Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿಫಾ ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ನೋಡಲು ಈ ಇಬ್ಬರಿಗೆ ಸಿಗಲಿದೆ ಬರೋಬ್ಬರಿ 50 ಸಾವಿರ ಡಾಲರ್ ಸಂಬಳ!

ಫಿಫಾ ವಿಶ್ವಕಪ್‌ 2026 ರೋಚಕತೆ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ಈಗ ಲೀಗ್‌ ಹಂತದ ಪಂದ್ಯಗಳು ಮುಗಿಯುವ ಹಂತಕ್ಕೆ ಬಂದು ನಿಲ್ಲುತ್ತಿದ್ದು, ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ನಡೆಯಲು ವೇದಿಕೆ ಸಿದ್ಧವಾಗುತ್ತಿದೆ. ಈ ನಡುವೆ ಅಭಿಮಾನಿಗಳಿಗೆ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯವನ್ನು ನೇರವಾಗಿ ನೋಡಿ ಆನಂದಿಸುವ ಕನಸು. ಮೈದಾನದಲ್ಲಿ ಹೋಗಿ ಪಂದ್ಯವನ್ನು ನೋಡಲು ಅಭಿಮಾನಿಗಳು ಭಾರೀ ಮೊತ್ತವನ್ನು ತೆರುತ್ತಾರೆ.

ಆದರೆ ಈ ಇಬ್ಬರು ಅಭಿಮಾನಿಗಳಿಗೆ ಮಾತ್ರ ವಿಶ್ವಕಪ್‌ನ ಎಲ್ಲಾ 104 ಪಂದ್ಯಗಳನ್ನು ನೋಡುವ ಈ ಕೆಲಸಕ್ಕೆ ಒಟ್ಟು 50 ಸಾವಿರ ಡಾಲರ್ ನೀಡಲಾಗುತ್ತದೆ. ಇವರ ಕೆಲಸ ತುಂಬಾನೆ ಸಿಂಪಲ್‌ 104 ಪಂದ್ಯಗಳನ್ನು ನೋಡುವುದು. ಇವರು ಮುಖ್ಯ ವಿಶ್ವಕಪ್ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

Meet the two fans

ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನ ಹೃದಯಭಾಗದಲ್ಲಿನ ಗಾಜಿನ ಕಟ್ಟಡದಲ್ಲಿ ಇವರಿಗೆ ಪಂದ್ಯವನ್ನು ನೋಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೋಣೆಯ ಒಳಗೆ ಆರಾಮದಾಯಕ ಕುರ್ಚಿಗಳು, ಕಂದು ಚರ್ಮದ ಸೋಫಾ, ಎರಡು ದೊಡ್ಡ ಟಿವಿ ಮತ್ತು ಫುಸ್‌ಬಾಲ್ ಟೇಬಲ್ ಇವೆ. ಈ ಕೋಣೆ ಫುಟ್ಬಾಲ್‌ ಅಭಿಮಾನಿಗಳ ನೆಚ್ಚಿನ ತಾಣವಾಗಿದ್ದು, ಫ್ಲೋರಿಡಾದ ಕೆವಿನ್ ಮತ್ತು ಫಿಲಡೆಲ್ಫಿಯಾದ ಆಸ್ಟಿನ್, ಸಾವಿರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಈ ವಿಶಿಷ್ಟ ಅವಕಾಶವನ್ನು ಪಡೆದುಕೊಂಡರು.

ಸತತ ಪಂದ್ಯಗಳನ್ನು ವೀಕ್ಷಿಸುವುದು ಸವಾಲು

ವಿಶ್ವಕಪ್‌ ಇನ್ನು ಹಲವು ವಾರಗಳ ಕಾಲ ನಡೆಯುತ್ತದೆ. ಆದರಿಂದ ಇಬ್ಬರೂ ತಮ್ಮ ಕೆಲಸ ಮತ್ತು ಪಂದ್ಯಗಳನ್ನು ವೀಕ್ಷಿಸುವಲ್ಲಿ ಸಮತೋಲನ ತರಲು ಇಬ್ಬರೂ ಪ್ರಯತ್ನಿಸುತ್ತಿದ್ದಾರೆ. ಇನ್ನು ಈ ಪರಿಸ್ಥಿತಿಗೆ ಹೊಂದಿಕೊಳ್ಳುವುದನ್ನು ಕಲಿಯುತ್ತಿರುವೆ. ಸತತ ಪಂದ್ಯಗಳನ್ನು ವೀಕ್ಷಿಸುವುದರಿಂದ ಆಯಾಸವಾಗುತ್ತಿದೆ ಎಂದು ಕೆವಿನ್ ತಿಳಿಸಿದ್ದಾರೆ.

ಇನ್ನು ಫುಟ್ಬಾಲ್‌ ಪಂದ್ಯವನ್ನು ಸೋಫಾದಲ್ಲಿ ಕುಳಿತು ಪಂದ್ಯವನ್ನು ಬಿಟ್ಟು ಬಿಡದೆ ವೀಕ್ಷಿಸುವುದು ಸುಲಭದ ಕೆಲಸವಲ್ಲ. ಫುಟ್ಬಾಲ್‌ ಪಂದ್ಯಾವಳಿಗೆ ಅನುಗುಣವಾಗಿ ದೈನಂದಿನ ಕಾರ್ಯಗಳನ್ನು ಮಾಡುವುದು ಸಹ ಸವಾಲಿನ ಕೆಲಸವಾಗಿದೆ. ಅಲ್ಲದೆ 8 ಗಂಟೆ ನಿದ್ರೆ ಮಾಡಲು ಪ್ರಯತ್ನಿಸಿರುವುದಾಗಿ ಆಸ್ಟಿನ್ ತಿಳಿಸಿದ್ದಾರೆ. ಇನ್ನು ಈ ಕೆಲಸ ಮಾಡುವವರು ತಮ್ಮ ಕೆಲಸವಾದ ಮೇಲೆ ಹೊರಗಡೆ ಹೋಗಲು ಸಹ ಅವಕಾಶ ನೀಡಲಾಗಿದೆ.

ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿ

ಗಾಜಿನ ಮನೆಯಲ್ಲಿ ಕುಳಿತ ಕೆವಿನ್ ಮತ್ತು ಆಸ್ಟಿನ್ ಹಲವು ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ವಿಶ್ವ ದಾಖಲೆಯನ್ನು ನಿರ್ಮಿಸಿದ್ದನ್ನು ಈ ಇಬ್ಬರು ಗಾಜಿನ ಮನೆಯಲ್ಲಿ ಕುಳಿತು ಲೈವ್ ಆಗಿ ಕಣ್ಣುಂಬಿಕೊಂಡಿದ್ದಾರೆ. ಈ ಕೆಲಸದ ಮತ್ತೊಂದು ಪ್ರಯೋಜನವೆಂದರೆ ಇಲ್ಲಿ ಕುಳಿತಿರುವ ಕೆಲಸಗಾರರು ಆಯಾ ದೇಶದ ಖಾದ್ಯಗಳನ್ನು ಸಹ ಸವಿಯುತ್ತಾರೆ.

ವಿಶ್ವಕಪ್ ಗೆಲ್ಲುವ ಬಗ್ಗೆ ಇಬ್ಬರೂ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಕೆವಿನ್ ಸ್ಪೇನ್ ಪರ ಒಲವು ಹೊಂದಿದ್ದರೆ, ಅಲ್ಲದೆ ಯುನೈಟೆಡ್ ಸ್ಟೇಟ್ಸ್ ಮತ್ತು ಘಾನಾವನ್ನು ತಂಡಗಳ ಆಟದ ಮೇಲೂ ಒಲವಿದೆ. ಮತ್ತೊಂದೆಡೆ, ಆಸ್ಟಿನ್ ನಾರ್ವೆ ವಿಶ್ವಕಪ್ ಗೆಲ್ಲಬಹುದು ಎಂದು ಅವರು ನಂಬುತ್ತಾರೆ.

Story first published: Saturday, June 27, 2026, 15:17 [IST]
Other articles published on Jun 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+