ಬೆಂಗಳೂರಲ್ಲಿ ಮ್ಯಾಂಚೆಸ್ಟರ್ ಸಿಟಿ ಎಫ್.ಸಿ.ಸಮುದಾಯ ಫುಟ್ಬಾಲ್ ಉತ್ಸವ

ಬೆಂಗಳೂರು, ಫೆಬ್ರವರಿ 21: ಹಾಲಿ ಪ್ರೀಮಿಯರ್ ಲೀಗ್ ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿ ಎಫ್‍ಸಿಯು ಬೆಂಗಳೂರಿನಲ್ಲಿ ಸಮುದಾಯ ಫುಟ್ಬಾಲ್ ಉತ್ಸವವನ್ನು ಆಯೋಜಿಸಿತ್ತು. ಸ್ಥಳೀಯ ಶಾಲೆಯೊಂದರಲ್ಲಿ ಈ ಫುಟ್ಬಾಲ್ ಉತ್ಸವ ನಡೆದಿದ್ದು, ಆಸುಪಾಸಿನ ಪ್ರದೇಶದ ಹುಡುಗರು ಹುಡುಗಿಯರು ಇದರಲ್ಲಿ ಪಾಲ್ಗೊಂಡಿದ್ದರು.
ಕ್ಲಬ್‍ನ ಸಮುದಾಯ ಕಾರ್ಯಕ್ರಮವಾಗಿರುವ ಸಿಟಿಜನ್ಸ್ ಗಿವಿಂಗ್ ಭಾಗವಾಗಿ, ಮಾಂಚೆಸ್ಟರ್ ಸಿಟಿ ಎಫ್‍ಸಿಯ ಹಲವಾರು ಪಾಲುದಾರರು ಇದಕ್ಕೆ ಬೆಂಬಲ ನೀಡಿದ್ದರು.
ಈ ಉತ್ಸವದಲ್ಲಿ ಸ್ಥಳೀಯ ಸಮುದಾಯದ ಸುಮಾರು 100 ವಿದ್ಯಾರ್ಥಿಗಳು ಪಾಲ್ಗೊಂಡು, ವಿನೋದ ಹಾಗೂ ಸಂವಾದ ಮಾದರಿಯ ಫುಟ್ಬಾಲ್ ಥೀಮ್ ಹೊಂದಿದ್ದ ಚಟುವಟಿಕೆಗಳಲ್ಲಿ ಭಾಗಿಯಾದರು.
ಅಧಿಕೃತ ಮ್ಯಾಂಚೆಸ್ಟರ್ ಸಿಟಿ ಕಮ್ಯೂನಿಟಿ ಫುಟ್ಬಾಲ್ ಕೋಚ್‍ಗಳು ಹಾಗೂ ದತ್ತಿ ಪಾಲುದಾರ ಸಂಸ್ಥೆಯಾದ ಮ್ಯಾಜಿಕ್ ಬಸ್‍ನ ಸ್ಥಳೀಯ ಯುವ ನಾಯಕರು ಇದರ ನೇತೃತ್ವ ವಹಿಸಿದ್ದರು. ಈ ಉತ್ಸವದ ಹಿನ್ನೆಲೆಯಲ್ಲಿ 18 ರಿಂದ 24 ವರ್ಷ ವಯಸ್ಸಿನೊಳಗಿನ ಯುವ ನಾಯಕರು, 3 ದಿನಗಳ ಕಾಲ ಮ್ಯಾಂಚೆಸ್ಟರ್ ಸಿಟಿ ಕೋಚ್‍ಗಳಿಂದ ತರಬೇತಿಯನ್ನು ಪಡೆದರು.
ಈ ಮೂಲಕ ತಮ್ಮ ನಾಯಕತ್ವ ಮತ್ತು ತಂಡದಲ್ಲಿ ಕೆಲಸ ಮಾಡುವ ಕೌಶಲ್ಯವನ್ನು ವೃದ್ಧಿಸಿಕೊಂಡರು ಮಾತ್ರವಲ್ಲ, ಫುಟ್ಬಾಲ್ ಸೆಷನ್‍ಗಳ ಮೂಲಕವಾಗಿ ನೀರಿನ ನೈರ್ಮಲ್ಯ ಮತ್ತು ಶುದ್ಧತೆ ಕುರಿತು ಕಲಿಸುವುದು ಹೇಗೆ ಎಂಬುದನ್ನೂ ಅರಿತುಕೊಂಡರು.

ಫುಟ್ಬಾಲ್‍ನ ಶಕ್ತಿಯನ್ನು ಸಿಟಿಜನ್ಸ್ ಗಿವಿಂಗ್ ಬಳಸಿಕೊಳ್ಳುತ್ತಿದೆ
ಜಗತ್ತಿನಾದ್ಯಂತದ ನಗರಗಳಲ್ಲಿ ತಮ್ಮ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತಿರುವ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವಂಥ ಯುವ ನಾಯಕರಿಗೆ ಬೆಂಬಲ ನೀಡಲು ಫುಟ್ಬಾಲ್‍ನ ಶಕ್ತಿಯನ್ನು ಸಿಟಿಜನ್ಸ್ ಗಿವಿಂಗ್ ಬಳಸಿಕೊಳ್ಳುತ್ತಿದೆ.
ಮ್ಯಾಂಚೆಸ್ಟರ್, ನ್ಯೂಯಾರ್ಕ್, ಫಿಲಡೆಲ್ಫಿಯಾ, ಬೀಜಿಂಗ್ ಮತ್ತು ಬೆಂಗಳೂರು ಸೇರಿದಂತೆ ವಿಶ್ವಾದ್ಯಂತದ ಮ್ಯಾಂಚೆಸ್ಟರ್ ಸಿಟಿಯ ಅಭಿಮಾನಿಗಳ ಪೈಕಿ 6 ಮಂದಿ ಸ್ವಯಂಸೇವಕರು ಈ ಗುಂಪಿಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಸಿಟಿಜನ್ಸ್ ಗಿವಿಂಗ್ ಯೋಜನೆಯನ್ನು ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಮ್ಯಾಂಚೆಸ್ಟರ್ ಸಿಟಿ ಕಳೆದ ವಾರವಿಡೀ ಪರಿಣಿತ ಅಭಿವೃದ್ಧಿ ಪಾಲುದಾರರೊಂದಿಗೆ ಕಳೆದಿದೆ.
ಅಂಥ ಪಾಲುದಾರರೆಂದರೆ - ಜಲ ತಂತ್ರಜ್ಞಾನ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಕ್ಸೈಲೆಮ್, ಮ್ಯಾಜಿಕ್ ಬಸ್ ಮತ್ತು ಪ್ಲಾನೆಟ್ ವಾಟರ್ ಫೌಂಡೇಷನ್. ಈ ಪಾಲುದಾರರ ಜತೆಗೂಡಿ ಸ್ಥಳೀಯ ಸಮುದಾಯಗಳಲ್ಲಿ ಸುಸ್ಥಿರ, ದೀರ್ಘಾವಧಿಯ ಬದಲಾವಣೆಯನ್ನು ತರುವುದೇ ನಮ್ಮ ಧ್ಯೇಯವಾಗಿದೆ.

ಕ್ಸೈಲಮ್‍ನಿಂದ ಆರ್ಥಿಕ ನೆರವು
ಕ್ಸೈಲಮ್‍ನಿಂದ ಆರ್ಥಿಕ ನೆರವು ಪಡೆದು, ಪ್ಲಾನೆಟ್ ವಾಟರ್ ನ ಆಧುನಿಕ ಜಲ ತಂತ್ರಜ್ಞಾನವನ್ನು ಬಳಸಿ, ಬೆಂಗಳೂರಿನ ಎರಡು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ವಾರದಲ್ಲಿ ಎರಡು ಪ್ರತ್ಯೇಕ ನೀರಿನ ಟವರ್‍ಗಳನ್ನು ಸ್ಥಾಪಿಸಲಾಗಿದೆ.
ಈ ನೀರಿನ ಟವರ್‍ಗಳು ಸುತ್ತಮುತ್ತಲಿನ ಸಮುದಾಯಕ್ಕೆ ದೀರ್ಘಾವಧಿಯ ಹಾಗೂ ಸುಸ್ಥಿರ ಶುದ್ಧ ನೀರನ್ನು ಒದಗಿಸಲಿದೆ. ಒಂದು ಟವರ್ ಗೆ 1,000 ಮಂದಿಯಂತೆ ಇದರ ಅನುಕೂಲತೆಯನ್ನು ಪಡೆಯಬಹುದಾಗಿದೆ.
ಸಿಟಿ ಫುಟ್ಬಾಲ್ ಗ್ರೂಪ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೆರನ್ ಸೊರಿಯಾನೋ ಮಾತನಾಡಿ, "ಸಿಟಿ ಫುಟ್ಬಾಲ್ ಗ್ರೂಪ್‍ನಲ್ಲಿರುವ ನಾವೆಲ್ಲರೂ ಸಿಟಿಜನ್ಸ್ ಗಿವಿಂಗ್ ಬಗ್ಗೆ ಅತ್ಯಂತ ಹೆಮ್ಮೆ ಪಡುತ್ತೇವೆ. ಜಗತ್ತಿನಾದ್ಯಂತ ಸಮುದಾಯ ಫುಟ್ಬಾಲ್ ಯೋಜನೆಗಳ ಮೂಲಕ ನಾವು ಮತ್ತೊಮ್ಮೆ ಭವಿಷ್ಯದಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಮತ್ತು ಫುಟ್ಬಾಲ್‍ನ ಸಾಮರ್ಥ್ಯವನ್ನು ಅತ್ಯಂತ ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಿರುವಂಥ ಯುವ ನಾಯಕರಿಗೂ ಸ್ಫೂರ್ತಿಯಾಗುತ್ತಿದ್ದೇವೆ. ಈ ಯುವಜನರಲ್ಲಿ ಅಭೂತಪೂರ್ವ ಕಥೆಗಳಿವೆ. ಅವರು ಜಗತ್ತಿನ ಅತ್ಯಂತ ಪ್ರೀತಿಪಾತ್ರ, ಮೆಚ್ಚುಗೆಯ, ಅತಿ ಹೆಚ್ಚು ಮಂದಿ ವೀಕ್ಷಿಸುವಂಥ ಮತ್ತು ಆಡುವಂಥ ಕ್ರೀಡೆಯನ್ನು ಬಳಸಿಕೊಂಡು ತಮ್ಮದೇ ಸಮುದಾಯಗಳ ಮೇಲೆ ಪ್ರಭಾವ ಬೀರುವಂಥ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸುತ್ತಿದ್ದಾರೆ.

ಮ್ಯಾನ್ ಸಿಟಿ ಕ್ಯಾಪ್ಟನ್ ವಿನ್ಸೆಂಟ್ ಕೊಂಪನಿ
ಮ್ಯಾಂಚೆಸ್ಟರ್ ಸಿಟಿ ಎಫ್.ಸಿ. ಮೆನ್ಸ್ ತಂಡದ ಕ್ಯಾಪ್ಟನ್ ಆಗಿರುವ ವಿನ್ಸೆಂಟ್ ಕೊಂಪನಿ ಮಾತನಾಡಿ, "ಸಿಟಿಜನ್ಸ್ ಗಿವಿಂಗ್ ಮುಖಾಂತರವಾಗಿ ಜಗತ್ತಿನಾದ್ಯಂತ ಇರುವಂಥ ಸಮುದಾಯಗಳಿಗೆ ಬೆಂಬಲ ನೀಡುತ್ತಿರುವುದಕ್ಕೆ ಈ ಕ್ಲಬ್ ಹೆಮ್ಮೆ ಪಡುತ್ತಿದೆ. ಈಗ ಬೆಂಗಳೂರಿನ ನಮ್ಮ ಯೋಜನೆಯು, ಯುವ ನಾಯಕರೊಂದಿಗೆ ನಮ್ಮ ಪಾಲುದಾರರು ಮತ್ತು ನಮ್ಮ ಅಭಿಮಾನಿಗಳನ್ನು ಒಂದಾಗಿಸಿ, ಫುಟ್ಬಾಲ್ ನ ಸಾಮರ್ಥ್ಯದ ಮೂಲಕ ಸುರಕ್ಷಿತ ನೀರು ಮತ್ತು ಶಿಕ್ಷಣವನ್ನು ಒದಗಿಸುವ ಕೆಲಸ ಮಾಡುತ್ತಿರುವುದು ಇನ್ನಷ್ಟು ಖುಷಿಯೆನಿಸಿದೆ" ಎಂದರು.

ಶುದ್ಧ ಕುಡಿಯುವ ನೀರಿನ ಕೊರತೆ
ಬೆಂಗಳೂರಿನ ಜನಸಂಖ್ಯೆಯು ವರ್ಷ ಕಳೆದಂತೆ ಶೇ.8ರಷ್ಟು ಏರಿಕೆಯಾಗುತ್ತಿದೆ. ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಅಗ್ಗಳಿಕೆಯೂ ಬೆಂಗಳೂರಿಗಿದೆ. ಹೀಗಿದ್ದರೂ, ಬೆಂಗಳೂರಿನ 12.3 ದಶಲಕ್ಷ ನಿವಾಸಿಗಳ ಪೈಕಿ ಬಹುತೇಕ ಮಂದಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಇದರ ಪರಿಣಾಮವಾಗಿ, ನಗರದಲ್ಲಿರುವ ಅನೇಕ ಮಕ್ಕಳು ನೀರಿನಿಂದ ಉಂಟಾಗುವಂಥ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಅವರು ಶಾಲೆಯಿಂದ ದೂರವಾಗುವಂತೆ ಮಾಡುತ್ತಿದೆ. ಹೀಗಾಗಿ, ಆ ಮಕ್ಕಳ ಶಿಕ್ಷಣದ ಮೇಲೆ ಇದು ಒಟ್ಟಾರೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಜಲ ತಂತ್ರಜ್ಞಾನದಲ್ಲಿ ಕ್ಸೈಲಮ್ ಗಿರುವ ಪರಿಣತಿ, ನೀರು ಮತ್ತು ನೈರ್ಮಲ್ಯ ಕುರಿತ ಅರಿವು ಕಾರ್ಯಕ್ರಮಗಳ ಸಂಯೋಜನೆಯ ಮೂಲಕ ಸಿಟಿಜನ್ಸ್ ಗಿವಿಂಗ್ ಯೋಜನೆಯು ಎಲ್ಲರಿಗೂ ಸುರಕ್ಷಿತ ನೀರು ಒದಗಿಸುವುದರ ಜೊತೆಗೆ, ಬೆಂಗಳೂರಿನಾದ್ಯಂತ ಸಾವಿರಾರು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications