Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅರ್ಜೆಂಟೀನಾ ಫೈನಲ್‌ಗೆ ಪ್ರವೇಶಿಸುತ್ತಲೇ ಲಿಯೋನೆಲ್‌ ಮೆಸ್ಸಿ ವಿಶೇಷ ಕ್ಲಬ್‌ಗೆ ಎಂಟ್ರಿ

ಅರ್ಜೆಂಟೀನಾ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಸ್ಥಿರ ಪ್ರದರ್ಶನ ಮುಂದುವರೆಸಿದೆ. ಬುಧವಾರ ತಡರಾತ್ರಿ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ಮ್ಯಾಜಿಕ್ ಮಾಡಿದೆ. ಅಂತಿಮ ಕ್ಷಣದಲ್ಲಿ ಅರ್ಜೆಂಟೀನಾ ತಂಡ ಆಕ್ರಮಣಕಾರಿ ಆಟವನ್ನು ಆಡಿ ಇಂಗ್ಲೆಂಡ್ ತಂಡದ ಫೈನಲ್‌ಗೆ ಲಗ್ಗೆ ಇಟ್ಟಿದೆ. ಜುಲೈ 20 ರಂದು ನ್ಯೂಯಾರ್ಕ್‌ ಜೆರ್ಸಿಯಲ್ಲಿ ಅರ್ಜೆಂಟೀನಾ ಹಾಗೂ ಸ್ಪೇನ್‌ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಮೂಲಕ ಅರ್ಜೆಂಟೀನಾ ತಂಡದ ನಾಯಕ ಮೆಸ್ಸಿ ವಿಶಿಷ್ಟ ದಾಖಲೆಯನ್ನು ಬರೆದರು.

ಫಿಫಾ ವಿಶ್ವಕಪ್‌ನಲ್ಲಿ ಹಲವು ದಾಖಲೆಗಳನ್ನು ಈಗಾಗಲೆ ಮೆಸ್ಸಿ ಬರೆದಿದ್ದಾರೆ. ಈಗ ಈ ಪಟ್ಟಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಮೆಸ್ಸಿ ಭಾನುವಾರ ತಡರಾತ್ರಿ ಫೈನಲ್‌ ಪಂದ್ಯವನ್ನು ಆಡಲು ಮೈದಾನಕ್ಕೆ ಇಳಿಯುತ್ತಿದ್ದಂತೆ, ಹೊಸ ದಾಖಲೆಯನ್ನು ಬರೆಯಲಿದ್ದಾರೆ.

Lionel Messi

ಅರ್ಜೆಂಟೀನಾ ತಂಡದ ಆಟಗಾರ ಮೆಸ್ಸಿ ಮೂರು ಬಾರಿ ಫೈನಲ್ ತಲುಪಿದ ತಂಡದ ಭಾಗವಾದ ದೊಡ್ಡ ದಾಖಲೆಯನ್ನು ನಿರ್ಮಿಸಲಿದ್ದಾರೆ. ಈ ಮೂಲಕ ಈ ದಾಖಲೆ ಬರೆದ ವಿಶ್ವದ ಆರನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. 2014, 2022, 2026ರಲ್ಲಿ ವಿಶ್ವಕಪ್‌ ಫೈನಲ್ ಆಡುವ ಅವಕಾಶ ಪಡೆದಿದ್ದಾರೆ. ಫಿಫಾ ವಿಶ್ವಕಪ್‌ನ ಫೈನಲ್‌ನಲ್ಲಿ ಅತಿ ಹೆಚ್ಚು ಬಾರಿ ಆಡಿದ ಆಟಗಾರರ ಪಟ್ಟಿ ಇಲ್ಲಿದೆ.

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಮ್ಯಾಜಿಕ್‌: ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಮ್ಯಾಜಿಕ್‌: ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

ಪಿಯರೆ ಲಿಟ್ಬಾಸರ್ಕಿ

ಫಿಫಾ ವಿಶ್ವಕಪ್‌ನಲ್ಲಿ ಮೂರು ಬಾರಿ ಫೈನಲ್‌ ಆಡಿದ ಆಟಗಾರರ ಪಟ್ಟಿಯಲ್ಲಿ ಜರ್ಮನಿಯ ಪಿಯರೆ ಲಿಟ್ಬಾಸರ್ಕಿ ಅವರಿಗೂ ಸ್ಥಾನ. ಇವರು 1982, 1986, 1990ರಲ್ಲಿ ಜರ್ಮನಿ ಫೈನಲ್ ಪ್ರವೇಶಿಸಿದ್ದಾಗ ತಂಡದ ಭಾಗವಾಗಿದ್ದರು.

ಲೋಥರ್ ಮ್ಯಾಥೌಸ್‌

ಜರ್ಮನಿ 1982, 1986, 1990ರಲ್ಲಿ ಫೈನಲ್‌ ಪ್ರವೇಶಿಸಿದ್ದಾಗ ಪಿಯರೆ ಲಿಟ್ಬಾಸರ್ಕಿ ಅವರೊಂದಿಗೆ ಲೋಥರ್ ಮ್ಯಾಥೌಸ್‌ ಸಹ ತಂಡದ ಭಾಗವಾಗಿದ್ದರು. ಆದರೆ ಇವರು 2 ಬಾರಿ ಮಾತ್ರ ಫೈನಲ್‌ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದರು.

ರೊನಾಲ್ಡೊ ನಜಾರಿಯೊ

ಬ್ರೆಜಿಲ್ ತಂಡ 1994ರ ಫಿಫಾ ವಿಶ್ವಕಪ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. 1998ರ ಫೈನಲ್‌ನಲ್ಲಿ ಬ್ರೆಜಿಲ್ ತಂಡ ಸೋಲು ಅನುಭವಿಸಿತ್ತು. ಅಲ್ಲದೆ 2002ರಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ರೊನಾಲ್ಡೊ ನಜಾರಿಯೊ 1994ರಲ್ಲೂ ಬ್ರೆಜಿಲ್ ತಂಡದ ಭಾಗವಾಗಿದ್ದರು. ಆದರೆ ಈ ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯ ಆಡಿರಲಿಲ್ಲ.

FIFA World Cup: ಮುಟ್ಟಿದರೆ ಮುನಿಯವ ಚೆಂಡು; ಟೂರ್ನಿಯ ರಿಯಲ್‌ ಹೀರೋ ಈ ಸ್ಮಾರ್ಟ್ ಫುಟ್ಬಾಲ್‌

FIFA World Cup: ಮುಟ್ಟಿದರೆ ಮುನಿಯವ ಚೆಂಡು; ಟೂರ್ನಿಯ ರಿಯಲ್‌ ಹೀರೋ ಈ ಸ್ಮಾರ್ಟ್ ಫುಟ್ಬಾಲ್‌

ಕಾಫು

ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಮೂರು ಫೈನಲ್ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಕಾಪು ಅವರ ಹೆಸರು ಎದ್ದು ಕಾಣುತ್ತದೆ. ಇವರು 1994, 1998, 2002ರಲ್ಲಿ ಬ್ರೆಜಿಲ್ ಪರ ವಿಶ್ವಕಪ್ ಫೈನಲ್ ಆಡಿದ್ದರು.

ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಈ ಮೆಗಾ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರ. ಇವರು ಈ ಟೂರ್ನಿಯಲ್ಲಿ 8 ಗೋಲು ಬಾರಿಸಿ ಗೋಲ್ಡನ್‌ ಬೂಟ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

Story first published: Thursday, July 16, 2026, 15:29 [IST]
Other articles published on Jul 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+