19 ವರ್ಷದ ಹಿಂದೆ ಮೆಸ್ಸಿಯಿಂದ ಸ್ನಾನ ಮಾಡಿಸಿಕೊಂಡಿದ್ದ ಮಗು, ಈಗ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾಕ್ಕೆ ಎದುರಾಳಿ
ಫಿಫಾ ವಿಶ್ವಕಪ್ ಚಾಂಪಿಯನ್ ಯಾರು ಎಂಬ ಪ್ರಶ್ನೆಗೆ ಭಾನುವಾರ ತಡ ರಾತ್ರಿ ಉತ್ತರ ಸಿಗಲಿದೆ. ಪ್ರಶಸ್ತಿ ಸುತ್ತಿಗಾಗಿ ಸ್ಪೇನ್ ಹಾಗೂ ಅರ್ಜೆಂಟೀನಾ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಫಿಫಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿವೆ. ಸ್ಪೇನ್ 16 ವರ್ಷಗಳ ಬಳಿಕ ಫೈನಲ್ ಪ್ರವೇಶ ಪಡೆದರೆ, ಅರ್ಜೆಂಟೀನಾ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದೆ. ಈ ವೇಳೆ ಸಾಮಾಜಿಕ ತಾಣದಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ.
ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಎಲ್ಲರ ಕಣ್ಣುಗಳು ಅರ್ಜೆಂಟೀನಾ ತಂಡದ ಸೂಪರ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಹಾಗೂ ಸ್ಪೇನ್‌ನ 19 ವರ್ಷದ ಆಟಗಾರ ಲ್ಯಾಮೆನ್ ಯಮಾಲ್. ಈ ಇಬ್ಬರೂ ಆಟಗಾರರ ಆಟದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಬಾರ್ಸಿಲೋನಾದ ಲಾ ಮಾಸಿಯಾ ಅಕಾಡಮಿಯ ತಾರೆಗಳು. ಈ ಇಬ್ಬರು ಖ್ಯಾತನಾಮ ಆಟಗಾರರ ಹಳೆಯ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ.

ಹಳೆಯ ಫೋಟೋದ ಕಥೆ ಏನು?
ಈ ಒಂದು ಹಳೆಯ ಫೋಟೋದಲ್ಲಿ ನೀರಿನ ಟಬ್ ಒಂದರಲ್ಲಿ ಒಂದು ಪುಟ್ಟ ಮಗು ಸ್ನಾನ ಮಾಡುತ್ತಿದೆ. ಈ ಮುಗುವಿಗೆ ತನ್ನ ಎರಡು ಕೈಗಳಿಂದ ಸ್ನಾನ ಮಾಡಿಸುತ್ತಿರುವುದನ್ನು ಕಾಣಬಹುದು. ಆ ಫೋಟೋದಲ್ಲಿರುವ ವ್ಯಕ್ತಿ ಬಿಳಿ ಬಣ್ಣದ ಫುಲ್ ಶರ್ಟ್ ಹಾಕಿಕೊಂಡು, ಉದ್ದನೆಯ ಕೂದಲು ಬಿಟ್ಟುಕೊಂಡು ಫೋಟೋಗೆ ಪೋಸ್ ನೀಡಿದ್ದರು. ಅಂದಹಾಗೆ ಆ ಫೋಟೋದಲ್ಲಿರುವ ಸ್ನಾನ ಮಾಡಿಸುವ ವ್ಯಕ್ತಿಯ ಮೆಸ್ಸಿ ಹಾಗೂ ಟಬ್‌ನಲ್ಲಿ ಕುಳಿತ ಪುಟ್ಟ ಬಾಲಕ ಲ್ಯಾಮೆನ್ ಯಮಾಲ್.
ಫೋಟೋ ತೆಗೆದಿದ್ದು ಏಕೆ?
2007ರಲ್ಲಿ ಬಾರ್ಸಿಲೋನಾದ ಸ್ಥಳೀಯ ದಿನಪತ್ರಿಕೆ ಡಿಯಾರಿಯೊ ಸ್ಫೋರ್ಟ್ ಮತ್ತು ಯುನಿಸೆಫ್ ಬಾರ್ಸಿಲೋನಾ ತಂಡದ ಆಟಗಾರರನ್ನು ಹೊಂದಿರುವ ಚಾರಿಟಿ ಕ್ಯಾಲೆಂಡರ್ ಫೋಟೋ ಶೂಟ್ ನಡೆಸಲಾಗಿತ್ತು. ಈ ಫೋಟೋ ಶೂಟ್‌ನಲ್ಲಿ ಆಗತಾನೆ ಫುಟ್ಬಾಲ್ ಲೋಕದಲ್ಲಿ ತನ್ನ ಹೆಜ್ಜೆಯ ಗುರುತುಗಳನ್ನು ಇಡಲು ಅಣಿಯಾಗಿದ್ದ 20 ವರ್ಷದ ಮೆಸ್ಸಿಗೂ ಅವಕಾಶ ಲಭಿಸಿತ್ತು.
ಟಬ್‌ನಲ್ಲಿ ಸ್ನಾನ ಮಾಡಿಸಲು ಮಗುವಿಗಾಗಿ ಲಾಟರಿ ಮೂಲಕ ನಿರ್ಧರಿಸಲಾಯಿತು. ಈ ವೇಳೆ ಸ್ಥಳೀಯ ಕುಟುಂಬಕ್ಕೆ ತಮ್ಮ ಆರು ತಿಂಗಳ ಮಗುವನ್ನು ಫೋಟೋ ಶೂಟ್‌ಗೆ ಕರೆದುಕೊಂಡು ಬರುವಂತೆ ಆಹ್ವಾನ ಸಿಕ್ಕಿತು. ಆ ಆರು ತಿಂಗಳು ಮಗುವೇ ಈಗ ಸ್ಪೇನ್ ಭವಿಷ್ಯದ ಸ್ಟಾರ್ ಫುಟ್ಬಾಲ್ ಆಟಗಾರ ಲ್ಯಾಮೆನ್ ಯಮಾಲ್. ಈ ಅಪರೂಪದ ಕ್ಷಣವನ್ನು ಅಸೋಸಿಯೇಟೆಡ್ ಪ್ರೆಸ್‌ನ ಛಾಯಾಗ್ರಾಹಕ ಜೋನ್ ಮಾನ್ ಪೋರ್ಟ್ ಸೆರೆ ಹಿಡಿದಿದ್ದರು.
ಆಗಿನ್ನು ಪ್ರಪಂಚದ ಜ್ಞಾನವೇ ಇಲ್ಲದೆ ಅಚ್ಚರಿ ಗಣ್ಣಿನಿಂದ ಏನು ನಡೆಯುತ್ತಿದೆ ಎಂದು ಟಬ್‌ನಲ್ಲಿ ಕುಳಿತು ನೋಡಿದ್ದ ಮಗು ಲ್ಯಾಮೆನ್ ಯಮಾಲ್, ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಮೆಸ್ಸಿ ಅವರಿಗೆ ಸವಾಲು ಎಸೆಯಲು ಸಿದ್ಧರಾಗಿದ್ದಾರೆ. ಮೆಸ್ಸಿ ಅವರ ಆಟವನ್ನೇ ಅನುಸರಿಸುತ್ತಾ ಬೆಳೆದ ಲ್ಯಾಮೆನ್ ಯಮಾಲ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ಆಟಗಾರ. ಲಾ ಮಾಸಿಯಾ ಅಕಾಡೆಮಿಯಲ್ಲಿ ಬೆಳೆದ ಇವರು ಸದ್ಯ ಗೋಲು ಹಾಗೂ ಅಸಿಸ್ಟ್‌ಗಳ ಸಂಖ್ಯೆ ಮೆಸ್ಸಿ 19 ವರ್ಷದಲ್ಲಿ ಮಾಡಿದ ಸಾಧನೆಗಿಂತಲೂ ಹೆಚ್ಚಿದೆ. ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಎಲ್ಲರ ಕಣ್ಣುಗಳು ಈ ಇಬ್ಬರು ಸೂಪರ್ ಸ್ಟಾರ್ ಆಟಗಾರರ ಮೇಲೆ ನೆಟ್ಟಿರಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

