Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ನಾಕೌಟ್‌ನಲ್ಲಿ ದಾಖಲೆ ಬರೆದ ಎಂಬಪ್ಪೆ; ಕ್ವಾರ್ಟರ್ ಫೈನಲ್‌ಗೆ ಫ್ರಾನ್ಸ್‌, ಮೊರಾಕೊ

ಕೈಲಿಯನ್ ಎಂಬಪ್ಪೆ ಅವರ ಸೊಗಸಾದ ಕಾಲ್ಚಳಕದ ನೆರವಿನಿಂದ ಫ್ರಾನ್ಸ್‌ ಫಿಫಾ ವಿಶ್ವಕಪ್‌ 2026ರ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಭಾನುವಾರ ನಡೆದ ರೌಂಡ್ ಆಫ್ 16 ಪಂದ್ಯದಲ್ಲಿ ಫ್ರಾನ್ಸ್‌ 1-0 ಗೋಲುಗಳೊಂದಿಗೆ ಪರಾಗ್ವೆ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಈ ಜಯದಲ್ಲಿ ಮಿಂಚಿದ ಎಂಬಪ್ಪೆ ಫಿಫಾ ವಿಶ್ವಕಪ್‌ ನಾಕೌಟ್‌ ಹಂತದಲ್ಲಿ ಅತಿ ಹೆಚ್ಚು ಗೋಲುಗಳನ್ನು ಬಾರಿಸಿದ ಹಿರಿಮೆಯನ್ನು ತನ್ನದಾಗಿಸಿಕೊಂಡರು.

ಫಿಲಡೆಲ್ಫಿಯಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ಪಂದ್ಯದಲ್ಲಿ ಸೊಗಸಾದ ಪ್ರದರ್ಶನ ನೀಡಿದ ಉಭಯ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಮೊದಲ ಅರ್ಧದಲ್ಲಿ ಎರಡೂ ತಂಡಗಳು ಗೋಲು ಬಾರಿಸುವ ಆಸೆ ಫಲಿಸಲಿಲ್ಲ. ಪರಿಣಾಮ ಪಂದ್ಯ ಮತ್ತಷ್ಟು ರೋಚಕತೆ ಹುಟ್ಟಿಸಿತ್ತು.

FIFA World Cup 2026

ಎರಡನೇ ಅವಧಿಯ ಆಟದಲ್ಲಿ ಫ್ರಾನ್ಸ್‌ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಈ ವೇಳೆ ಪರಾಗ್ವೆ ಆಟಗಾರರು ಮಾಡಿದ ತಪ್ಪು ಫ್ರಾನ್ಸ್ ತಂಡಕ್ಕೆ ವರವಾಯಿತು. ಪರಿಣಾಮ ಫ್ರಾನ್ಸ್ ತಂಡಕ್ಕೆ 70ನೇ ನಿಮಿಷದಲ್ಲಿ ಫ್ರಿ ಕಿಕ್ ಅವಕಾಶ ಲಭಿಸಿತು. ಈ ಅವಕಾಶದಲ್ಲಿ ಎಂಬಪ್ಪೆ ಗೋಲು ಬಾರಿಸಿದರು. ಫ್ರಾನ್ಸ್‌ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು.

ಪಂದ್ಯದ ಕೊನೆಯ ಹಂತದ ವರೆಗೂ ಗೋಲು ದಾಖಲಿಸುವ ಪರಾಗ್ವೆ ತಂಡದ ಆಸೆ ಫಲಿಸಲಿಲ್ಲ. ಫ್ರಾನ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಎಂಬಪ್ಪೆ ಸಾಧನೆ

ಎಂಬಪ್ಪೆ ಅವರು ಫಿಫಾ ವಿಶ್ವಕಪ್ ಇತಿಹಾಸದಲ್ಲೇ ನಾಕೌಟ್‌ ಪಂದ್ಯಗಳಲ್ಲಿ ಅತ್ಯಧಿಕ ಗೋಲು ಗಳಿಸಿದ ಆಟಗಾರ ಎಂಬ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಅವರು ಒಟ್ಟು 9 ನಾಕೌಟ್ ಪಂದ್ಯಗಳಲ್ಲಿ 10 ಗೋಲುಗಳನ್ನು ದಾಖಲಿಸಿದ್ದಾರೆ. ಇದರೊಂದಿಗೆ ಎಂಬಪ್ಪೆ ಅವರು ಬ್ರೆಜಿಲ್‌ನ ಲೆಜೆಂಡ್ ಆಟಗಾರರಾದ ರೊನಾಲ್ಡೊ (8 ಗೋಲು) ಮತ್ತು ಲಿಯೋನಿಡಾಸ್ (8 ಗೋಲು) ಅವರ ದಾಖಲೆಯನ್ನು ಹಿಂದಿಕ್ಕಿದರು.

ಮೊರಾಕೊ ಕ್ವಾರ್ಟರ್ ಫೈನಲ್‌ಗೆ

ಹೂಸ್ಟನ್ ಮೈದಾನದಲ್ಲಿ ನಡೆದ ರೌಂಡರ್ ಆಫ್‌ 16 ಪಂದ್ಯದಲ್ಲಿ ಮೊರಾಕೊ 3-0 ಕೆನಡಾ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಮೊರಾಕೊ ಕ್ವಾರ್ಟರ್ ಫೈನಲ್‌ ಹಂತಕ್ಕೆ ಪ್ರವೇಶ ಪಡೆಯಿತು.

ಮಹತ್ವದ ಪಂದ್ಯದಲ್ಲಿ ಮೊರಾಕೊ ತಂಡದ ಪರ ಅಜ್ಜೆಡಿನ್ ಔನಾಹಿ ಎರಡು ಹಾಗೂ ಸೌಫಿಯಾನೆ ರಹಿಮಿ ಒಂದು ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಕೊನೆಯ ಕ್ಷಣದವರೆಗೂ ಗೋಲು ಬಾರಿಸುವ ಆಸೆಯನ್ನು ಹೊಂದಿದ್ದ ಕೆನಡಾ ತಂಡಕ್ಕೆ ಮೊರಾಕೊ ಗೋಲ್‌ ಕೀಪರ್ ಶಾಕ್ ನೀಡಿದರು. ಕೆನಡಾ ತಂಡ ಈ ಪಂದ್ಯದಲ್ಲಿ ಸತತ ಗೋಲು ಬಾರಿಸಲು ಪ್ರಯತ್ನ ನಡೆಸಿದರೂ ಫಲ ಲಭಿಸಿಲಿಲ್ಲ.

ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿ

ಫ್ರಾನ್ಸ್‌ ಹಾಗೂ ಮೊರಾಕೊ ತಂಡಗಳು ಕ್ವಾರ್ಟರ್‌ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಬೋಸ್ಟನ್‌ ಮೈದಾನ ಸಾಕ್ಷಿಯಾಗಲಿದ್ದು, ಹೈ ವೋಲ್ಟೇಜ್ ಫೈಟ್ ಜು.10 ರಂದು ನಡೆಯಲಿದೆ.

Story first published: Sunday, July 5, 2026, 9:13 [IST]
Other articles published on Jul 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+