Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮ್ಯಾನ್ಚೆಸ್ಟರ್ ಯುನೈಟೆಡ್ ಸ್ಟಾರ್ ಫುಟ್ಬಾಲರ್ ಪೌಲ್ ಪೋಗ್ಬಾಗೆ ಕೊರೊನಾ

Manchester United midfielder Paul Pogba tests positive for Covid-19

ಮ್ಯಾನ್ಚೆಸ್ಟರ್: ಮ್ಯಾನ್ಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡದ ಸ್ಟಾರ್ ಮಿಡ್‌ಫೀಲ್ಡರ್ ಪೌಲ್ ಪೋಗ್ಬಾಗೆ ಕೊರೊನಾವೈರಸ್ ಸೋಂಕು ತಗುಲಿದೆ. ಬರುವ ಭಾನುವಾರ ನೇಷನ್ಸ್ ಲೀಗ್‌ನಲ್ಲಿ ಫ್ರಾನ್ಸ್ ಮತ್ತು ಸ್ವೀಡನ್ ತಂಡಗಳಿಗೆ ಪಂದ್ಯವಿದ್ದು, ಫ್ರಾನ್ಸ್ ತಂಡ ಪೋಗ್ಬಾ ಅವರನ್ನು ಹೊರಗಿಟ್ಟಿದೆ.

'ನಾನು ಪಂದ್ಯ ಆರಂಭವಾಗಲಿರುವ ಈ ಕೊನೇ ಕ್ಷಣದಲ್ಲಿ ಆಟಗಾರನನ್ನು ಬದಲಿಸಬೇಕಿದೆ. ಯಾಕೆಂದರೆ ಪೌಲ್ ಪೋಗ್ಬಾಗೆ ಕೊರೊನಾ ಪಾಸಿಟಿವ್ ಬಂದಿದೆ. ಪರೀಕ್ಷೆಗೊಳಗಾಗಿದ್ದ ಪೋಗ್ಬಾ ಫಲಿತಾಂಶ ಪಾಸಿಟಿವ್ ಬಂದಿದೆ,' ಎಂದು ಫ್ರಾನ್ಸ್ ಮ್ಯಾನೇಜರ್ ಡಿಡಿಯರ್ ಡೆಸ್ಚಾಂಪ್ಸ್ ಎಪಿ ನ್ಯೂಸ್ ಏಜೆನ್ಸಿಗೆ ಮಾಹಿತಿ ನೀಡಿದ್ದಾರೆ.

ಫ್ರಾನ್ಸ್ ತಂಡದಲ್ಲಿದ್ದ ಪ್ರಮುಖ ಆಟಗಾರ ಪೋಗ್ಬಾ ಬದಲಿಗೆ 17ರ ಹರೆಯದ ರೆನ್ನೆಸ್ ಫುಟ್ಬಾಲರ್ ಎಡ್ವರ್ಡೊ ಕ್ಯಾಮವಿಂಗೊ ಅವರನ್ನು ಕರೆತರಲಾಗಿದೆ. ಭಾನುವಾರ ಸ್ವೀಡನ್ ಎದುರಿಸಿದ ಮೂರು ದಿನಗಳ ಬಳಿಕ ಫ್ರಾನ್ಸ್ ತಂಡ ಕ್ರೊವೇಷಿಯಾಕ್ಕೆ ಆತಿಥ್ಯ ವಹಿಸಲಿದೆ.

ಫ್ರಾನ್ಸ್ ತಂಡ ಹೀಗಿದೆ.
ಗೋಲ್‌ ಕೀಪರ್ಸ್: ಹ್ಯೂಗೋ ಲೊರಿಸ್, ಮೈಕ್ ಮೈಗ್ನಾನ್, ಸ್ಟೀವ್ ಮಂದಂಡಾ.
ಡಿಫೆಂಡರ್ಸ್: ಲ್ಯೂಕಾಸ್ ಡಿಗ್ನೆ, ಲಿಯೋ ಡುಬೋಯಿಸ್, ಲ್ಯೂಕಾಸ್ ಹೆರ್ನಾಂಡೆಜ್, ಪ್ರೆಸ್ನೆಲ್ ಕಿಂಪೆಂಬೆ, ಕ್ಲೆಮೆಂಟ್ ಲೆಂಗ್ಲೆಟ್, ಫೆರ್ಲ್ಯಾಂಡ್ ಮೆಂಡಿ, ಡಯೋಟ್ ಉಪಮೆಕಾನೊ, ರಾಫೆಲ್ ವಾರೆನೆ.
ಮಿಡ್‌ಫೀಲ್ಡರ್ಸ್: ಎಡ್ವರ್ಡೊ ಕ್ಯಾಮವಿಂಗ, ಎನ್'ಗೊಲೊ ಕಾಂಟೆ, ಸ್ಟೀವನ್ ಎನ್‌ಝೊನ್ಜಿ, ಆಡ್ರಿಯನ್ ರಾಬಿಯೊಟ್, ಮೌಸಾ ಸಿಸ್ಸೊಕೊ.
ಫಾರ್ವರ್ಡ್ಸ್‌: ಹೌಸೆಮ್ ಅವುರ್, ವಿಸ್ಸಮ್ ಬೆನ್ ಯೆಡ್ಡರ್, ಆಲಿವಿಯರ್ ಗಿರೌಡ್, ಆಂಟೊಯಿನ್ ಗ್ರಿಜ್ಮನ್, ಜೊನಾಥನ್ ಐಕೋನ್, ಆಂಥೋನಿ ಮಾರ್ಷಲ್, ಕೈಲಿಯನ್ ಎಂಬಪ್ಪೆ.

Story first published: Friday, August 28, 2020, 9:59 [IST]
Other articles published on Aug 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+