For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಲಿಯೋನೆಲ್‌ ಮೆಸ್ಸಿ ಪ್ರವಾಸದ ಸಂಪೂರ್ಣ ವೇಳಾಪಟ್ಟಿ: ಟಿಕೆಟ್‌ ಮಾಹಿತಿ

ವಿಶ್ವ ಫುಟ್ಬಾಲ್‌ ಲೋಕದ ಧ್ರುವತಾರೆ, ತನ್ನ ಕಾಲ್ಚಳಕದ ಆಟದಿಂದಲೇ ವಿಶ್ವದಲ್ಲಿ ಅಪಾರ ಅಭಿಮಾನಿಗಳನ್ನು ಗೆದ್ದಿರುವ ಮೋಡಿಗಾರ, ಅರ್ಜೆಂಟೀನಾ ತಂಡದ ಲಿಯೋನೆಲ್‌ ಮೆಸ್ಸಿ ಭಾರತಕ್ಕೆ ಆಗಮಿಸಲಿದ್ದಾರೆ. 14 ವರ್ಷದ ಬಳಿಕ ಭಾರಕಕ್ಕೆ ಆಗಮಿಸಲಿರುವ ಮೆಸ್ಸಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇವರ ಒಂದು ಝಲಕ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಈ ಕಾರ್ಯಕ್ರಮದ ಟಿಕೆಟ್‌ಗಳು ಮಾರಾಟ ಮಾಡಲಾಗಿದೆ.

ಮೆಸ್ಸಿಯ ಪ್ರವಾಸದ ಪ್ರಮುಖ ಅಂಶವೆಂದರೆ ಇವರು 70 ಅಡಿ ಎತ್ತರದ ಪ್ರತಿಮೆಯ ಉದ್ಘಾಟನೆ ಮಾಡಲಿದ್ದಾರೆ. ಕೋಲ್ಕತ್ತಾದ ಲೇಕ್ ಟೌನ್‌ನಲ್ಲಿರುವ ವಾಚ್‌ ಟಾವರ್ ಬಳಿ ಈ ಪ್ರತಿಮೆಯನ್ನು ಸ್ಥಾಪಿಸಿದ್ದು, ಇದರ ಉದ್ಘಾಟನೆ ಮಾಡಲಿದ್ದಾರೆ. ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ. ಲಿಯೋನೆಲ್‌ ಮೆಸ್ಸಿ ಅವರನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಲಿಯೋನೆಲ್‌ ಮೆಸ್ಸಿ ಭಾರತದಲ್ಲಿ ಭಾಗವಹಿಸಲಿರುವ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Messi India Tour Schedule statue unveiling and ticket prices

ಮೆಸ್ಸಿ ಅವರ ಕಾರ್ಯಕ್ರಮವನ್ನು ಕಣ್ಣು ತುಂಬಿಳ್ಳೊಲು ಮುಂಬೈ ನಗರವನ್ನು ಹೊರತು ಪಡಿಸಿ ಉಳಿದ ನಗರಗಳಲ್ಲಿ ಟಿಕೆಟ್‌ ದರವನ್ನು ₹4500 ನಿಗದಿಪಡಿಸಲಾಗಿದೆ. ಮುಂಬೈನಲ್ಲಿ ಈ ದರ ₹8250 ಆಗಿರಲಿದೆ.

ಡಿಸೆಂಬರ್ 13

ಬೆಳಿಗ್ಗೆ 1:30: ಕೋಲ್ಕತ್ತಾಗೆ ಆಗಮನ
ಬೆಳಿಗ್ಗೆ 9:30 ರಿಂದ 10:30 ರವರೆಗೆ: ಗಣ್ಯರ ಭೇಟಿ
ಬೆಳಿಗ್ಗೆ 10:30 ರಿಂದ 11:15 ರವರೆಗೆ: ಮೆಸ್ಸಿ ಪ್ರತಿಮೆ ಉದ್ಘಾಟನೆ (ವರ್ಚುವಲ್ )
ಬೆಳಿಗ್ಗೆ 11:15 ರಿಂದ 11:25 ರವರೆಗೆ: ಯುವ ಆಟಗಾರರನ್ನು ಭೇಟಿ ಸಾಧ್ಯತೆ
ಬೆಳಿಗ್ಗೆ 11:30: ಶಾರುಖ್ ಖಾನ್ ಭೇಟಿ
ಮಧ್ಯಾಹ್ನ 12:00: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸೌರವ್ ಗಂಗೂಲಿ ಕ್ರೀಡಾಂಗಣಕ್ಕೆ ಆಗಮನ
ಮಧ್ಯಾಹ್ನ 12:00 ರಿಂದ 12:30 ರವರೆಗೆ: ಸೌಹಾರ್ದ ಪಂದ್ಯ
ಮಧ್ಯಾಹ್ನ 2:00: ಹೈದರಾಬಾದ್‌ಗೆ ನಿರ್ಗಮನ
ರಾತ್ರಿ 7:00: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮೆಸ್ಸಿ ಕಾರ್ಯಕ್ರಮದಲ್ಲಿ ಭಾಗಿ

ಡಿಸೆಂಬರ್ 14

ಮಧ್ಯಾಹ್ನ 3:30: ಮುಂಬೈನಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಪ್ಯಾಡೆಲ್ ಕಪ್‌ನಲ್ಲಿ ಭಾಗಿ
ಸಂಜೆ 4:00: ಸೆಲೆಬ್ರಿಟಿ ಫುಟ್‌ಬಾಲ್ ಪಂದ್ಯ
ಸಂಜೆ 5:00: ವಾಂಖೆಡೆ ಕ್ರೀಡಾಂಗಣದಲ್ಲಿ ಕಾರ್ಯಕ್ರಮ, ಫ್ಯಾಷನ್ ಶೋದಲ್ಲಿ ಭಾಗಿ

ಡಿಸೆಂಬರ್ 15

ನದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ
ಮಧ್ಯಾಹ್ನ 1:30: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮದಲ್ಲಿ ಭಾಗಿ

Story first published: Friday, December 12, 2025, 17:16 [IST]
Other articles published on Dec 12, 2025
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+