For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನಿವೃತ್ತಿ ಸುಳಿವು ನೀಡಿದ ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ!

Cristiano Ronaldo 2019.jpg

ಟ್ಯರಿನ್‌, ಆಗಸ್ಟ್‌ 21: ಜಾಗತಿಕ ಫುಟ್ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಅಮೋಘ ಫುಟ್ಬಾಲ್‌ ವೃತ್ತಿ ಬದುಕಿಗೆ ನಿವೃತ್ತಿ ಹೇಳುವ ಕುರಿತಾಗಿ ಸುಳಿವು ನೀಡಿದ್ದಾರೆ.

ಕಳೆದ ವರ್ಷ ಸ್ಪೇನ್‌ನ ದೈತ್ಯ ಕ್ಲಬ್‌ ತಂಡ ರಿಯಲ್‌ ಮ್ಯಾಡ್ರಿಡ್‌ನಿಂದ ಇಟಲಿಯ ಕ್ಲಬ್‌ ಯುವೆಂಟಸ್‌ಗೆ ಹಾರಿದ 34 ವರ್ಷದ ಅನುಭವಿ ಆಟಗಾರ ಹಾಗೂ ಪೋರ್ಚುಗಲ್‌ ರಾಷ್ಟ್ರೀಯ ತಂಡದ ನಾಯಕ ರೊನಾಲ್ಡೊ, ಮುಂದಿನ ವರ್ಷವೇ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನು ನಿವೃತ್ತಿ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೊನಾಲ್ಡೊ, "ನಿವೃತ್ತಿ ಕುರಿತಾಗಿ ಇನ್ನೂ ಆಲೋಚಿಸಿಲ್ಲ. ಆದರೆ, ಮುಂದಿನ ವರ್ಷ ನನ್ನ ವೃತ್ತಿಬದುಕು ಅಂತ್ಯಗೊಳಿಸುವ ಸಾಧ್ಯತೆ ಇದೆ. ಆದರೆ, 40-41 ವರ್ಷದ ವರೆಗೂ ವೃತ್ತಿಪರ ಫುಟ್ಬಾಲ್‌ ಆಡುವ ಸಾಮರ್ಥ್ಯ ನನ್ನಲ್ಲಿದೆ," ಎಂದು ಐದು ಬಾರಿ ಫಿಫಾ ಬಲೂನ್‌ ಡಿ'ಒರ್‌ ಪ್ರಶಸ್ತಿ ಗೆದ್ದಿರುವ ರೊನಾಲ್ಡೊ ಹೇಳಿದ್ದಾರೆ.

"ನಿಜ ಇದ್ಯಾವುದೂ ನನಗೆ ತಿಳಿದಿಲ್ಲ. ಪ್ರತಿ ಸಂದರ್ಭವನ್ನು ಆನಂದಿಸಬೇಕೆಂದಿದ್ದೇನೆ. ಇದು ಅದೃಷ್ಟವೇ ಸರಿ ಇದನ್ನು ಆನಂದಿಸುವುದನ್ನು ಮುಂದುವರಿಸುತ್ತೇನೆ," ಎಂದಿದ್ದಾರೆ.

ಫುಟ್ಬಾಲ್‌ ಜಗತ್ತಿನ ಬಹುತೇಕ ಎಲ್ಲಾ ದಾಖಲೆಗಳನ್ನು ನುಚ್ಚು ನೂರು ಮಾಡಿರುವ ರೊನಾಲ್ಡೊ, ತಮಗೆ ಸರಿಸಮನಾದ ಫುಟ್ಬಾಲ್‌ ಆಟಗಾರ ಬೇರೆ ಯಾರಾದರೂ ಇದ್ದಾರೆಯೇ ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.

"ನನಗಿಂತಲೂ ಹೆಚ್ಚು ದಾಖಲೆಗಳನ್ನು ಹೊಂದಿರುವ ಫುಟ್ಬಾಲ್‌ ಆಟಗಾರ ಯಾರಾದರೂ ಇದ್ದಾರೆಯೇ? ನನ್ನ ಪ್ರಕಾರ ನಗಿಂತಲೂ ಹೆಚ್ಚು ದಾಖಲೆಗಳನ್ನು ಹೊಂದಿರುವ ಫುಟ್ಬಾಲ್‌ ಆಟಗಾರ ಸಧ್ಯಕ್ಕಿಲ್ಲ," ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಇತ್ತೀಚೆಗೆ ಅಂತ್ಯಗೊಂಡ ಸಿರೀಸ್‌ ಎ' ಫುಟ್ಬಾಲ್‌ ಟೂರ್ನಿಯಲ್ಲಿ ಆಡಿದ 43 ಪಂದ್ಯಗಳಲ್ಲಿ ಒಟ್ಟು 28 ಗೋಲ್‌ಗಳನ್ನು ದಾಖಲಿಸಿದ ರೊನಾಲ್ಡೊ, ಯುವೆಂಟಸ್‌ ತಂಡಕ್ಕೆ ಪ್ರಶಸ್ತಿ ಗೆದ್ದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವಿಶ್ವ ಶ್ರೇಷ್ಠ ಫಾರ್ವರ್ಡ್‌ ಆಟಗಾರ ಐದು ಬಾರಿ ಚಾಂಪಿಯನ್ಸ್‌ ಟ್ರೋಫಿ ಎತ್ತಿ ಹಿಡಿದಿದ್ದಾರೆ (4 ಬಾರಿ ರಿಯಲ್‌ ಮ್ಯಾಡ್ರಿಡ್‌ ಪರ, 1 ಬಾರಿ ಮ್ಯಾಂಚೆಸ್ಟರ್‌ ಯುನೈಟೆಡ್ ಪರ). ಮೂರು ಬಾರಿ ಪ್ರೀಮಿಯರ್‌ ಲೀಗ್‌ ಮತ್ತುಎರಡು ಬಾರಿ ಲಾ ಲೀಗ ಮತ್ತೊಮ್ಮೆ ಸೀರೀಸ್‌ 'ಎ' ಟ್ರೋಫಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

Story first published: Wednesday, August 21, 2019, 20:15 [IST]
Other articles published on Aug 21, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+