Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಿಯೋನೆಲ್ ಮೆಸ್ಸಿ ಆರೋಗ್ಯದ ಬಗ್ಗೆ ಕೊನೆಗೂ ಸತ್ಯ ಬಿಚ್ಚಿಟ್ಟ ಕುಟುಂಬಸ್ಥರು

ವಿಶ್ವ ಫುಟ್‌ಬಾಲ್ ಇತಿಹಾಸದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಜೂನ್‌ 22 ರಂದು ಎರಡನೇ ಪಂದ್ಯಕ್ಕಾಗಿ ತಯಾರಿ ನಡೆಸಿದ್ದಾರೆ. ಈ ವೇಳೆ ಅವರ ಕುಟುಂಬದಿಂದ ಒಂದು ಸುದ್ದಿ ಬಂದಿದ್ದು, ಇದು ಮೆಸ್ಸಿ ಅವರ ಮುಖದಲ್ಲಿ ಚಿಂತೆಯ ಗೆರೆಗಳು ಏಳುವಂತೆ ಮಾಡಿದೆ.

ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಅವರ ತಂದೆ ಜೋರ್ಜ್ ಮೆಸ್ಸಿ ಅವರು ಪ್ರಸ್ತುತ ಗಂಭೀರ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಕಹಿ ಸತ್ಯ ಈಗ ಬಯಲಾಗಿದೆ. ಈ ಕಠಿಣ ಮತ್ತು ಸಂಕಷ್ಟದ ಸಮಯದಲ್ಲಿ ಮೆಸ್ಸಿ ಅವರ ಇಡೀ ಕುಟುಂಬವು ಆತಂಕದಲ್ಲಿದೆ.

Messi Family

ಈ ಗಂಭೀರ ಸುದ್ದಿಯ ಬೆನ್ನಲ್ಲೇ ಲಿಯೋನೆಲ್ ಮೆಸ್ಸಿ ಅವರ ಕೌಟುಂಬಿಕ ಮೂಲಗಳು ಜಂಟಿ ವರದಿಯೊಂದನ್ನು ಬಿಡುಗಡೆ ಮಾಡಿವೆ. ಸದ್ಯ 68 ವರ್ಷದ ಜೋರ್ಜ್ ಮೆಸ್ಸಿ ಅವರು ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಇವರ ಆರೋಗ್ಯದಲ್ಲಿ ದಿನೇ ದಿನೆ ಸುಧಾರಣೆ ಕಾಣುತ್ತಿದೆ ಎಂದು ಮೆಸ್ಸಿ ಕುಟುಂಬದ ಆಪ್ತರು ಬಹಿರಂಗಪಡಿಸಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸ ಬೇಡಿ..

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿ ಕುಟುಂಬಕ್ಕೆ ನೋವು ತಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕ್ರೀಡಾಪಟುಗಳ ಕೌಟುಂಬಿಕ ಆರೋಗ್ಯದ ವಿಷಯವು ತೀರಾ ವೈಯಕ್ತಿಕ ಮತ್ತು ಗೌಪ್ಯವಾಗಿ ಇಡಬೇಕಾದ ವಿಷಯವಾಗಿದೆ. ಇಂತಹ ಗಂಭೀರ ಸವಾಲಿನ ಸಮಯದಲ್ಲಿ ಸುಳ್ಳು ಸುದ್ದಿ ಹರಡುವುದು ತಪ್ಪು ಎಂದು ಕಿಡಿ ಕಾರಿದ್ದಾರೆ.

ತಮ್ಮ ಅಭಿಮಾನಿಗಳಿಗೆ ವಿಶೇಷವಾದ ಮನವಿ ಮಾಡಿಕೊಂಡಿರುವ ಲಿಯೋನೆಲ್ ಮೆಸ್ಸಿ ಹಾಗೂ ಅವರ ಕುಟುಂಬಸ್ಥರು, ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ. ಜೋರ್ಜ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕೇವಲ ಅವರ ಕುಟುಂಬ ಅಥವಾ ಸಾರ್ವಜನಿಕವಾಗಿ ಲಭ್ಯವಿರುವ ಕ್ರೀಡಾ ಮಾಧ್ಯಮಗಳನ್ನು ಮಾತ್ರವೇ ನಂಬಬೇಕು ಎಂದು ಮನವಿ ಮಾಡಲಾಗಿದೆ.

ನನಗೂ ವೈಯಕ್ತಿಕ ಸಮಸ್ಯೆಗಳು ಇವೆ

ಅಲ್ಜೀರಿಯಾ ವಿರುದ್ಧದ ಅದ್ಭುತ ಗೋಲು ಗಳಿಸಿ ಮೆಸ್ಸಿ ಕಣ್ಣೀರಿಟ್ಟಿದ್ದರು. ಮೆಸ್ಸಿ ಅವರನ್ನು ಕಂಡು ಕ್ರೀಡಾ ಲೋಕವು ಆಶ್ಚರ್ಯಚಕಿತವಾಗಿತ್ತು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಮಾತನಾಡಿದ್ದರು. ತಮಗೂ ಕ್ರೀಡೆಗೂ ಮೀರಿದ ಕೆಲವು ವೈಯಕ್ತಿಕ ಸಮಸ್ಯೆಗಳು ಇವೆ ಎಂಬ ಅರ್ಥದಲ್ಲಿ ತಿಳಿಸಿದ್ದರು.

ಮೆಸ್ಸಿ ಅವರ ಕ್ರೀಡಾ ಜೀವನದಲ್ಲಿ ಜೋರ್ಜ್ ಮೆಸ್ಸಿ ಅವರ ಪಾತ್ರ ಅತ್ಯಂತ ಮಹತ್ವದಾಗಿದೆ. ಸ್ಪೇನ್ ದೇಶದಿಂದ ಬಾರ್ಸಿಲೋನಾಗೆ ಬಾಲಕ ಮೆಸ್ಸಿಯನ್ನು ಕರೆತಂದು, ಮೆಸ್ಸಿ ಅವರ ಸಾಧನೆಗೆ ಇವರು ನೆರಳಾಗಿದ್ದಾರೆ. ಇನ್ನು ದೊಡ್ಡ ದೊಡ್ಡ ಪಂದ್ಯಗಳಲ್ಲಿ ಮೆಸ್ಸಿ ತಂದೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ತಂದೆಯ ಅನುಪಸ್ಥಿತಿಯ ಮೆಸ್ಸಿ ಅವರನ್ನು ಬಹುವಾಗಿ ಕಾಡುತ್ತಿದೆ. ತಂದೆಯ ಪ್ರೀತಿ ಮತ್ತು ಕ್ರೀಡಾ ಮಾರ್ಗದರ್ಶನದಿಂದಲೇ ಜಗತ್ತಿನ ಚಿತ್ತ ಕದ್ದಿದ್ದ ಮೆಸ್ಸಿಗೆ ಇಂತಹ ಸಮಯದಲ್ಲಿ ಕ್ರೀಡಾಂಗಣದಲ್ಲಿ ಅವರ ನೆನಪುಗಳು ಕಾಡುವುದು ಸಹಜವಾಗಿದೆ.

Story first published: Friday, June 19, 2026, 15:46 [IST]
Other articles published on Jun 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+