ಕೊರೊನಾ ಲಕ್ಷಣಗಳೇ ಇಲ್ಲ, ಆದರೆ ಟೆಸ್ಟ್ ಫಲಿತಾಂಶ ಮಾತ್ರ ಪಾಸಿಟಿವ್!

ಲಂಡನ್, ಏಪ್ರಿಲ್ 11: ಲಿವರ್‌ಪೂಲ್ ಫುಟ್ಬಾಲ್ ದಂತಕತೆ ಕೆನ್ನಿ ಡಾಲ್‌ಗ್ಲಿಷ್‌ಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪರೀಕ್ಷೆಯ ವೇಳೆ ದೃಢಪಟ್ಟಿದೆ. ಅಚ್ಚರಿಯೆಂದರೆ ಡಾಲ್‌ಗ್ಲಿಷ್ ಕೊರೊನಾವೈರಸ್ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಎಂದು ಬಂದಿದ್ದರೂ ಅವರಲ್ಲಿ ರೋಗದ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.
69ರ ಹರೆಯದವರಾಗಿರುವ, ಸ್ಕಾಟ್ಲೆಂಡ್‌ನ ಸ್ಟ್ರೈಕರ್ ಕೆನ್ನಿ ಡಾಲ್‌ಗ್ಲಿಷ್, ಎಲ್ಟಿಕ್ ಎಫ್‌ಸಿ ಮೂಲಕ ತನ್ನ ವೃತ್ತಿ ಜೀವನ ಆರಂಭಿಸಿದ್ದರು. ಡಾಲ್‌ಗ್ಲಿಷ್ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದರಿಂದ ಅವರನ್ನು ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
'ತನಗೆ ಕೊರೊನಾವೈರಸ್ ಲಕ್ಷಣಗಳು ಕಾಣದಿದ್ದರೂ ಡಾಲ್‌ಗ್ಲಿಷ್ ಬಹಳಷ್ಟು ಸಾರಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಅನಿರೀಕ್ಷಿತವಾಗಿ ಫಲಿತಾಂಶ ಫಾಸಿಟಿವ್ ಎಂದು ಬಂದಿದೆ. ಆದರೆ ಉಳಿದಂತೆ ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ,' ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಎಲ್ಟಿಕ್‌ನಿಂದ ಲಿವರ್‌ಪೂಲ್‌ಗೆ ಸಹಿ ಮಾಡುವುದಕ್ಕೂ ಮುನ್ನ ಎಲ್ಟಿಕ್ ಪರ ಒಟ್ಟು 4 ಸೀಸನ್‌ಗಳಿಗೆ ಡಾಲ್‌ಗ್ಲಿಷ್ ಆಡಿದ್ದರು. ಲಿವರ್‌ಪೂಲ್ ಪರ 515 ಪಂದ್ಯಗಳಲ್ಲಿ 172 ಗೋಲ್‌ಗಳನ್ನು ಬಾರಿಸಿದ್ದರು. 1970ರಿಂದ 1980ರಲ್ಲಿ ಡಾಲ್‌ಗ್ಲಿಷ್ ಲಿವರ್‌ಪೂಲ್‌ನಲ್ಲಿ ಗಮನಾರ್ಹ ಆಟಗಾರನಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications