ಹೈದರಾಬಾದ್‌ನಲ್ಲಿ ಮೆಸ್ಸಿ ಮೇನಿಯಾ: ರಾಹುಲ್‌ಗೆ ಜೆರ್ಸಿ ನೀಡಿದ ಮೆಸ್ಸಿ
ಫುಟ್ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಇವರು ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದರು. ಈ ವೇಳೆ ಮೆಸ್ಸಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಿದರು. ಈ ಸಮಯದಲ್ಲಿ, ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾದರು.
ಕೋಲ್ಕತ್ತಾದಲ್ಲಿ ನಡೆದ ಘಟನೆಯ ಬಳಿಕ ಹೈದರಾಬಾದ್ ಸರ್ಕಾರ ಎಚ್ಚರಿಕೆ ತೆಗೆದುಕೊಂಡಂತೆ ಕಂಡಿತು. ಕಾರ್ಯಕ್ರಮದಲ್ಲಿ ಎಲ್ಲೂ ಯಾವುದೇ ಲೋಪಗಳು ಆಗಲಿಲ್ಲ. ದಂತಕಥೆ ಆಟಗಾರ ಮೆಸ್ಸಿ ಅವರನ್ನು ಅಭಿಮಾನಿಗಳು ಕಣ್ಣು ತುಂಬಿಕೊಂಡರು. ಈ ವೇಳೆ ಮೆಸ್ಸಿ ಪ್ರದರ್ಶನಾ ಪಂದ್ಯವನ್ನು ಸಹ ಆಡಿದರು. ಮೆಸ್ಸಿ ಜೊತೆಗೆ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಜೊತೆಗಿದ್ದಾರೆ.

ಇದೇ ವೇಳೆ ಮೆಸ್ಸಿ ನೆರದ ಗಣ್ಯರನ್ನು ಮಾತನಾಡಿಸಿದರು. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮೆಸ್ಸಿ ಅರ್ಜೆಂಟೀನಾ ತಂಡದ ಜೆರ್ಸಿಯನ್ನು ಸಹ ಉಡುಗಿರೆಯಾಗಿ ನೀಡಿದರು. ರೇವಂತ್ ರೆಡ್ಡಿಗೆ ಜೆರ್ಸಿಯನ್ನು ಸಹ ಉಡುಗೊರೆಯಾಗಿ ನೀಡಿದರು. ಪ್ರದರ್ಶನ ಪಂದ್ಯದ ನಂತರ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮೆಸ್ಸಿಯನ್ನು ಸನ್ಮಾನಿಸಿದರು. ಇದರ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಪ್ರದರ್ಶನ ಪಂದ್ಯದ ಬಳಿಕ ಲಿಯೋನೆಲ್ ಮೆಸ್ಸಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ನೀವು ನೀಡುತ್ತಿರುವ ಈ ಪ್ರೀತಿಗೆ ಧನ್ಯವಾದಗಳು. ನಾನು ಇಲ್ಲಿಗೆ ಬರುವ ಮೊದಲು ಕಳೆದ ಬಾರಿ ವಿಶ್ವಕಪ್ ವೇಳೆಯ ದೃಶ್ಯಗಳನ್ನು ನೋಡಿದ್ದೇನೆ. ನಿಮ್ಮ ಸ್ನೇಹಕ್ಕೆ ಧನ್ಯವಾದಗಳು. ಭಾರತದಲ್ಲಿ ನಿಮ್ಮೊಂದಿಗೆ ಸಮಯವನ್ನು ಕಳೆದಿದ್ದು ನಮಗೆ ಗೌರವದ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications