ್ಯ ವಿಶೇಷವಾಗಿರಲಿದೆ. ಅಲ್ಲದೆ ಅವರ ಅಭಿಮಾನಿಗಳಿಗೂ ಈ ಪಂದ್ಯ ವಿಶೇಷವಾಗಿದೆ.

ಕಾಲ್‌ಚೆಂಡಿನ ಆಟದಲ್ಲಿ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿರುವ ವಿಶ್ವದ ಕೆಲವೇ ಕೆಲವು ಆಟಗಾರರ ಪಟ್ಟಿಯಲ್ಲಿ ಅರ್ಜೆಂಟೀನಾದ ಮೆಸ್ಸಿಗೆ ಅಗ್ರ ಸ್ಥಾನ. ಇವರು ತಮ್ಮ ಅಮೋಘ ಕಾಲ್ಚಳಕದ ಮೂಲಕ ಎದುರಾಳಿ ಗೋಲಿಯನ್ನು ವಂಶಿಸುವಲ್ಲಿ ಸಫಲರಾಗಿದ್ದಾರೆ. ಇವರು ಅರ್ಜೆಂಟೀನಾ ಪರ 193 ಪಂದ್ಯಗಳನ್ನು ಆಡಿದ್ದು, ವಿಶ್ವಕಪ್‌ ಅರ್ಹತಾ ಪಂದ್ಯಗಳಲ್ಲೇ ಇವರು 31 ಗೋಲು ಬಾರಿಸಿದ್ದಾರೆ. ಕತಾರ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಭರ್ಜರಿ ಪ್ರದರ್ಶನ ನೀಡಿ 36 ವರ್ಷಗಳ ನಂತರ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

Lionel Messi hints at retirement possibly playing his last home game for Argentina

ಮೆಸ್ಸಿ ಸಾಧನೆ

ಒದು ವೇಳೆ ಸೆ.4 ರಂದು ಲಿಯೋನೆಲ್‌ ಮೆಸ್ಸಿ ತವರಿನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರೆ, ಅರ್ಜೆಂಟೀನಾ ಅಭಿಮಾನಿಗಳ ಪಾಲಿಗೆ ನಿಜಕ್ಕೂ ಇದು ಭಾವನಾತ್ಮಕ ಕ್ಷಣವಾಗಿರುತ್ತೆದ. ಇವರು ಇನ್ನು ನವೃತ್ತಿ ಘೋಷಿಸಲ್ಲವಾದರೂ, ಅವರು ನೀಡಿರುವ ಸುಳಿವು ಪುಟ್ಬಾಲ್‌ ಕ್ಷೇತ್ರದಲ್ಲಿ ಅರ್ಜೆಂಟೀನಾದ ಮತ್ತೊಂದು ಯುಗ ಅಂತ್ಯವಾಗಲಿದೆ ಎಂದು ಹೇಳಬಹುದು. ಮೆಸ್ಸಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಒಟ್ಟು 112 ಗೋಲುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರ ಸ್ಥಾನದಲ್ಲಿದ್ದಾರೆ. ಇವರು 221 ಪಂದ್ಯಗಳಲ್ಲಿ 138 ಗೋಲು ಬಾರಿಸಿದ್ದಾರೆ.

Story first published: Friday, August 29, 2025, 12:52 [IST]
Other articles published on Aug 29, 2025
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+