ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮ: ಆಯೋಜಕರ ಜಾಮೀನು ನಿರಾಕರಣೆ, 14 ದಿನಗಳ ಪೊಲೀಸ್ ಕಸ್ಟಡಿಗೆ
ಫುಟ್ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಕ್ಕೆ ಆಗಮಿಸಿದ್ದ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ, ಕಾರ್ಯಕ್ರಮದ ಆಯೋಜಕ ಸತಾದ್ರು ದತ್ತ ಅವರಿಗೆ ಜಾಮೀನು ಬಿಧಾನ್‌ನಗರ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಆಯೋಜಕರನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ ಆದೇಶವನ್ನು ನೀಡಿದೆ. ಈ ಕಾರ್ಯಕ್ರಮವನ್ನು ದತ್ತಾ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಇವರ ಮೇಲೆ ಇದೆ.
ನ್ಯಾಯಾಧೀಶರ ಮುಂದೆ ಕೋಲ್ಕತ್ತಾ ಕಾರ್ಯಕ್ರಮದಲ್ಲಿ ಆದ ಘಟನೆಯನ್ನು ವಿವರಿಸಲಾಯಿತು. ಅಲ್ಲದೆ ಕಾನ್‌ಸ್ಟೆಬಲ್‌ಗಳಿಗೆ ಆದ ಗಾಯ, ಜನಸಮೂಹವನ್ನು ನಿರ್ವಹಿಸುವಲ್ಲಿ ಆದ ತೊಂದರೆಗಳನ್ನು ವಿವರಿಸಲಾಯಿತು. ಶನಿವಾರ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ದತ್ತ ಅವರನ್ನು ಪೊಲೀಸರು ಬಂಧಿಸಿದ್ದರು. ಇವರು ಮೆಸ್ಸಿ ಅವರ ತಂಡದೊಂದಿಗೆ ಹೈದರಾಬಾದ್‌ಗೆ ಹೋಗುತ್ತಿದ್ದರು.

ಡಿಸೆಂಬರ್ 13 ರಂದು ಸಾಲ್ಟ್ ಲೇಕ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಸ್ಸಿ ಕೇವಲ 20 ನಿಮಿಷ ಇದ್ದರು. ಇದರಿಂದ ದೂರದ ಊರುಗಳಿಂದ ಮೆಸ್ಸಿ ಅವರನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಜನರಿಗೆ ಬೇಸರವಾಯಿತು. ಪರಿಣಾಮ ಕ್ರೀಡಾಂಗಣಕ್ಕೆ ನುಗ್ಗಿ ವೇದಿಕೆಯನ್ನು ಧ್ವಂಸ ಮಾಡಿದರು. ಅಲ್ಲದೆ ಕ್ರೀಡಾಂಗಣದತ್ತ ಕುರ್ಚಿ ಹಾಗೂ ನೀರಿನ ಬಾಟಲಿಗಳನ್ನು ಎಸೆದು ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಅಭಿಮಾನಿಗಳು ₹4,800 ರಿಂದ ₹25,000 ವರೆಗಿನ ಟಿಕೆಟ್‌ಗಳನ್ನು ಖರೀದಿಸಿದ್ದರು. ತನಿಖೆ ಆರಂಭವಾಗಿದ್ದು, ನಿರಾಸೆಗೊಂಡ ಪ್ರೇಕ್ಷಕರಿಗೆ ಹಣವನ್ನು ಮರುಪಾತಿ ಮಾಡುವುದಾಗಿ ಡಿಜಿಪಿ ರಾಜೀವ್ ಕುಮಾರ್ ಹೇಳಿದ್ದಾರೆ.
ಸತಾದ್ರು ದತ್ತಾ ಯಾರು?
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಶ್ರಾ ನಿವಾಸಿ ಸತಾದ್ರು ದತ್ತಾ, ತಮ್ಮನ್ನು ಪ್ರಸಿದ್ಧ ಕ್ರೀಡಾ ಪ್ರವರ್ತಕ ಹಾಗೂ ಲೋಕೋಪಕಾರಿ ಎಂದು ಬಿಂಬಿಸಿಕೊಂಡಿದ್ದಾರೆ. ಅಲ್ಲದೆ ಇವರು ಸ್ಟಾರ್ ಫುಟ್ಬಾಲ್ ಆಟಗಾರರನ್ನು ಕೋಲ್ಕತ್ತಾಕ್ಕೆ ಕರೆತಂದಿದ್ದಾರೆ ಎಂದು ಇವರು ಹೇಳಿಕೊಂಡಿದ್ದಾರೆ. ಇವರ ಬಂಧನದ ಬಳಿಕ ಇವರ ಸಂಸ್ಥೆಯಾದ "ಎ ಸತಾದ್ರು ದತ್ತಾ ಇನಿಶಿಯೇಟಿವ್" ಪರಿಶೀಲನೆ ನಡೆಸಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications